ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಗಳ 8ನೇ ಪಟ್ಟಿಯನ್ನು ಕಾಂಗ್ರೆಸ್ ಬುಧವಾರ ರಾತ್ರಿ ಪ್ರಕಟಿಸಿದೆ. ಆದರೆ, ಉತ್ತರ ಪ್ರದೇಶದ ಅಮೇಥಿ ಹಾಗೂ ರಾಯ್ ಬರೇಲಿ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಈವರೆಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ.
ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ, ತೆಲಂಗಾಣ, ಉತ್ತರ ಪ್ರದೇಶ, ಜಾರ್ಖಂಡ್ ಹಾಗೂ ಮಧ್ಯಪ್ರದೇಶದಲ್ಲಿ ಕಣಕ್ಕಿಳಿಯುವ 14 ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಅಮೇಥಿ ಹಾಗೂ ರಾಯ್ ಬರೇಲಿ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ಅವರು ಕಳೆದ ಚುನಾವಣೆಯಲ್ಲಿ ಅಮೇಥಿಯಲ್ಲಿ ಸೋಲು ಕಂಡಿದ್ದರು. ಆದರೆ, ಅದಕ್ಕೂ ಮುನ್ನ ನಡೆದ ಸತತ ಮೂರು ಚುನಾವಣೆಗಳಲ್ಲಿ ಜಯ ಸಾಧಿಸಿದ್ದರು. ಹಾಗೆಯೇ, ರಾಯ್ ಬರೇಲಿ ಕ್ಷೇತ್ರವನ್ನು ಸೋನಿಯಾ ಗಾಂಧಿ ಅವರು 2004ರಿಂದ ಪ್ರತಿನಿಧಿಸುತ್ತಿದ್ದರು. ಈ ಬಾರಿ ಅವರು ಕಣಕ್ಕಿಳಿಯುವುದಿಲ್ಲ ಎಂದು ಘೋಷಿಸಿದ್ದಾರೆ.
ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕ ಗಾಂಧಿ ವಾದ್ರಾ ರಾಯ್ ಬರೇಲಿಯಿಂದ ಮತ್ತು ರಾಹುಲ್ ಗಾಂಧಿ ಮತ್ತೊಮ್ಮೆ ಅಮೇಥಿಯಿಂದ ಸ್ಪರ್ಧಿಸಬೇಕು ಎಂದು ಕಾರ್ಯಕರ್ತರು ಬೇಡಿಕೆ ಇಟ್ಟಿದ್ದಾರೆ.
ಛತ್ತೀಸಗಢ ಮತ್ತು ತಮಿಳುನಾಡು ಅಭ್ಯರ್ಥಿಗಳನ್ನೊಳಗೊಂಡ 7ನೇ ಪಟ್ಟಿಯನ್ನು ಕಾಂಗ್ರೆಸ್ ಮಂಗಳವಾರ ರಾತ್ರಿ ಪ್ರಕಟಿಸಿತ್ತು.
8ನೇ ಪಟ್ಟಿಯಲ್ಲಿ ಯಾರಿಗೆ ಅವಕಾಶ?
ಸದ್ಯ ಪ್ರಕಟವಾಗಿರುವ 8ನೇ ಪಟ್ಟಿಯಲ್ಲಿ ತೆಲಂಗಾಣ, ಉತ್ತರ ಪ್ರದೇಶದ ತಲಾ 4 ಹಾಗೂ ಜಾರ್ಖಂಡ್, ಮಧ್ಯಪ್ರದೇಶದ ತಲಾ 3 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.
ಉತ್ತರ ಪ್ರದೇಶ
1. ಘಾಜಿಯಾಬಾದ್: ಡಾಲಿ ಶರ್ಮಾ
2. ಬುಲಂದ್‌ಷಹರ್: ಶಿವರಾಂ ವಾಲ್ಮೀಕಿ
3. ಸೀತಾಪುರ್: ನುಕುಲ್ ದುಬೇ
4. ಮಹಾರಾಜ್‌ಗಂಜ್: ವೀರೇಂದ್ರ ಚೌಧರಿ
ತೆಲಂಗಾಣ
1. ಆದಿಲಾಬಾದ್: ಡಾ.ಸುಗುಣ ಕುಮಾರಿ ಚೆಲಿಮಾಲಾ
2. ನಿಜಾಮಬಾದ್: ಟಿ. ಜೀವನ್ ರೆಡ್ಡಿ
3. ಮೇದಕ್: ನೀಲಮ್ ಮಧು
4. ಭೋಂಗಿರ್: ಚಾಮಲ ಕಿರಣ್ ಕುಮಾರ್ ರೆಡ್ಡಿ
ಜಾರ್ಖಂಡ್
1. ಕುಂತಿ: ಕಾಳಿಚರಣ್ ಮುಂಡಾ
2. ಲೊಹರ್‌ದಾಗ: ಸುಖದೇವ್ ಭಗತ್
3. ಹಜಾರಿಭಾಗ್: ಜೈ ಪ್ರಕಾಶ್‌ಭಾಯ್ ಪಟೇಲ್
ಮಧ್ಯಪ್ರದೇಶ
1. ಗುಣಾ: ರಾವ್ ಯದವೇಂದ್ರ ಸಿಂಗ್
2. ದಾಮೋ: ತರ್ವಾರ್ ಸಿಂಗ್ ಲೋಧಿ
3. ವಿದಿಷಾ: ಪ್ರತಾಪ್ ಭಾನು ಶರ್ಮಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.