ADVERTISEMENT

ಲೋಕಸಭಾ ಚುನಾವಣೆ ಮೂರನೇ ಹಂತದ ಮತದಾನ: ಶೇ 13 ಅಭ್ಯರ್ಥಿಗಳ ವಿರುದ್ಧ ಗಂಭೀರ ಪ್ರಕರಣ

ಪಿಟಿಐ
Published 29 ಏಪ್ರಿಲ್ 2024, 21:39 IST
Last Updated 29 ಏಪ್ರಿಲ್ 2024, 21:39 IST
<div class="paragraphs"><p>ವಿದ್ಯುನ್ಮಾನ ಮತಯಂತ್ರಗಳು</p></div>

ವಿದ್ಯುನ್ಮಾನ ಮತಯಂತ್ರಗಳು

   

ನವದೆಹಲಿ: ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ನಡೆಯಲಿರುವ 12 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 95 ಕ್ಷೇತ್ರಗಳಲ್ಲಿ 1,352 ಹುರಿಯಾಳುಗಳು ಕಣದಲ್ಲಿದ್ದಾರೆ. ಈ ಪೈಕಿ ಶೇ 13ರಷ್ಟು ಅಭ್ಯರ್ಥಿಗಳು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಶೇ 29ರಷ್ಟು ಕೋಟ್ಯಧಿಪತಿಗಳಾಗಿದ್ದಾರೆ. 

ಅಭ್ಯರ್ಥಿಗಳ ಅಪರಾಧ ಹಿನ್ನೆಲೆ, ಹಣಕಾಸು, ಶಿಕ್ಷಣ, ಲಿಂಗ ಹಾಗೂ ಇತರ ವಿಷಯಗಳ ಬಗ್ಗೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ಸೋಮವಾರ ವರದಿ ಪ್ರಕಟಿಸಿದೆ.

ಮೂರನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. ಅಖಾಡದಲ್ಲಿ 123 (ಶೇ 9) ಮಹಿಳಾ ಅಭ್ಯರ್ಥಿ
ಗಳಿದ್ದಾರೆ. ತಮ್ಮ ಬಳಿ ಆಸ್ತಿ ಇಲ್ಲವೆಂದು ಐವರು ಅಭ್ಯರ್ಥಿಗಳು ಘೋಷಿಸಿಕೊಂಡಿದ್ದಾರೆ. ಇಬ್ಬರು ಅಭ್ಯರ್ಥಿಗಳು ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.