ಬೆಂಗಳೂರು: 18ನೇ ಲೋಕಸಭೆಗೆ ನಡೆಯುತ್ತಿರುವ ಚುನಾವಣೆಯ 7ನೇ ಹಾಗೂ ಕೊನೆಯ ಹಂತದ ಮತದಾನ ಕೊನೆಗೊಂಡಿದ್ದು, ಚುನಾವಣೋತ್ತರ ಸಮೀಕ್ಷೆ ನಡೆಸಿದ ವಿವಿಧ ಸಂಸ್ಥೆಗಳ ವರದಿಗಳು ಬಹಿರಂಗಗೊಂಡಿವೆ.
ಟಿವಿ9 ಪೋಲ್‌ಸ್ಟ್ರಾಟ್ ಪೀಪಲ್ಸ್ ಇನ್‌ಸೈಟ್‌ನ ಚುನಾವಣೋತ್ತರ ಸಮೀಕ್ಷೆಯು ಬಿಜೆಪಿ 18 ಸ್ಥಾನಗಳನ್ನು ಗಳಿಸಲಿದೆ ಎಂದಿದೆ.
ಒಟ್ಟು 28 ಸ್ಥಾನಗಳನ್ನು ಹೊಂದಿರುವ ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಇದರಲ್ಲಿ ಜೆಡಿಎಸ್ 2 ಸ್ಥಾನಗಳಲ್ಲಿ ಗೆಲುವ ಸಾಧ್ಯತೆ ಇದೆ. ಕಾಂಗ್ರೆಸ್ 8 ಸ್ಥಾನಗಳನ್ನು ಗೆಲ್ಲುವ ಸಂಭವವಿದೆ ಎಂದು ಈ ಸಮೀಕ್ಷೆ ಹೇಳಿದೆ.
ನ್ಯೂಸ್ 18 ನಡೆಸಿದ ಎಕ್ಸಿಟ್ ಪೋಲ್‌ನಲ್ಲಿ ಕರ್ನಾಟಕದಲ್ಲಿ ಬಿಜೆಪಿ 21ರಿಂದ 24 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ 3ರಿಂದ 7 ಸ್ಥಾನಗಳನ್ನು ಗೆಲ್ಲಲಿದೆ. ಇತರೆ ಯಾವ ಪಕ್ಷಗಳೂ ರಾಜ್ಯದಲ್ಲಿ ಗೆಲ್ಲುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಿದೆ.
ಆ್ಯಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ ಬಿಜೆಪಿ ಮೈತ್ರಿಕೂಟ 23ರಿಂದ 25 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ 3ರಿಂದ 5 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದಿದೆ.
ಇಂಡಿಯಾ ಟಿ.ವಿ.: ಬಿಜೆಪಿ– 18ರಿಂದ 22; ಜೆಡಿಎಸ್– 1ರಿಂದ 3; ಕಾಂಗ್ರೆಸ್– 4ರಿಂದ 8
ಇಂಡಿಯಾ ಟುಡೇ: ಬಿಜೆಪಿ– 20ರಿಂದ 22; ಜೆಡಿಎಸ್– 2ರಿಂದ 3; ಕಾಂಗ್ರೆಸ್– 3ರಿಂದ 5
ಪೋಲ್ ಹಬ್: ಬಿಜೆಪಿ– 21ರಿಂದ 24; ಜೆಡಿಎಸ್– 1ರಿಂದ 2; ಕಾಂಗ್ರೆಸ್– 3ರಿಂದ 7
ಸಿ– ವೋಟರ್ಸ್: ಬಿಜೆಪಿ– 23; ಜೆಡಿಎಸ್– 2; ಕಾಂಗ್ರೆಸ್– 3ರಿಂದ 5
ಪಕ್ಷಗಳು/ ಸಮೀಕ್ಷಾ ಸಂಸ್ಥೆ | ಬಿಜೆಪಿ | ಜೆಡಿಎಸ್ | ಕಾಂಗ್ರೆಸ್ |
---|---|---|---|
ಟಿವಿ9 ಪೋಲ್ ಸ್ಟ್ರಾಟ್ | 18 | 2 | 4 |
ನ್ಯೂಸ್ 18 | 21–24 | 3–7 | |
ಆ್ಯಕ್ಸಿಸ್ ಮೈ ಇಂಡಿಯಾ | 23–25 | 3–5 | |
ಇಂಡಿಯಾ ಟಿ.ವಿ. | 18–22 | 1–3 | 4–8 |
ಇಂಡಿಯಾ ಟುಡೆ | 20–22 | 2–3 | 3–5 |
ಪೋಲ್ ಹಬ್ | 21–24 | 1–2 | 3–7 |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.