ನವದೆಹಲಿ: ಹಲವಾರು ರಾಜಮನೆತಗಳ ಸದಸ್ಯರನ್ನು ಬಿಜೆಪಿಯು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಿತ್ತು. ಅವರೆಲ್ಲರೂ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್ ರಾಜಮನೆತನದ ಸದಸ್ಯ ಜ್ಯೋತಿರಾದಿತ್ಯ ಸಿಂದಿಯಾ ಅವರು ಕಾಂಗ್ರೆಸ್ ಜೊತೆಗಿನ ತಮ್ಮ 18 ವರ್ಷಗಳ ನಂಟನ್ನು ಕಡಿದುಕೊಂಡು 2020ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಗುನಾ ಕ್ಷೇತ್ರದಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಯೆದುರು ಅವರು ಭಾರಿ ಅಂತರದ ಜಯ ಸಾಧಿಸಿದ್ದಾರೆ.
ರಾಜಸ್ಥಾನದ ಢೋಲ್‌ಪುರ ರಾಜಮನೆತನದ ಅಭ್ಯರ್ಥಿ ದುಶ್ಯಂತ್ ಸಿಂಗ್ ಅವರು ಐದನೇ ಬಾರಿಗೆ ಸಂಸದರಾಗಿ ಆಯ್ಕೆ ಆಗಿದ್ದಾರೆ.
ರಾಜಸ್ಥಾನದ ರಾಜ್‌ಸಮಂದ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮೇವಾಢ್ ರಾಜಮನೆತನದ ಸದಸ್ಯೆ ಮಹಿಮಾ ಕುಮಾರಿ ಮೇವಾಢ್ ಅವರು ತಮ್ಮ ಎದುರಾಳಿ, ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 4 ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದಾರೆ.
ತ್ರಿಪುರಾದ ಎನ್‌ಡಿಎ ಅಭ್ಯರ್ಥಿ (ಟಿಪ್ರಮೋಥ ಮತ್ತು ಬಿಜೆಪಿ) ಕೃತಿ ಸಿಂಗ್ ದೇಬಬರ್ಮಾ ಅವರು 5.5 ಲಕ್ಷ ಮತಗಳ ಅಂತರದಲ್ಲಿ ಸಿಪಿಐ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ಅವರೂ ರಾಜಮನೆತನದ ಸದಸ್ಯೆ.
ಒಡಿಶಾ, ಕರ್ನಾಟಕದಲ್ಲೂ ರಾಜಮನೆತಗಳ ಸದಸ್ಯರು ಗೆಲುವು ಸಾಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.