ADVERTISEMENT

ತಮಿಳುನಾಡು: ಪರಾಭವಗೊಂಡ ಅತಿ ಶ್ರೀಮಂತ ಅಭ್ಯರ್ಥಿ

ಪಿಟಿಐ
Published 5 ಜೂನ್ 2024, 15:55 IST
Last Updated 5 ಜೂನ್ 2024, 15:55 IST
<div class="paragraphs"><p>ಅತ್ರಾಳ್ ಅಶೋಕ್ ಕುಮಾರ್</p></div>

ಅತ್ರಾಳ್ ಅಶೋಕ್ ಕುಮಾರ್

   

ಚೆನ್ನೈ: ತಮಿಳುನಾಡಿನಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಎಲ್ಲ 950 ಅಭ್ಯರ್ಥಿಗಳ ಪೈಕಿ ಅತ್ಯಂತ ಶ್ರೀಮಂತ ಅಭ್ಯರ್ಥಿ ಎನ್ನಲಾಗಿದ್ದ ಈರೋಡ್‌ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ಅತ್ರಾಳ್ ಅಶೋಕ್ ಕುಮಾರ್ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.

ಅಶೋಕ್ ಕುಮಾರ್ ಅವರು ತಮ್ಮ ಮೊದಲ ಚುನಾವಣೆಯಲ್ಲೇ ಉತ್ತಮ ಪೈಪೋಟಿಯನ್ನು ನೀಡಿದರೂ, ಡಿಎಂಕೆ ಅಲೆಯಲ್ಲಿ ಕೊಚ್ಚಿಕೊಂಡುಹೋದರು. ಡಿಎಂಕೆಯ ಕೆ.ಇ.ಪ್ರಕಾಶ್ ಅವರ ವಿರುದ್ಧ ಅಶೋಕ್ ಕುಮಾರ್ 2,36,566 ಮತಗಳ ಅಂತರದಿಂದ ಸೋಲೊಪ್ಪಿಕೊಂಡರು. 

ADVERTISEMENT

ಅಶೋಕ್ ಕುಮಾರ್ ಅವರು ₹500 ಕೋಟಿ ಆಸ್ತಿ ಘೋಷಿಸಿದ್ದರು. ಅವರು ದಿ ಇಂಡಿಯನ್ ಪಬ್ಲಿಕ್ ಸ್ಕೂಲ್ ಮತ್ತು ಅಲೆಕ್ಸ್ ಅಲಾಯ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲೀಕರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.