ADVERTISEMENT

LS Result 2024: ಮಹಾರಾಷ್ಟ್ರ, ಬಂಗಾಳ, ಯುಪಿಯಲ್ಲಿ ಬಿಜೆಪಿ ಕೈ ಹಿಡಿಯದ ಮತದಾರರು

ಏಜೆನ್ಸೀಸ್
Published 4 ಜೂನ್ 2024, 10:30 IST
Last Updated 4 ಜೂನ್ 2024, 10:30 IST
   

ನವದೆಹಲಿ: ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ಸಾಕಷ್ಟು ನಿರಾಶೆ ಅನುಭವಿಸಿದೆ.

80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶ ರಾಜ್ಯವು ಎನ್‌ಡಿಎ ಮೈತ್ರಕೂಟ ಕೇವಲ 34 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇಲ್ಲಿ ಇಂಡಿಯಾ ಕೂಟದ ಸಮಾಜವಾದಿ ಪಕ್ಷ 35 ಸ್ಥಾನಗಳಲ್ಲಿ ಮುನ್ನಡೆಯುತ್ತಿದೆ. ಕಾಂಗ್ರೆಸ್‌ 7 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.

2019ರ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಹಿನ್ನಡೆ ಅನುಭವಿಸಿದೆ.

ADVERTISEMENT

ಮಹಾರಾಷ್ಟ್ರದಲ್ಲಿ 48 ಸ್ಥಾನಗಳಿದ್ದು ಈ ಪೈಕಿ ಬಿಜೆಪಿ ಕೇವಲ 12 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮಿತ್ರಪಕ್ಷಗಳು ಕೇವಲ 7 ಸ್ಥಾನಗಳಲ್ಲಿ ಮುನ್ನಡೆಯುತ್ತಿವೆ. ಕಾಂಗ್ರೆಸ್‌ 11 ಸ್ಥಾನ, ಶಿವಸೇನೆ (ಉದ್ದವ್‌) 10, ಎನ್‌ಸಿಪಿ (ಶರದ್‌) 7 ಸ್ಥಾನಗಳಲ್ಲಿ ಮುನ್ನಡೆಯಲಿವೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 23 ಸ್ಥಾನಗಳನ್ನು ಗೆದ್ದಿತ್ತು. 

42 ಸ್ಥಾನಗಳಿರುವ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 29 ಸ್ಥಾನಗಳಲ್ಲಿ ಮುನ್ನಡೆಯುತ್ತಿದೆ. ಬಿಜೆಪಿ ಕೇವಲ 12 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಳೆದ ಸಲ ಇಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದುಕೊಂಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.