ADVERTISEMENT

ಮಣಿಪುರ:ಶೇ 50ರಷ್ಟು ಸೂಕ್ಷ್ಮ ಮತಗಟ್ಟೆ

ಪಿಟಿಐ
Published 7 ಏಪ್ರಿಲ್ 2024, 16:21 IST
Last Updated 7 ಏಪ್ರಿಲ್ 2024, 16:21 IST
ಚುನಾವಣಾ ಆಯೋಗ
ಚುನಾವಣಾ ಆಯೋಗ   

ಇಂಫಾಲ್ : ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಎರಡು ವಾರಗಳಲ್ಲಿ ಲೋಕಸಭೆ ಚುನಾವಣೆ ಎದುರಾಗಲಿದೆ. ಈ ಅವಧಿಯಲ್ಲಿ ಚುನಾವಣೆ ನಡೆಸಬೇಕಾದ ಸವಾಲಿನ ಕಾರ್ಯಕ್ಕೆ ಚುನಾವಣಾ ಆಯೋಗವೂ ಸಜ್ಜಾಗಿದೆ. 

11 ತಿಂಗಳಿಂದ ಸಂಘರ್ಷ ಪೀಡಿತ ಪ್ರದೇಶವಾಗಿರುವ ಇಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ವಿವಿಧೆಡೆ ಸ್ಥಳಾಂತರಗೊಂಡಿದ್ದಾರೆ. ಇಲ್ಲಿನ ಕೆಲ ಜನರಲ್ಲಿ ಚುನಾವಣೆ ವಿರೋಧಿ ಭಾವನೆಯೂ ಇದೆ. ಇದೆಲ್ಲದರ ಪರಿಣಾಮ ಮಣಿಪುರದಲ್ಲಿ ಚುನಾವಣಾ ಕಾವು ಏರಿಲ್ಲ. ಅಬ್ಬರದ ಪ್ರಚಾರವೂ ಇಲ್ಲವಾಗಿದೆ.

‘ಸ್ಥಳಾಂತರಗೊಂಡಿರುವ ಜನರ ಪೈಕಿ 24,500 ಮಂದಿ ಮತದಾನ ಮಾಡಲು ಅರ್ಹರಾಗಿದ್ದು, ಅವರಿಗೆ ತಮ್ಮ ಹಕ್ಕು ಚಲಾಯಿಸಲು ಅನುಕೂಲ ಆಗುವಂತೆ ಪರಿಹಾರ ಶಿಬಿರಗಳಲ್ಲಿ ವಿಶೇಷ ಮತದಾನ ವ್ಯವಸ್ಥೆಗಳನ್ನು ಮಾಡಲಾಗುತ್ತದೆ’ ಎಂದು ಮುಖ್ಯ ಚುನಾವಣಾಧಿಕಾರಿ ಪ್ರದೀಪ್‌ ಕುಮಾರ್‌ ಝಾ ಹೇಳಿದ್ದಾರೆ.

ADVERTISEMENT

‘ರಾಜ್ಯದಲ್ಲಿ ಲೋಕಸಭಾ ಚುನಾವಣೆಗಾಗಿ ಒಟ್ಟು 2,955 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಅವುಗಳಲ್ಲಿ ಸುಮಾರು ಶೇ 50ರಷ್ಟು ಮತಗಟ್ಟೆಗಳನ್ನು ಸೂಕ್ಷ್ಮ, ದುರ್ಬಲ ಅಥವಾ ನಿರ್ಣಾಯಕ ಎಂದು ಗುರುತಿಸಲಾಗಿದೆ. ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ಮತದಾನ ಮಾಡಲು ಅನುಕೂಲವಾಗಲಿ ಎಂದು 94 ವಿಶೇಷ ಮತಗಟ್ಟೆಗಳನ್ನೂ ಸ್ಥಾಪಿಸಲಾಗುತ್ತದೆ’ ಎಂದು ಅವರು ವಿವರಿಸಿದ್ದಾರೆ.

ಮಣಿಪುರದಲ್ಲಿ ಇದೇ 19 ಮತ್ತು 26ರಂದು ಎರಡು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಚುನಾವಣೆಗೆ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗುತ್ತದೆ. 200 ತುಕಡಿ (ತಲಾ 100 ಸಿಬ್ಬಂದಿ) ಅರೆಸೈನಿಕ ಪಡೆಯನ್ನು ರಾಜ್ಯಕ್ಕೆ ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.