ADVERTISEMENT

ಸ್ಪೀಕರ್ ಓಂ ಬಿರ್ಲಾ ಗೆಲುವು: 20 ವರ್ಷಗಳ ಬಳಿಕ ಎರಡನೇ ಅವಧಿಗೆ ಆಯ್ಕೆ

ಏಜೆನ್ಸೀಸ್
Published 4 ಜೂನ್ 2024, 13:08 IST
Last Updated 4 ಜೂನ್ 2024, 13:08 IST
<div class="paragraphs"><p>ಲೋಕಸಭಾ ಸ್ಪೀಕರ್ ಓಂ ಬಿರ್ಲಾ</p></div>

ಲೋಕಸಭಾ ಸ್ಪೀಕರ್ ಓಂ ಬಿರ್ಲಾ

   

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಬಿಜೆಪಿಯಿಂದ ಮರು ಆಯ್ಕೆಯಾಗಿದ್ದಾರೆ.

ಕಳೆದ 20 ವರ್ಷಗಳಲ್ಲಿ ಲೋಕಸಭೆಗೆ ಮರು ಆಯ್ಕೆಯಾದ ಸ್ಪೀಕರ್ ಇವರಾಗಿದ್ದಾರೆ. ಓಂ ಬಿರ್ಲಾ ಅವರು ಕೋಟ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಇವರು ಕಾಂಗ್ರೆಸ್‌ ಅಭ್ಯರ್ಥಿಯನ್ನು 41,139 ಮತಗಳ ಅಂತರದಿಂದ ಸೋಲಿಸಿದ್ದಾರೆ.

ADVERTISEMENT

ಈ ಹಿಂದೆ ಪಿ.ಎ. ಸಂಗ್ಮಾ ಅವರು ಎರಡನೇ ಅವಧಿಗೆ ಆಯ್ಕೆಯಾಗಿದ್ದ ಸ್ಪೀಕರ್‌ ಆಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿದ್ದ ಸಂಗ್ಮಾ ಅವರು  ಅವರು 1998ರ ಲೋಕಸಭಾ ಚುನಾವಣೆಯಲ್ಲಿ ಮೇಘಾಲಯದ ತುರಾದಿಂದ ಮರು ಆಯ್ಕೆಯಾದರು.

ಟಿಡಿಪಿಯ ಎಂ.ಸಿ ಬಾಲಯೋಗಿ, ಶಿವಸೇನಾದ ಮನೋಹರ್ ಜೋಶಿ ಹಾಗೂ ಸೋಮನಾಥ ಚಟರ್ಜಿ ಅವರು ಲೋಕಸಭೆಗೆ ಎರಡನೇ ಅವಧಿಗೆ ಆಯ್ಕೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.