ADVERTISEMENT

ಹಿಮಾಚಲ ಪ್ರದೇಶ ಸರ್ಕಾರವನ್ನು ಉರುಳಿಸುವ ಬಗ್ಗೆ ಪ್ರಧಾನಿ ಬಹಿರಂಗ ಘೋಷಣೆ: ರಾಹುಲ್

ಪಿಟಿಐ
Published 26 ಮೇ 2024, 13:58 IST
Last Updated 26 ಮೇ 2024, 13:58 IST
<div class="paragraphs"><p>ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ</p></div>

ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ

   

ಶಿಮ್ಲಾ: ಹಿಮಾಚಲ ಪ್ರದೇಶ ಸರ್ಕಾರವನ್ನು ಭ್ರಷ್ಟಾಚಾರ ಮತ್ತು ಹಣದ ಬಲದಿಂದ ಉರುಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಚುನಾವಣಾ ರ್‍ಯಾಲಿಯಲ್ಲಿ ಬಹಿರಂಗವಾಗಿ ಘೋಷಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಆರೋಪಿಸಿದರು. 

ಪ್ರಧಾನಿ ಶುಕ್ರವಾರ ರಾಜ್ಯದ ಮಂಡಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ, ಕಾಂಗ್ರೆಸ್ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಹೇಳಿದ್ದನ್ನು ರಾಹುಲ್ ಪ್ರಸ್ತಾಪಿಸಿದರು.

ADVERTISEMENT

ಹಿಮಾಚಲ ಪ್ರದೇಶದ ಉನಾದಲ್ಲಿ ಚುನಾವಣಾ ಪ್ರಚಾರ ಮಾಡಿದ ರಾಹುಲ್, ‘ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ಜಾರಿಯ ಮೂಲಕ ಸಣ್ಣ ಉದ್ಯಮಿಗಳನ್ನು ಮುಗಿಸಿದ ಮೋದಿ, ಅದಾನಿಯಂತಹವರಿಗೆ ಸಹಾಯ ಮಾಡುವ ಮೂಲಕ ನಿರುದ್ಯೋಗ ಹೆಚ್ಚಿಸುತ್ತಿದ್ದಾರೆ’ ಎಂದು ಪ್ರತಿಪಾದಿಸಿದರು. 

ನಂತರ ಸಿರ್‌ಮೌರ್‌ ಜಿಲ್ಲೆಯಲ್ಲಿ ಚುನಾವಣಾ ರ್‍ಯಾಲಿ ನಡೆಸಿದ ಅವರು, ‘ಪ್ರಧಾನಿ ಕಳೆದ 10 ವರ್ಷದಲ್ಲಿ 22 ಮಂದಿಯ ₹16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಆದರೆ, ಹಿಮಾಚಲ ಪ್ರದೇಶದ ಪ್ರವಾಹ ಸಂತ್ರಸ್ತರಿಗೆ ₹9000 ಕೋಟಿ ನೀಡಲಿಲ್ಲ’ ಎಂದು ಟೀಕಿಸಿದರು.

‘ಮೋದಿ ಪ್ರಮಾಣ ವಚನ ಸ್ವೀಕರಿಸಿದಾಗಲೆಲ್ಲ ಅದಾನಿ ಒಡೆತನದ ಕಂಪನಿಗಳ ಷೇರುಗಳ ಬೆಲೆ ಹೆಚ್ಚಾಗುತ್ತದೆ’ ಎಂದು ಆರೋಪಿಸಿದರು. 

‘ನನ್ನ ಸಹೋದರಿ ಪ್ರಿಯಾಂಕಾ ರಾಜ್ಯದ ಶಿಮ್ಲಾದಲ್ಲಿ ವಾಸ ಮಾಡುತ್ತಾಳೆ. ರಾಹುಲ್ ಮತ್ತು ಪ್ರಿಯಾಂಕಾ ನಿಮ್ಮ ಸೇನಾನಿಗಳು’ ಎಂದು ಹೇಳಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಪೆಹಲಿ ನೌಕ್ರಿ ಪಕ್ಕಿ ಅಧಿಕಾರ್’ ಯೋಜನೆ ಜಾರಿಗೊಳಿಸುವ ಮೂಲಕ ಪದವಿ ಪೂರೈಸಿದ ಪ್ರತಿಯೊಬ್ಬರಿಗೂ ಒಂದು ವರ್ಷ ಕಾಲ ಉದ್ಯೋಗದ ಖಾತರಿ ನೀಡಲಾಗುವುದು
–ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.