ADVERTISEMENT

ಹಿಮಾಚಲದಲ್ಲಿ 6 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ: ಶಾಂತಿಯುತ ಮತದಾನ 

ಪಿಟಿಐ
Published 1 ಜೂನ್ 2024, 2:50 IST
Last Updated 1 ಜೂನ್ 2024, 2:50 IST
<div class="paragraphs"><p>ಮತದಾನ</p></div>

ಮತದಾನ

   

ಶಿಮ್ಲಾ: ಹಿಮಾಚಲಪ್ರದೇಶದಲ್ಲಿ ನಾಲ್ಕು ಲೋಕಸಭಾ ಸ್ಥಾನಗಳು ಮತ್ತು ಆರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು ಶನಿವಾರ ಬೆಳಿಗ್ಗೆ ಮತದಾನ ಪ್ರಾರಂಭವಾಗಿದೆ.

ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ 37 ಮತ್ತು ಆರು ವಿಧಾನಸಭಾ ಕ್ಷೇತ್ರಗಳಿಗೆ 25 ಅಭ್ಯರ್ಥಿಗಳು ಸೇರಿದಂತೆ 62 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ADVERTISEMENT

ಲೋಕಸಭೆಗೆ ಅನುರಾಗ್ ಠಾಕೂರ್ (ಬಿಜೆಪಿ), ಆನಂದ್ ಶರ್ಮಾ (ಕಾಂಗ್ರೆಸ್), ಬಾಲಿವುಡ್ ನಟಿ ಕಂಗನಾ (ಬಿಜೆಪಿ), ವಿಕ್ರಮಾದಿತ್ಯ ಸಿಂಗ್ (ಕಾಂಗ್ರೆಸ್) ಮತ್ತು ಶಿಮ್ಲಾದ ಹಾಲಿ ಬಿಜೆಪಿ ಸಂಸದ ಸುರೇಶ್ ಕಶ್ಯಪ್ ಕಣದಲ್ಲಿದ್ದಾರೆ. 

ಆರು ವಿಧಾನಸಭಾ ಕ್ಷೇತ್ರಗಳಾದ ಸುಜಾನ್ ಪುರ, ಧರ್ಮಶಾಲ, ಲಾಹೌಲ್ ಮತ್ತು ಸ್ಪಿತಿ, ಬರ್ಸಾರ್, ಗಾಗ್ರೆಟ್ ಮತ್ತು ಕುಟ್ಲೆಹರ್ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.

ರಾಜ್ಯದಲ್ಲಿ ಕೆಲವು ಪ್ರದೇಶಗಳಲ್ಲಿ ಉಷ್ಣಾಂಶವು 40 ಡಿಗ್ರಿ ಗಡಿ ದಾಟಿರುವುದರಿಂದ ಮತದಾನ ಪ್ರಮಾಣ ಕಡಿಮೆಯಾಗಬಹುದು ಎಂಬ ಕಳವಳವನ್ನು ಕೆಲ ಅಭ್ಯರ್ಥಿಗಳು ವ್ಯಕ್ತಪಡಿಸಿದ್ದಾರೆ. 

ಬೆಳಗ್ಗೆ ಆರಂಭವಾಗಿರುವ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ ಎಂದು ಚುನಾವಣೆ ಅಧಿಕಾರಿಗಳು ಹೇಳಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.