ADVERTISEMENT

ಚಂಡೀಗಢ: ಅಮೃತ್‌ಪಾಲ್‌ಸಿಂಗ್, ಇಂದಿರಾ ಹಂತಕನ ಮಗನಿಗೆ ಜಯ

ಪಿಟಿಐ
Published 4 ಜೂನ್ 2024, 15:28 IST
Last Updated 4 ಜೂನ್ 2024, 15:28 IST
ಅಮೃತ್‌ಪಾಲ್‌ ಸಿಂಗ್‌
ಅಮೃತ್‌ಪಾಲ್‌ ಸಿಂಗ್‌   

ಚಂಡೀಗಢ: ಪ್ರತ್ಯೇಕತಾವಾದಿ ಚಳವಳಿಯ ನಾಯಕ ಮತ್ತು ಸಿಖ್ ಬೋಧಕ ಅಮೃತ್‌ಪಾಲ್ ಸಿಂಗ್ ಮತ್ತು ಪ್ರಧಾನಿ ಇಂದಿರಾ ಗಾಂಧಿ ಹಂತಕರಲ್ಲಿ ಒಬ್ಬನ ಮಗ ಸರಬ್ಜೀತ್‌ ಸಿಂಗ್‌ ಖಾಲ್ಸಾ ಲೋಕಸಭಾ ಚುನಾವಣೆಯಲ್ಲಿ ಜಯ ಗಳಿಸಿದ್ದು, ಸಂಸತ್‌ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ.

ಪಂಜಾಬ್‌ನ ಖದೂರ್ ಸಾಹಿಬ್ ಕ್ಷೇತ್ರದಿಂದ ಅಮೃತ್‌ ಪಾಲ್‌ ಸಿಂಗ್‌, ಫರೀದ್‌ಕೋಟ್‌ ಕ್ಷೇತ್ರದಿಂದ ಸರಬ್ಜೀತ್‌ ಸಿಂಗ್‌ ಖಾಲ್ಸಾ ಅವರು ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಅಮೃತ್‌ ಪಾಲ್‌ ಅವರು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಕುಲ್ಬೀರ್‌ ಸಿಂಗ್‌ ಝಿರಾ ಅವರನ್ನು 1.97 ಲಕ್ಷ ಮತಗಳಿಂದ ಸೋಲಿಸಿದ್ದಾರೆ.

ಸರಬ್ಜೀತ್‌ ಅವರು ಎಎಪಿಯ ಕರಮ್‌ಜಿತ್‌ ಸಿಂಗ್‌ ಅನ್ಮೋಲ್‌ ಅವರ ವಿರುದ್ಧ 70,000ಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.