‘ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿಯಾದರೆ ಈ 2024ರ ಲೋಕಸಭಾ ಚುನಾವಣೆಯೇ ಕೊನೆಯ ಪ್ರಜಾಸತ್ತಾತ್ಮಕ ಚುನಾವಣೆಯಾಗಲಿದೆ’ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಭಾನುವಾರ ಕೇರಳದ ತಿರುನಂತಪುರದಲ್ಲಿ ಅಭಿಪ್ರಾಯಪಟ್ಟರು. ‘ಮೋದಿ ನೇತೃತ್ವದ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ನಮಗಿರುವ ಸ್ವಾತಂತ್ರ್ಯ ಕ್ರಮೇಣ ಕ್ಷೀಣಿಸುತ್ತದೆ ಮತ್ತು ಈಗ ಇರುವ ಯಾವ ಸಂಸ್ಥೆಗಳೂ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ’ ಎಂದೂ ಹೇಳಿದರು. ‘ಮೋದಿ ಮತ್ತೆ ಗೆದ್ದರೆ ಅವರು ಸಂವಿಧಾನವನ್ನು ಬದಲಾಯಿಸುತ್ತಾರೆ. ಜಮ್ಮು ಕಾಶ್ಮೀರದಲ್ಲಿ ತಿದ್ದುಪಡಿ ತಂದಂತೆ, ಬೇರೆ ರಾಜ್ಯಗಳ ಆಡಳಿತಕ್ಕೂ ತಿದ್ದುಪಡಿ ತರುತ್ತಾರೆ. ಗವರ್ನರ್‌ಗಳ ಮೂಲಕ ಆಡಳಿತ ನಡೆಯಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.