ADVERTISEMENT

BJP ಅವಧಿಯಲ್ಲಿ ಶತ್ರು ನಾಶ; ಭ್ರಷ್ಟಾಚಾರಕ್ಕೆ ಕಡಿವಾಣ; ಅಭಿವೃದ್ಧಿಯ ಶಕೆ– ಮೋದಿ

ಪಿಟಿಐ
Published 11 ಏಪ್ರಿಲ್ 2024, 12:17 IST
Last Updated 11 ಏಪ್ರಿಲ್ 2024, 12:17 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ</p></div>

ಪ್ರಧಾನಿ ನರೇಂದ್ರ ಮೋದಿ

   

ರಿಷಿಕೇಶ(ಉತ್ತರಾಖಂಡ): ಬಲಿಷ್ಠ ಬಿಜೆಪಿ ಸರ್ಕಾರದ ನೇತೃತ್ವದಲ್ಲಿ ದೇಶದ ಭದ್ರತಾ ಪಡೆಗಳು ಶತ್ರುಗಳ ನೆಲೆಗೆ ನುಗ್ಗಿ ಉಗ್ರರನ್ನು ಸದೆಬಡಿದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಿಷಿಕೇಶದಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸುಸ್ತಿರ ಸರ್ಕಾರದಿಂದಾಗುವ ಉಪಯೋಗಗಳನ್ನು ಗಮನಿಸಿದ ದೇಶದ ಜನರು ‘ಮತ್ತೊಮ್ಮೆ ಮೋದಿ ಸರ್ಕಾರ’ ಎನ್ನುವ ಘೋಷಣೆ ಕೂಗುತ್ತಿದ್ದಾರೆ’ ಎಂದರು.

ADVERTISEMENT

ಅಸ್ಥಿರ ಸರ್ಕಾರದ ಅವಧಿಯಲ್ಲಿ ಶತ್ರುಗಳು ದುರ್ಬಲತೆಯ ಲಾಭ ಪಡೆದರು. ಇದರಿಂದ ಉಗ್ರರ ಅಟ್ಟಹಾಸ ದೆಶದೆಲ್ಲೆಡೆ ವ್ಯಾಪಿಸಿತು. ಆದರೆ ಮೋದಿ ಸರ್ಕಾರದಲ್ಲಿ ನಮ್ಮ ಯೊಧರು ಉಗ್ರರ ನೆಲೆಗೆ ನುಗ್ಗಿ ಅವರನ್ನು ಸದೆಬಡಿದಿದ್ದಾರೆ.  ಇದರೊಂದಿಗೆ ದೇಶದೊಳಗೂ ತಾಂಡವವಾಡುತ್ತಿದ್ದ ಭ್ರಷ್ಟಾಚಾರಕ್ಕೂ ನಮ್ಮ ಸರ್ಕಾರ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದೆ. ನಿಶಕ್ತ ಕಾಂಗ್ರೆಸ್‌ ಸರ್ಕಾರ ಗಡಿಯಲ್ಲಿಯೂ ಮೂಲಭೂತ ಸೌಕರ್ಯವನ್ನು ಸುಧಾರಿಸಲಿಲ್ಲ, ನಮ್ಮ ಸರ್ಕಾರ ಗಡಿಯಲ್ಲಿ ರಸ್ತೆ ಜತೆಗೆ ಆಧುನಿಕ ಸುರಂಗಗಳನ್ನೂ ನಿರ್ಮಿಸಿದೆ ಎಂದು ಪ್ರತಿಪಾದಿಸಿದರು.

ವಿಪಕ್ಷಗಳು ಒಂದು ಹೆಜ್ಜೆ ಮುಂದೆ ಹೋಗಿ  ಹಿಂದೂ ಧರ್ಮದ ಶಕ್ತಿಯ ವಿರುದ್ಧ ಸಾರ್ವಜನಿಕವಾಗಿ ಯುದ್ಧ ಘೋಷಿಸಿವೆ. ಕಾಂಗ್ರೆಸ್‌ನ ಇಂತಹ ಘೋಷಣೆಯು ಉತ್ತರಾಖಂಡದ ಸಂಸ್ಕೃತಿಯನ್ನು ನಾಶಮಾಡಲು ನಡೆಯುತ್ತಿರುವ ಪಿತೂರಿಯಾಗಿದೆ. ಜನರು ವಿರೋಧಪಕ್ಷಕ್ಕೆ ತಕ್ಕ ಉತ್ತರ ನೀಡಬೇಕೆಂದು ಮೋದಿ ವಾಗ್ದಾಳಿ ನಡೆಸಿದರು.

ಉತ್ತರಾಖಂಡ ಬ್ರಹ್ಮಕಮಲದ ತವರು. ಹೀಗಾಗಿ ಈ ಬಾರಿ ಚುನಾವಣೆಯಲ್ಲಿಯೂ ಕಮಲ ಅರಳಿಸಿ, ಎಲ್ಲಾ ಐದು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗದ್ದುಗೆ ಏರುವಂತೆ ಮಾಡಿ. ಭಾರತ ಅಭಿವೃದ್ಧಿಯ ಪಥದಲ್ಲಿ ಸಾಗಬೇಕಾದರೆ ಉತ್ತರಾಖಂಡದ ಏಳಿಗೆ ಅತ್ಯಗತ್ಯ ಎಂದು ಮತದಾರರಲ್ಲಿ ವಿನಂತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.