ADVERTISEMENT

ವಿಧಾನಸಭೆ ಚುನಾವಣೆ: ಆಘಾತಕಾರಿ ಸೋಲು, ಅಚ್ಚರಿಯ ಗೆಲುವು ಕಂಡ ನಾಯಕರ ವಿವರ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮೇ 2023, 12:58 IST
Last Updated 13 ಮೇ 2023, 12:58 IST
   

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಚುನಾವಣೆ ಫಲಿತಾಂಶ ಇಂದು (ಮೇ.13) ಪ್ರಕಟಗೊಂಡಿದೆ. ಕಾಂಗ್ರೆಸ್‌ ಸ್ಪಷ್ಟ ಬಹುಮತ ಸಾಧಿಸಿದ್ದು, ಗದ್ದುಗೆಗೆ ಏರುವ ಸಿದ್ಧತೆ ನಡೆಸಿದೆ.

ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಕಾಂಗ್ರೆಸ್‌ ಸದ್ಯ 125 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇನ್ನೂ 11 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ 58 ಸ್ಥಾನಗಳಲ್ಲಿ ಜಯ ಕಂಡಿದ್ದು, 6 ಕಡೆ ಮುನ್ನಡೆ ಕಾಯ್ದುಕೊಂಡಿದೆ. 19 ಸ್ಥಾನಗಳನ್ನು ಗೆದ್ದಿರುವ ಜೆಡಿಎಸ್‌, 1 ಕಡೆ ಮುನ್ನಡೆಯಲ್ಲಿದೆ. 4 ಸ್ಥಾನಗಳು ಇತರರ ಪಾಲಾಗಿವೆ.

224 ಸದಸ್ಯ ಬಲದ ರಾಜ್ಯ ವಿಧಾನಸಭೆಗೆ ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು.

ADVERTISEMENT

Karnataka Election Results 2023 Live

ಹಲವು ಕ್ಷೇತ್ರಗಳಲ್ಲಿ ಜಯದ ನಿರೀಕ್ಷೆಯಲ್ಲಿದ್ದ ಪ್ರಮುಖರು ಆಘಾತಕಾರಿ ಸೋಲುಕಂಡಿದ್ದಾರೆ. ಅಂತೆಯೇ, ಕೆಲವರು ಅಚ್ಚರಿಯ ಗೆಲುವು ಸಾಧಿಸಿ ಗಮನ ಸೆಳೆದಿದ್ದಾರೆ.

ಅಘಾತಕಾರಿ ಸೋಲು ಕಂಡವರು
01. ಸಿ.ಟಿ. ರವಿ (ಬಿಜೆಪಿ)
ಕ್ಷೇತ್ರ: ಚಿಕ್ಕಮಗಳೂರು
ಗೆದ್ದವರು: ಎಚ್‌.ಡಿ ತಮ್ಮಯ್ಯ (ಕಾಂಗ್ರೆಸ್‌)

02. ಪ್ರೀತಂ ಗೌಡ (ಬಿಜೆಪಿ)
ಕ್ಷೇತ್ರ: ಹಾಸನ
ಗೆದ್ದವರು: ಸ್ವರೂಪ್‌ ಪ್ರಕಾಶ್‌ (ಜೆಡಿಎಸ್‌)

03. ಜಗದೀಶ್‌ ಶೆಟ್ಟರ್‌ (ಕಾಂಗ್ರೆಸ್‌)
ಕ್ಷೇತ್ರ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌
ಗೆದ್ದವರು: ಮಹೇಶ್‌ ಟೆಂಗಿನಕಾಯಿ (ಬಿಜೆಪಿ)

04. ಕೆ.ಸುಧಾಕರ್‌ (ಬಿಜೆಪಿ)
ಕ್ಷೇತ್ರ: ಚಿಕ್ಕಬಳ್ಳಾಪುರ
ಗೆದ್ದವರು: ಪ್ರದೀಪ್‌ ಈಶ್ವರ್‌ (ಕಾಂಗ್ರೆಸ್‌)

05. ವಿ.ಸೋಮಣ್ಣ (ಬಿಜೆಪಿ)
ಕ್ಷೇತ್ರ: ವರುಣ
ಗೆದ್ದವರು: ಸಿದ್ದರಾಮಯ್ಯ (ಕಾಂಗ್ರೆಸ್‌)

ಕ್ಷೇತ್ರ: ಚಾಮರಾಜನಗರ
ಗೆದ್ದವರು: ಪುಟ್ಟರಂಗಶೆಟ್ಟಿ (ಕಾಂಗ್ರೆಸ್‌)

06. ನಿಖಿಲ್‌ ಕುಮಾರಸ್ವಾಮಿ (ಜೆಡಿಎಸ್‌) 
ಕ್ಷೇತ್ರ: ರಾಮನಗರ
ಗೆದ್ದವರು: ಇಕ್ಬಾಲ್‌ ಹಸೇನ್‌ (ಕಾಂಗ್ರೆಸ್‌)

07. ಸಿ.ಪಿ.ಯೋಗೇಶ್ವರ್‌ (ಬಿಜೆಪಿ)
ಕ್ಷೇತ್ರ: ಚನ್ನಪಟ್ಟಣ
ಗೆದ್ದವರು: ಎಚ್‌.ಡಿ.ಕುಮಾರಸ್ವಾಮಿ (ಜೆಡಿಎಸ್‌)

08. ಗೋವಿಂದ ಕಾರಜೋಳ (ಬಿಜೆಪಿ)
ಕ್ಷೇತ್ರ: ಮುಧೋಳ
ಗೆದ್ದವರು: ಟಿ.ಆರ್. ಬಾಲಪ್ಪ (ಕಾಂಗ್ರೆಸ್‌)

09. ಶ್ರೀರಾಮುಲು (ಬಿಜೆಪಿ)
ಕ್ಷೇತ್ರ: ಬಳ್ಳಾರಿ
ಗೆದ್ದವರು: ಬಿ.ನಾಗೇಂದ್ರ  (ಕಾಂಗ್ರೆಸ್‌)

10. ಮುರುಗೇಶ ನಿರಾಣಿ (ಬಿಜೆಪಿ)
ಕ್ಷೇತ್ರ: ಬೀಳಗಿ
ಗೆದ್ದವರು: ಜೆ.ಟಿ. ಪಾಟೀಲ್‌ (ಕಾಂಗ್ರೆಸ್‌)

11. ಮಾಧುಸ್ವಾಮಿ (ಬಿಜೆಪಿ)
ಕ್ಷೇತ್ರ: ಚಿಕ್ಕನಾಯಕನಹಳ್ಳಿ
ಗೆದ್ದವರು: ಸಿ.ಬಿ.ಸುರೇಶ್‌ ಬಾಬು (ಕಾಂಗ್ರೆಸ್‌)

12. ಬಿ.ಸಿ.ನಾಗೇಶ್‌ (ಬಿಜೆಪಿ)
ಕ್ಷೇತ್ರ: ತಿಪಟೂರು
ಗೆದ್ದವರು: ಕೆ.ಷಡಕ್ಷರಿ (ಕಾಂಗ್ರೆಸ್‌)

13. ನಾರಾಯಣಗೌಡ (ಬಿಜೆಪಿ)
ಕ್ಷೇತ್ರ: ಕೆ.ಆರ್‌.ಪೇಟೆ
ಗೆದ್ದವರು: ಎಚ್‌.ಟಿ.ಮಂಜು (ಜೆಡಿಎಸ್‌)

14. ಸಾ.ರಾ.ಮಹೇಶ್‌ (ಜೆಡಿಎಸ್‌)
ಕ್ಷೇತ್ರ: ಕೆ.ಆರ್‌.ಪುರ
ಗೆದ್ದವರು: ವಿಶಂಕರ್‌ ಡಿ. (ಕಾಂಗ್ರೆಸ್‌)

ಅಚ್ಚರಿಯ ಗೆಲುವು ಸಾಧಿಸಿದವರು
01. ಲತಾ ಮಲ್ಲಿಕಾರ್ಜುನ್‌ (ಪಕ್ಷೇತರ)
ಕ್ಷೇತ್ರ: ಹರಪನಹಳ್ಳಿ
ಸೋತವರು: ಕರುಣಾಕರ ರೆಡ್ಡಿ (ಬಿಜೆಪಿ)

02. ವಿನಯ ಕುಲಕರ್ಣಿ (ಕಾಂಗ್ರೆಸ್‌)
ಕ್ಷೇತ್ರ: ಧಾರವಾಡ
ಕ್ಷೇತ್ರ: ಅಮೃತ ಅಯ್ಯಪ್ಪ ದೇಸಾಯಿ (ಬಿಜೆಪಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.