ಚಿಕ್ಕೋಡಿ: ಚಿಕ್ಕೋಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರ ಒಟ್ಟು ಆಸ್ತಿ ₹21.62 ಕೋಟಿ. ಕಳೆದ ವರ್ಷಕ್ಕೆ ಹೋಲಿಸಿದರೆ ₹85 ಲಕ್ಷ ಹೆಚ್ಚಾಗಿದೆ. ಆದರೆ, ಅವರ ಪತ್ನಿ, ಶಾಸಕಿ ಶಶಿಕಲಾ ಜೊಲ್ಲೆ ಅವರ ಆಸ್ತಿ ₹39.04 ಕೋಟಿ ಕಡಿಮೆ ಆಗಿದೆ.
ಕಳೆದ ವರ್ಷದ ವಿಧಾಸನಭಾ ಚುನಾವಣೆ ವೇಳೆ ಶಶಿಕಲಾ ಒಟ್ಟು ₹68.58 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದರು. ಈಗ ಅವರ ಪತಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ₹29.54 ಕೋಟಿ ಮಾತ್ರವಿದೆ. ಈ ಬಾರಿ ದಂಪತಿ ತಮ್ಮ ಒಬ್ಬ ಪುತ್ರ ಹಾಗೂ ಸೊಸೆಯ ಆಸ್ತಿ ವಿಭಜಿಸಿ, ₹1 ಲಕ್ಷ ಎಂದು ತೋರಿಸಿದ್ದಾರೆ. ಇನ್ನೊಬ್ಬ ಪುತ್ರ ಹಾಗೂ ಸೊಸೆಯ ಆಸ್ತಿ ತೋರಿಸಿಲ್ಲ.
ಅಣ್ಣಾಸಾಹೇಬ ಅವರು ₹5.83 ಕೋಟಿ ಚರಾಸ್ತಿ ಮತ್ತು ₹15.79 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ₹67.68 ಲಕ್ಷ ಮೌಲ್ಯದ 5 ಕಾರು ಮತ್ತು 3 ದ್ವಿಚಕ್ರ ವಾಹನಗಳಿವೆ.
ಅಭ್ಯರ್ಥಿಯ ಹೆಸರು; ಅಣ್ಣಾಸಾಹೇಬ ಜೊಲ್ಲೆ
ಪಕ್ಷ; ಬಿಜೆಪಿ
ಒಟ್ಟು ಆಸ್ತಿಯ ಮೌಲ್ಯ; ₹21.62 ಕೋಟಿ
ನಗದು; ₹1.25 ಲಕ್ಷ
ಒಟ್ಟು ಚರಾಸ್ತಿ; ₹5.83 ಕೋಟಿ
ಸ್ಥಿರಾಸ್ತಿ; ₹15.79 ಕೋಟಿ
ವಾಹನ; 5 ಕಾರು, 3 ದ್ವಿಚಕ್ರವಾಹನ. ₹67.68 ಲಕ್ಷ ಮೌಲ್ಯ
ಚಿನ್ನ, ಬೆಳ್ಳಿ; ₹1.08 ಕೋಟಿ
ಸಾಲ; ₹12.40 ಕೋಟಿ
ಅಪರಾಧ ಪ್ರಕರಣ; ಇಲ್ಲ
ಒಟ್ಟು ಆಸ್ತಿಯ ಮೌಲ್ಯ; ₹29.54 ಕೋಟಿ
ನಗದು: ₹1.10 ಲಕ್ಷ
ಒಟ್ಟು ಚರಾಸ್ತಿ; ₹4.12 ಕೋಟಿ
ಸ್ಥಿರಾಸ್ತಿ; ₹25.42 ಕೋಟಿ
ವಾಹನ; ಇಲ್ಲ
ವಜ್ರ, ಚಿನ್ನ, ಬೆಳ್ಳಿ; ₹86.61 ಲಕ್ಷ
ಸಾಲ; ₹9.54 ಕೋಟಿ
ಅಪರಾಧ ಪ್ರಕರಣ: ಇಲ್ಲ
ಮಗ– ಸೊಸೆ ಬಳಿ ₹1 ಲಕ್ಷದಷ್ಟು ಆಸ್ತಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.