ಮೈಸೂರು: ಬಿಜೆಪಿ, ಜೆಡಿಎಸ್‌ನ ಹಲವು ಮುಖಂಡರ ಕಾಂಗ್ರೆಸ್ ಸೇರ್ಪಡೆ ಜಾಹೀರಾತಿನಲ್ಲಿ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಫೋಟೊ ಬಳಸಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲು ಬಿಜೆಪಿ ಮುಂದಾಗಿದೆ.
ಬಿಜೆಪಿ ಮುಖಂಡ ಎಚ್.ವಿ. ರಾಜೀವ್ ಬುಧವಾರ ಕಾಂಗ್ರೆಸ್ ಸೇರುತ್ತಿದ್ದು, ಈ ಸಂಬಂಧ ಕೆಲವು ಮಾಧ್ಯಮಗಳಿಗೆ ನೀಡಲಾದ ಜಾಹೀರಾತಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಫೋಟೊ ಪಕ್ಕದಲ್ಲೇ ಸೋಮಶೇಖರ್ ಫೋಟೊವನ್ನು ಬಳಸಲಾಗಿದೆ. ವೇದಿಕೆ ಕಾರ್ಯಕ್ರಮದ ಪೋಸ್ಟರ್‌ಗಳಲ್ಲೂ ಅವರ ಫೋಟೊ ಇದೆ ಎನ್ನಲಾಗಿದೆ. ಇದು ಸ್ಥಳೀಯ ಬಿಜೆಪಿ ಮುಖಂಡರ ಸಿಟ್ಟಿಗೆ ಕಾರಣವಾಗಿದೆ.
‘ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮಕ್ಕೆ ತಮ್ಮ ಫೋಟೊ ಬಳಸಿಕೊಳ್ಳಲು ಸೋಮಶೇಖರ್ ಒಪ್ಪಿರುವ ಖಾತ್ರಿ ಇಲ್ಲ. ಅವರ ಅನುಮತಿ ಇಲ್ಲದೇ ಬಳಸುವುದು ತಪ್ಪಾಗುತ್ತದೆ. ಆ ಮೂಲಕ ಕೆಟ್ಟ ಸಂದೇಶ ರವಾನಿಸಲು ಎಚ್.ರಾಜೀವ್ ಮುಂದಾಗಿದ್ದಾರೆ’ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಟೀಕಿಸಿದರು.
ನಗರದಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ ಅವರು ‘ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.