ADVERTISEMENT

ಮೋದಿ ವಿರುದ್ಧ ಹೇಳಿಕೆ: ಸಚಿವ ತಂಗಡಗಿ ಮನೆಗೆ ಬಿಜೆಪಿ ಕಾರ್ಯಕರ್ತರ ಮುತ್ತಿಗೆ ಯತ್ನ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 14:18 IST
Last Updated 26 ಮಾರ್ಚ್ 2024, 14:18 IST
<div class="paragraphs"><p>ಬಿಜೆಪಿ ಕಾರ್ಯಕರ್ತರು</p></div>

ಬಿಜೆಪಿ ಕಾರ್ಯಕರ್ತರು

   

ಪ್ರಜಾವಾಣಿ ಚಿತ್ರ

ಕಾರಟಗಿ (ಕೊಪ್ಪಳ ಜಿಲ್ಲೆ): ‘ಯುವಕರಿಗೆ ಎರಡು ಕೋಟಿ ಉದ್ಯೋಗ ಕೊಡುವುದಾಗಿ ಹೇಳಿ ಪ್ರಧಾನಿ ನರೇಂದ್ರ ಮೋದಿ ಮಾತು ತಪ್ಪಿದ್ದಾರೆ. ಈಗಲೂ ಯುವಕರು ಹಾಗೂ ವಿದ್ಯಾರ್ಥಿಗಳು ಮೋದಿ ಮೋದಿ ಎಂದರೆ ಅವರನ್ನು ಕಪಾಳಕ್ಕೆ ಹೊಡೆಯಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಸಚಿವರ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು. ತಂಗಡಗಿ ನಿವಾಸಕ್ಕೆ ಮುತ್ತಿಗೆ ಹಾಕುವ ಯತ್ನ ಮಾಡಿದರಾದರೂ ಪೊಲೀಸರು ಅವಕಾಶ ಕೊಡಲಿಲ್ಲ.

ಶಿವರಾಜ ತಂಗಡಗಿಯನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು ಎಂಬ ಘೋಷಣೆ ಕೂಗುತ್ತಾ, ಭಿತ್ತಿಪತ್ರ ಹಿಡಿದು ಮಾಜಿ ಶಾಸಕ ಬಸವರಾಜ ದಢೇಸೂಗೂರ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ನವಲಿ ರಸ್ತೆಯ ಮೂಲಕ ಕನಕದಾಸ ವೃತ್ತಕ್ಕೆ ಆಗಮಿಸಿ ಸಭೆಯಾಗಿ ಮಾರ್ಪಟ್ಟಿತು.

ಶಿವರಾಜ್ ತಂಗಡಗಿ

ಪಕ್ಷದ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಮರೇಶ ರೈತನಗರ, ಜಿಲ್ಲಾಧ್ಯಕ್ಷ ಮೌನೇಶ ದಢೇಸೂಗೂರು, ಮಂಡಲ ಅಧ್ಯಕ್ಷರಾದ ಮಂಜುನಾಥ ಮಸ್ಕಿ, ಜಡಿಯಪ್ಪ ಮುಕ್ಕುಂದಿ, ಗಂಗಾವತಿ ಎಪಿಎಂಸಿ ಮಾಜಿ ಅಧ್ಯಕ್ಷ ದುರ್ಗಾರಾವ್, ಮುಖಂಡರಾದ ನಾಗರಾಜ್ ಬಿಲ್ಗಾರ್ ಮಾತನಾಡಿ ‘ತಂಗಡಗಿ ಪ್ರಚೋದನಾಕಾರಿ ಹೇಳಿಕೆ ನೀಡಿ ಪ್ರಧಾನಿ ಮೋದಿ ಹಾಗೂ ಯುವಕರನ್ನು ಅವಮಾನ ಮಾಡಿ ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿದ್ದಾರೆ. ನಾವು ಮೋದಿ ಎನ್ನುತ್ತೇವೆ. ಅದು ಹೇಗೆ ನಮ್ಮನ್ನು ತಡೆಯುತ್ತೀರಿ ನೋಡೋಣ’ ಎಂದು ಸವಾಲು ಹಾಕಿದರು.

‘ಅತ್ಯುನ್ನತ ಹುದ್ದೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರೇ ಸಂಸ್ಕೃತಿ ಹೀನ ಭಾಷೆಯನ್ನು ಬಳಸಿದರೆ ಹೇಗೆ?’ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯೆಕ್ತಪಡಿಸಿದರು. ತಂಗಡಗಿಯನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಅರಿಕೇರಿ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಅರ್ಜುನ್ ರಾಯ್ಕರ್, ಕೋಶಾಧ್ಯಕ್ಷ ಆಂಜನೇಯ ಬೂದಗುಂಪಾ, ಕಾರಟಗಿ ಯುವ ಮೋರ್ಚಾ ಅಧ್ಯಕ್ಷ ಜಿ. ಶರಣಬಸವರೆಡ್ಡಿ, ಕಾರಟಗಿ ಶಕ್ತಿ ಕೇಂದ್ರದ ಅಧ್ಯಕ್ಷ ಬಸವರಾಜ ಎತ್ತಿನಮನಿ, ಪುರಸಭೆ ಸದಸ್ಯರಾದ ಆನಂದ ಮ್ಯಾಗಳಮನಿ, ಬಸವರಾಜ ಕೊಪ್ಪದ, ರಾಜಶೇಖರ ಸಿರಿಗೇರಿ, ವಿವಿಧ ಘಟಕಗಳ ಪದಾಧಿಕಾರಿಗಳಾದ ಶಿವಶರಣೇಗೌಡ ಯರಡೋಣ, ರತ್ನಕುಮಾರಿ, ದೇವರಾಜ ನಾಯಕ, ಸುರೇಶ ಬೆನ್ನೂರ, ಶರಣಪ್ಪ ಶಿವಪೂಜೆ, ಆದಿಲ್ ಪಾಶಾ, ಪ್ರಿಯಾ ಪವಾರ್, ರವಿಸಿಂಗ್ ವಕೀಲ, ಮಂಜುನಾಥ ಹೊಸಕೇರಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.