ADVERTISEMENT

ಕಾಂಗ್ರೆಸ್‌ನಿಂದ ಮುಸ್ಲಿಮರ ರಕ್ಷಣೆ; ದೇಶದ ಸಂಸ್ಕೃತಿ ಮೋದಿಯಿಂದ ಉಳಿವು: ಮುತಾಲಿಕ್

‘ಮೋದಿ ಗೆಲ್ಲಿಸಿ ಭಾರತ ಉಳಿಸಿ‘ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2024, 15:21 IST
Last Updated 22 ಮಾರ್ಚ್ 2024, 15:21 IST
<div class="paragraphs"><p>ಬನಹಟ್ಟಿಯಲ್ಲಿ ನಡೆದ ಮೋದಿ ಗೆಲ್ಲಿಸಿ ಭಾರತ ಉಳಿಸಿ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಘಟಕದ ಅಧ್ಯಕ್ಷ ಪ್ರಮೋದ ಮುತಾಲಿಕ್ ಮಾತನಾಡಿದರು</p></div>

ಬನಹಟ್ಟಿಯಲ್ಲಿ ನಡೆದ ಮೋದಿ ಗೆಲ್ಲಿಸಿ ಭಾರತ ಉಳಿಸಿ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಘಟಕದ ಅಧ್ಯಕ್ಷ ಪ್ರಮೋದ ಮುತಾಲಿಕ್ ಮಾತನಾಡಿದರು

   

ರಬಕವಿ ಬನಹಟ್ಟಿ: ‘ಹಿಂದೂಗಳಿಗಾಗಿ ಹಿಂದೂ ರಾಷ್ಟ್ರ ಉಳಿಸಿಕೊಳ್ಳುವುದು ಅಗತ್ಯವಾಗಿದೆ. ಪ್ರಧಾನಿ ಮೋದಿ ದೇಶದ ಸುರಕ್ಷತೆ, ಅಭಿವೃದ್ಧಿಗಾಗಿ ರಜೆ ಪಡೆಯದೇ ಸೇವೆ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರನ್ನು ದೇಶದ ಪ್ರಧಾನಿಯನ್ನಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಘಟಕದ ಅಧ್ಯಕ್ಷ ಪ್ರಮೋದ ಮುತಾಲಿಕ್ ತಿಳಿಸಿದರು.

ಇಲ್ಲಿನ ಈಶ್ವರಲಿಂಗ ಮೈದಾನದಲ್ಲಿ ಗುರುವಾರ ಶ್ರೀರಾಮ ಸೇನೆ ಹಮ್ಮಿಕೊಂಡಿದ್ದ ‘ಮೋದಿ ಗೆಲ್ಲಿಸಿ ಭಾರತ ಉಳಿಸಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ADVERTISEMENT

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಸ್ಲಿಂ ಕಿಡಗೇಡಿಗಳು ಮತ್ತು ದೇಶ ದ್ರೋಹಿಗಳು ಹೆಚ್ಚಾಗುತ್ತಿದ್ದು, ಕಾಂಗ್ರೆಸ್ ಸರ್ಕಾರ ಅವರ ರಕ್ಷಣೆ ಮಾಡುತ್ತಿದೆ’ ಎಂದರು.

‘2014 ರ ಮುಂಚಿನ ಭಾರತ ಮತ್ತು 2014ರ ನಂತರದ ಭಾರತದಲ್ಲಿ ಸಾಕಷ್ಟು ಬದಲಾವಣೆ ಮತ್ತು ಪರಿವರ್ತನೆಗಳಾಗಿವೆ. ಪಾಕಿಸ್ತಾನ ಇಂದು ವಿಶ್ವದ ವಿವಿಧ ದೇಶಗಳಿಂದ ಭಿಕ್ಷೆ ಬೇಡುತ್ತಿದೆ. ಪ್ರತಿ ಹಳ್ಳಿಯಲ್ಲಿ ಜನರು ಈ ಬಾರಿ ಮೋದಿ ಅವರನ್ನು ಗೆಲ್ಲಿಸುವುದಾಗಿ ನಿಶ್ಚಯ ಮಾಡಿದ್ದಾರೆ’ ಎಂದು ತಿಳಿಸಿದರು.

ಮೈಗೂರಿನ ಶಿವಾನಂದ ಮಠದ ಗುರುಪ್ರಸಾದ ಸ್ವಾಮೀಜಿ ಮಾತನಾಡಿ, ‘ಮೋದಿಯಿಂದಾಗಿ ಭಾರತ ಇಂದು ವಿಶ್ವದ ಶ್ರೇಷ್ಠ ರಾಷ್ಟ್ರಗಳಲ್ಲಿ ಒಂದಾಗಿದೆ. ದೇಶದ ಸಂಸ್ಕೃತಿ, ಸಂಸ್ಕಾರ ಮೋದಿಯಿಂದ ಮಾತ್ರ ಉಳಿಯಲು ಸಾಧ್ಯ. ಪುಕ್ಕಟೆಗಳಿಗೆ ಆಸೆ ಪಡದೆ ದೇಶ ಕಟ್ಟಲು ಶ್ರಮಿಸುತ್ತಿರುವ ಮೋದಿ ಅವರಿಗೆ ಆಡಳಿತ ನೀಡಬೇಕ’ ಎಂದರು.

ಶ್ರೀರಾಮ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಗಂಗಾಧಾರ ಕುಲಕರ್ಣಿ, ಬಾಗಲಕೋಟೆ ಜಿಲ್ಲೆಯ ಬಿಜೆಪಿ ಒಬಿಸಿ ಮೋರ್ಚಾ ಘಟಕದ ಅಧ್ಯಕ್ಷ ಶಿವಾನಂದ ಗಾಯಕವಾಡ ಮಾತನಾಡಿದರು.

ಕಿರಣಕುಮಾರ ದೇಸಾಯಿ, ಧರೆಪ್ಪ ಉಳ್ಳಾಗಡ್ಡಿ, ಶ‍್ರೀಶೈಲ ಬೀಳಗಿ, ಸುಭಾಸ ಚೋಳಿ, ಸಂಜಯ ತೆಗ್ಗಿ, ಶ್ರೀಶೈಲ ದಲಾಲ, ಸುರೇಶ ಅಕ್ಕಿವಾಟ, ಮಹಾಂತೇಶ ಹಿಟ್ಟಿನಮಠ, ಯಮನಪ್ಪ ಕೋರಿ, ಪ್ರವೀಣ ಚುಬಚಿ ಸೇರಿದಂತೆ ಶ್ರೀರಾಮ ಸೇನೆಯ ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.