ADVERTISEMENT

ಸಿದ್ದರಾಮಯ್ಯ ಬಳಿ ಹಣವಿದ್ದಿದ್ದರೆ ಇ.ಡಿ, ಐ.ಟಿ ಬಿಡುತ್ತಿರಲಿಲ್ಲ: ಬೈರತಿ ಸುರೇಶ್‌

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 12:20 IST
Last Updated 18 ಏಪ್ರಿಲ್ 2024, 12:20 IST
ಬೈರತಿ ಸುರೇಶ್‌ 
ಬೈರತಿ ಸುರೇಶ್‌    

ಕೋಲಾರ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ನಿತ್ಯ ಬಿಜೆಪಿ, ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಅವರು ಆಸ್ತಿ ಮಾಡಿದ್ದರೆ, ಹಣ ಹೊಡೆದ್ದಿದ್ದರೆ ಮೋದಿ, ಬಿಜೆಪಿಯರು, ಇ.ಡಿ, ಐ.ಟಿ, ಸಿಬಿಐನವರು ಬಿಡುತ್ತಿರಲಿಲ್ಲ. ಪ್ರಾಮಾಣಿಕ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನೇ ಬಿಟ್ಟಿಲ್ಲ’ ಎಂದು ಸಚಿವ ಬೈರತಿ ಸುರೇಶ್‌ ಹೇಳಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ಹಾಲಿಸ್ಟರ್‌ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕುರುಬ ಸಮುದಾಯದವರ ಸಭೆಯಲ್ಲಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ ಬಳಿ 200ರಿಂದ 300 ಶರ್ಟ್, ಪಂಚೆಗಳಿವೆ ಅಷ್ಟೇ. ಒಂದೂ ಕಪ್ಪು ಚುಕ್ಕೆ ಇಲ್ಲದೆ ರಾಜಕಾರಣ‌ ಮಾಡಿರುವ ಏಕೈಕ ವ್ಯಕ್ತಿ. ಅವರಂಥ ನಾಯಕತ್ವ ಉಳಿಸುವುದು ಎಲ್ಲರ ಕರ್ತವ್ಯ. ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದು ವಿರೋಧ ಪಕ್ಷದವರು ಏನೇನೋ ಮಾಡುತ್ತಿದ್ದಾರೆ‌’ ಎಂದರು.

ADVERTISEMENT

‘ಎರಡನೇ ಬಾರಿ ಹಣ, ಆಮಿಷ ನೀಡಿ‌ ಮುಖ್ಯಮಂತ್ರಿ ಆದವರು ಬೇರೆ ಪಕ್ಷಗಳಲ್ಲಿ ಇದ್ದಾರೆ. ಧೈರ್ಯ, ನಾಯಕತ್ವ, ಸ್ವಂತ ಶ್ರಮದಿಂದ ಮುಖ್ಯಮಂತ್ರಿ ಆಗುವುದು ಬೇರೆ. ಸಿದ್ದರಾಮಯ್ಯ ನಿಷ್ಠಾವಂತ, ಧೈರ್ಯವಂತ ರಾಜಕಾರಣಿ. ಜಿಲ್ಲಾ ಪಂಚಾಯಿತಿ ಸದಸ್ಯರೋ, ಕಾರ್ಪೊರೇಟ್‌ ಆದವರು ಸಿದ್ದರಾಮಯ್ಯ ಅವರಿಗಿಂತ ಹೆಚ್ಚು ಹಣ ಮಾಡಿಕೊಂಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.