ರಾಣೆಬೆನ್ನೂರು( ಹಾವೇರಿ ಜಿಲ್ಲೆ): ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಹನುಮಂತಪ್ಪ ಕಬ್ಬಾರ ಅವರು ಚುನಾವಣೆಗೆ ಹಣ ಠೇವಣಿ ಇಡಲು ತಾವು 5 ವರ್ಷಗಳಿಂದ ಕೂಡಿಟ್ಟ ₹10 ಸಾವಿರ ಮೌಲ್ಯದ ನಾಣ್ಯಗಳನ್ನು ತಂದಿದ್ದರು.
ಇದನ್ನು ಎಣಿಸಲು ಚುನಾವಣೆ ಸಿಬ್ಬಂದಿ ಹೈರಾಣಾದ ಘಟನೆ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ನಡೆಯಿತು. ‘ನಾನೊಬ್ಬ ಬಡ ರೈತ, ಕೂಲಿ ನಾಲಿಯಿಂದ ಬಂದ ಹಣವನ್ನು ಕಳೆದ 5 ವರ್ಷಗಳಿಂದ ಸಂಗ್ರಹಿಸಿಟ್ಟಿದ್ದೇನೆ. ಠೇವಣಿ ಇಡಲು ನನ್ನ ಹತ್ತಿರ ಗರಿ ಗರಿ ನೋಟಿಲ್ಲ. ಇದ್ದ ಚಿಲ್ಲರೆ ಹಣ ತಂದಿದ್ದೇನೆ’ ಎಂದು ಎಎಪಿ ಅಭ್ಯರ್ಥಿ ಹನುಮಂತಪ್ಪ ಕಬ್ಬಾರ ಹೇಳಿದಾಗ ಚುನಾವಣೆ ಸಿಬ್ಬಂದಿ ನಗೆಗಡಲಲ್ಲಿ ತೇಲಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.