ಬೆಂಗಳೂರು: ಜಯನಗರ ವಿಧಾನಸಭೆ ಕ್ಷೇತ್ರದ ಫಲಿತಾಂಶ ಹಲವು ಅಡೆತಡೆಗಳನ್ನು ಮೀರಿ ತಡರಾತ್ರಿ ಪ್ರಕಟಗೊಂಡಿತು. ಬಿಜೆಪಿಯ ಸಿ.ಕೆ. ರಾಮಮೂರ್ತಿ ಅವರು ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ವಿರುದ್ಧ 16 ಮತಗಳಿಂದ ವಿಜಯ ಸಾಧಿಸಿದರು.
ಮರು ಎಣಿಕೆ ಪ್ರಕ್ರಿಯೆಯಲ್ಲಾದ ಗೊಂದಲದಿಂದ ತಡರಾತ್ರಿಯವರೆಗೂ ಫಲಿತಾಂಶ ಘೋಷಣೆಯಾಗಿರಲಿಲ್ಲ. ಮೂರು ಬಾರಿ ಮತ ಎಣಿಕೆ ಮಾಡಲಾಯಿತು. ಅಧಿಕಾರಿಗಳ ಈ ಮರು ಎಣಿಕೆಯನ್ನು ಕಾಂಗ್ರೆಸ್ ಮುಖಂಡರು ಒಪ್ಪದೇ ಗೊಂದಲ ಸೃಷ್ಟಿಯಾಗಿತ್ತು.
ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಮತ್ತು ನಾಯಕರು ತಮ್ಮದೇ ವಾದ ಮಂಡಿಸಿ ಅವರಂತೆಯೇ ಫಲಿತಾಂಶ ಘೋಷಣೆಯಾಗಬೇಕೆಂದು ಒತ್ತಾಯಿಸಿದರು.
ಜಯನಗರ ಮತ ಎಣಿಕೆ ಕೇಂದ್ರಕ್ಕೆ ಬಂದ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು ಮತ ಎಣಿಕೆ ಕೇಂದ್ರದಲ್ಲಿ ಅಧಿಕಾರಿಗಳು ಮರು ಎಣಿಕೆ ಸಂದರ್ಭದಲ್ಲಿ ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದರು. ನಂತರ ಬಿಜೆಪಿ ಗೆಲುವನ್ನು ನಿರ್ಧರಿಸಲಾಯಿತು. ಸಿ.ಕೆ. ರಾಮಮೂರ್ತಿ ಅವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.