ಮೂಡಲಗಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಅರಭಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಬುಧವಾರ ತಮ್ಮ ನಾಮಪತ್ರ ಸಲ್ಲಿಸಿದರು.
ಕೆಲವೇ ಜನರೊಂದಿಗೆ ಇಲ್ಲಿನ ತಹಶೀಲ್ದಾರ್ ಕಚೇರಿಗೆ ಬಂದ ಅವರು ಬೆಳಿಗ್ಗೆ 11ಕ್ಕೆ ಉಮೇದುವಾರಿಕೆ ಪತ್ರಗಳನ್ನು ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಅವರಿಗೆ ಸಲ್ಲಿಸಿದರು.
ಪ್ರಭಾ ಶುಗರ್ ನಿರ್ದೇಶಕ ಬಸಗೌಡ ಪಾಟೀಲ, ಕೆಂಚನಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಡಾ.ರಾಜೇಂದ್ರ ಸಣ್ಣಕ್ಕಿ, ಶಂಕರ ಬಿಲಕುಂದಿ ಇದ್ದರು.
ಆಸ್ತಿ ₹16.34 ಕೋಟಿ ಹೆಚ್ಚಳ
ಬಾಲಚಂದ್ರ ಜಾರಕಿಹೊಳಿ ಅವರ ಆಸ್ತಿ ಐದು ವರ್ಷಗಳಲ್ಲಿ ₹16.34 ಕೋಟಿ ಹೆಚ್ಚಳವಾಗಿದೆ. 2018ರ ಚುನಾವಣೆಯಲ್ಲಿ ₹19.35 ಕೋಟಿ ಆಸ್ತಿಯನ್ನು ತೋರಿಸಿದ್ದ ಅವರು, ಈ ಸಲ ₹35.69 ಕೋಟಿ ತೋರಿಸಿದ್ದಾರೆ.
ಅವರ ಬಳಿ ₹8.55 ಲಕ್ಷ ನಗದು ಇದೆ. ₹1.50 ಕೋಟಿ ಠೇವಣಿಗಳಿವೆ. ಬ್ಯಾಂಕಿನಲ್ಲಿ ₹62.15 ಲಕ್ಷ ಉಳಿತಾಯ, ₹34.45 ಲಕ್ಷ ಪೋಸ್ಟಲ್ ಎನ್‌ಎಸ್‌ಎಸ್ ಉಳಿತಾಯ ಮಾಡಿದ್ದಾರೆ. ₹10.97 ಲಕ್ಷ ಮೌಲ್ಯದ ಹುಂಡೈ ಕಾರು, ₹92.57 ಲಕ್ಷ ಮೌಲ್ಯದ 1510 ಗ್ರಾಂ ಚಿನ್ನಾಭರಣಗಳು ಮತ್ತು ₹8.14 ಲಕ್ಷ ಮೌಲ್ಯದ 10 ಕೆ.ಜಿ ಬೆಳ್ಳಿ ಸಾಮಗ್ರಿಗಳನ್ನು ಹೊಂದಿದ್ದಾರೆ.
ಕೃಷಿ, ಕೃಷಿಯೇತರ ಭೂಮಿ ಹಾಗೂ ವಾಸಿಸುವ ಮನೆ ಸೇರಿ ₹31.13 ಕೋಟಿ ಮೌಲ್ಯ ಮೌಲ್ಯವಿದೆ. ₹1.29 ಕೋಟಿ ಹಣವನ್ನು ಅವರು ಬೇರೆಯವರಿಗೆ ಸಾಲವಾಗಿ ನೀಡಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.