ADVERTISEMENT

ಚಿಕ್ಕಬಳ್ಳಾಪುರ: ಸಚಿವ ಸುಧಾಕರ್ ವಿರುದ್ಧ ಪ್ರದೀಪ್ 'ಪರಿಶ್ರಮ'ಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 13 ಮೇ 2023, 7:25 IST
Last Updated 13 ಮೇ 2023, 7:25 IST
   

ಚಿಕ್ಕಬಳ್ಳಾಪುರ: ಸಚಿವ ಡಾ.ಕೆ.ಸುಧಾಕರ್ ಸೋಲಿಸುವ ಮೂಲಕ ಪರಿಶ್ರಮ ನೀಟ್ ಅಕಾಡೆಮಿ ಮುಖ್ಯ ಸ್ಥ ಪ್ರದೀಪ್ ಈಶ್ವರ್- ಗಮನ ಸೆಳೆದಿದ್ದಾರೆ.

2018ರ ಚುನಾವಣೆಯಲ್ಲಿ ಪ್ರದೀಪ್ ಪಕ್ಷೇತರ ಅಭ್ಯರ್ಥಿ ನವೀನ್ ಕಿರಣ್ ವಿರುದ್ಧ ಪ್ರಚಾರ ಮಾಡಿದ್ದರು. ಆಗ ಅವರ ವಿರುದ್ಧ 23 ಪ್ರಕರಣಗಳು ದಾಖಲಾಗಿದ್ದವು.

ನಂತರ ರಾಜಕಾರಣದಿಂದ ದೂರವಿದ್ದರು. ಈ ಚುನಾವಣೆ ಆರಂಭದಲ್ಲಿ ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಅವರ ಹೆಸರು ಸಹ ಇರಲಿಲ್ಲ.

ADVERTISEMENT

ಬಲಿಜ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎನ್ನುವ ಚರ್ಚೆ ಬಂದಾಗ ಪ್ರದೀಪ್ ಹೆಸರು ಮುನ್ನಲೆಗೆ ಬಂದಿತು. ಟಿಕೆಟ್ ಘೋಷಣೆ ತರುವಾಯ ಪ್ರದೀಪ್ ಡಮ್ಮಿ ಅಭ್ಯರ್ಥಿ. ಸುಧಾಕರ್ ಪರ ಎಂದೆಲ್ಲ ವಿಡಿಯೊ ಹರಿಬಿಡಲಾಯಿತು.

ಬೆರಳೆಣಿಕೆಯಷ್ಟು ದಿನಗಳು ಮಾತ್ರ ಪ್ರಚಾರಕ್ಕೆ ಅವಕಾಶವಿತ್ತು. ಅಹಿಂದ ಲೆಕ್ಕಾಚಾರ, ಬಲಿಜಿಗರು, ಕುರುಬರು, ಮುಸ್ಲಿಮರು, ದಲಿತರ ಮತಗಳ ಧ್ರುವೀಕರಣ ಪ್ರದೀಪ್ ಗೆಲುವಿಗೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.