ADVERTISEMENT

ಸ್ವಾಭಿಮಾನಕ್ಕೆ ಮೇಲುಗೈ: ಅಥಣಿಯಲ್ಲಿ ಸವದಿಗೆ ಗೆಲುವಿನ ಅಂತರ 75,673 ಮತ

​ಪ್ರಜಾವಾಣಿ ವಾರ್ತೆ
Published 13 ಮೇ 2023, 8:31 IST
Last Updated 13 ಮೇ 2023, 8:31 IST
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ   

ಬೆಳಗಾವಿ: ರಾಜ್ಯದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಣ ಸವದಿ ಅವರು 75,673 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದರು.

ಎಲ್ಲ 23 ಸುತ್ತುಗಳೂ ಮುಕ್ತಾಯವಾಗಿದ್ದು, ಲಕ್ಷ್ಮಣ ಸವದಿಗೆ 1,30,428 ಮತಗಳು ಬಂದವು. ಪ್ರತಿಸ್ಪರ್ಧಿ ಬಿಜೆಪಿಯ ಮಹೇಶ್ ಕುಮಠಳ್ಳಿ 54805 ಮತ ಪಡೆದರು.

2018ರಲ್ಲಿ ಕಾಂಗ್ರೆಸ್‌ನಿಂದ ಮಹೇಶ ಕುಮಠಳ್ಳಿ ಅವರು ಸವದಿ ವಿರುದ್ಧ ಗೆದ್ದಿದ್ದರು. 2019ರಲ್ಲಿ ಆಪರೇಷನ್‌ ಕಮಲದ ಮೂಲಕ, ಶಾಸಕ ರಮೇಶ ಜಾರಕಿಹೊಳಿ ಅವರೊಂದಿಗೆ ಬಿಜೆಪಿ ಸೇರಿದ್ದರು. ಆಗ ನಡೆದ ಉಪಚುನಾವಣೆಯಲ್ಲಿ ಸ್ವತಃ ಲಕ್ಷ್ಮಣ ಸವದಿ ಅವರೇ ಮುಂದೆ ನಿಂತು ಕುಮಠಳ್ಳಿ ಅವರನ್ನು ಗೆಲ್ಲಿಸಿದ್ದರು.

ADVERTISEMENT

ಈ ಬಾರಿ ಟಿಕೆಟ್‌ ಹಂಚಿಕೆ ದಿನದಿಂದಲೂ ಇಬ್ಬರ ಮಧ್ಯೆ ಗುದ್ದಾಟ ನಡೆದೇ ಇತ್ತು. ಬಿಜೆಪಿಯಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ ಎಂದು ನೊಂದ ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿ ಕಣಕ್ಕಿಳಿದಿದ್ದರು.

ವೈಯಕ್ತಿಕ ನಿಂದನೆ, ಆರೋಪ, ಸಾಕಷ್ಟು ಸರ್ಕಸ್ಸುಗಳ ಮಧ್ಯೆಯೂ ಸವದಿ ಭರ್ಜರಿ ಗೆಲುವು ಸಾಧಿಸಿದರು. ಈ ಮೂಲಕ ರಮೇಶ ಜಾರಕಿಹೊಳಿ ಹಾಗೂ ಅವರ ಬೆಂಬಲಿತ ಮಹೇಶ ಕುಮಠಳ್ಳಿ ಅವರಿಗೆ ಹಿನ್ನಡೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.