ಮೈಸೂರು: ‘ಬಿಜೆಪಿ ನನ್ನ ತಾಯಿ. ಈ ಪಕ್ಷದಲ್ಲೇ ಉಳಿಯುವೆ. ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಪರ ಪ್ರಚಾರ ನಡೆಸುವೆ’ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.
ಪಕ್ಷದ ಟಿಕೆಟ್ ತಪ್ಪಿದ್ದರಿಂದ ಮುನಿಸಿಕೊಂಡಿದ್ದ ಅವರು ಮಂಗಳವಾರ ಬೆಂಬಲಿಗರೊಂದಿಗೆ ಚರ್ಚಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.
‘ಕಠಿಣ ಪರಿಸ್ಥಿತಿಗಳು ಬಂದರೂ ಪಕ್ಷದ ವಿರುದ್ಧವಾಗಿ ಮಾತನಾಡಲಿಲ್ಲ. ಆರ್‌ಎಸ್‌ಎಸ್ ಸ್ವಯಂಸೇವಕ ನಾನು. ಪಕ್ಷೇತರನಾಗಿ ಸ್ಪರ್ಧಿಸಿದರೆ 11ಸಾವಿರ ಮತಗಳಿಂದ ಗೆದ್ದು ಬರಬಲ್ಲೆ. ನೋವುಗಳು ಬಹಳಷ್ಟಿವೆ. ಆದರೆ, ಪಕ್ಷದ ನಿರ್ಧಾರ ಗೌರವಿಸುವೆ. ದೇಶದ ಯಾವುದೇ ಶಾಸಕರಿಗೂ ನೀಡದಷ್ಟು ಪ್ರೀತಿಯನ್ನು 25 ವರ್ಷಗಳಿಂದ ನರೇಂದ್ರ ಮೋದಿ ನೀಡಿದ್ದಾರೆ. ಅದನ್ನು ಕಳೆದುಕೊಳ್ಳಲಾರೆ’ ಎಂದರು.
ಕಾಂಗ್ರೆಸ್‌ನಲ್ಲೇ ಇರುವೆ: ‘ಈ ಚುನಾವಣೆಯಲ್ಲಿ ನಾನು ಯಾವುದೇ ಪಕ್ಷದಿಂದ ಅಥವಾ ಪಕ್ಷೇತರನಾಗಿ ಸ್ಪರ್ಧಿಸುವುದಿಲ್ಲ. ಕಾಂಗ್ರೆಸ್‌ನಲ್ಲೇ ಇರುತ್ತೇನೆ’ ಎಂದು ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಂಚಿತರಾದ ಮಾಜಿ ಶಾಸಕ ವಾಸು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.