ADVERTISEMENT

ಮೈತ್ರಿ ಸರ್ಕಾರ ಉರುಳಿಸಿದವರಲ್ಲಿ ಗೆದ್ದವರ್‍ಯಾರು, ಸೋತವರ್‍ಯಾರು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮೇ 2023, 12:26 IST
Last Updated 13 ಮೇ 2023, 12:26 IST
   

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, 136 ಸ್ಥಾನಗಳಲ್ಲಿ ಗೆಲುವು/ ಮುನ್ನಡೆ ಸಾಧಿಸಿರುವ ಕಾಂಗ್ರೆಸ್‌, ಸರ್ಕಾರ ರಚಿಸುವ ಹೊಸ್ತಿಲಲ್ಲಿದೆ.

ಚುನಾವಣೆಯಲ್ಲಿ ಘಟಾನುಘಟಿ ನಾಯಕರೇ ಸೋತಿದ್ದಾರೆ. ಹಲವರು ಅಚ್ಚರಿಯ ಗೆಲುವು ಸಾಧಿಸಿದ್ದಾರೆ. ಅದರಲ್ಲೂ, ಹಿಂದಿನ ಮೈತ್ರಿ ಸರ್ಕಾರ ಉರುಳಿಸಿದ ನಾಯಕರ ಕ್ಷೇತ್ರಗಳಲ್ಲಿ ಪ್ರಕಟವಾಗಿರುವ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.

ಸೋತವರು

ADVERTISEMENT

1. ಬಿ.ಸಿ ಪಾಟೀಲ್‌ – ಹಿರೇಕೆರೂರು

2. ಮಹೇಶ್‌ ಕುಮಠಹಳ್ಳಿ – ಅಥಣಿ

3 .ಪ್ರತಾಪಗೌಡ ಪಾಟೀಲ್‌ – ಮಸ್ಕಿ

4. ಸುಧಾಕರ್‌ – ಚಿಕ್ಕಬಳ್ಳಾಪುರ

5. ಶ್ರೀಮಂತ ಪಾಟೀಲ್‌ – ಕಾಗವಾಡ

6. ಎಂಟಿಬಿ ನಾಗರಾಜ್‌– ಹೊಸಕೋಟೆ

7. ನಾರಾಯಣ ಗೌಡ – ಕೆ.ಆರ್‌.ಪೇಟೆ

8. ಆರ್‌ ಶಂಕರ್‌ – ರಾಣೆಬೆನ್ನೂರು ( ಎನ್‌ಸಿಪಿ)

9. ಎನ್‌. ಮಹೇಶ್‌ – ಕೊಳ್ಳೇಗಾಲ

ಗೆದ್ದವರು

1. ಎಸ್‌.ಟಿ ಸೋಮಶೇಖರ್‌ – ಯಶವಂತಪುರ

2. ಬೈರತಿ ಬಸವರಾಜ್‌ – ಕೆ.ಆರ್‌ ಪುರ

3. ರಮೇಶ್‌ ಜಾರಕಿಹೊಳಿ – ಗೋಕಾಕ

4. ಮುನಿರತ್ನ – ರಾಜರಾಜೇಶ್ವರಿ ನಗರ

5. ಶಿವರಾಮ ಹೆಬ್ಬಾರ್‌– ಯಲ್ಲಾಪುರ

6. ಗೋಪಾಲಯ್ಯ – ಮಹಾಲಕ್ಷ್ಮಿ ಬಡಾವಣೆ

ಹುಣಸೂರಿನಿಂದ ಜೆಡಿಎಸ್‌ ಆಭ್ಯರ್ಥಿಯಾಗಿ ಗೆದ್ದಿದ್ದ ವಿಶ್ವನಾಥ್‌ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಸಚಿವ ಆನಂದ್‌ ಸಿಂಗ್‌ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸದೇ ಪುತ್ರ ಸಿದ್ಧಾರ್ಥ್‌ ಸಿಂಗ್‌ ಠಾಕೂರ್‌ ಅವರನ್ನು ವಿಜಯನಗರದಿಂದ ಕಣಕ್ಕಿಳಿಸಿದ್ದರು. ಅವರು ಸೋತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.