ADVERTISEMENT

ಗದಗ | ಮತಗಟ್ಟೆ ಮುಂದೆಯೇ ಧರಣಿ ಕುಳಿತ ವೃದ್ದೆ

​ಪ್ರಜಾವಾಣಿ ವಾರ್ತೆ
Published 10 ಮೇ 2023, 7:27 IST
Last Updated 10 ಮೇ 2023, 7:27 IST
ನ್ಯಾಯ ಕೊಡಿಸುವಂತೆ ಧರಣಿ ಕುಳಿತ ವೃದ್ದೆ
ನ್ಯಾಯ ಕೊಡಿಸುವಂತೆ ಧರಣಿ ಕುಳಿತ ವೃದ್ದೆ   

ಮುಂಡರಗಿ: 'ಮತಗಟ್ಟೆ ಸಿಬ್ಬಂದಿಯು ತಾನು ಹೇಳಿದ ಗುರುತಿಗೆ ಮತ ನೀಡದೆ ತಮಗೆ ಬೇಕಾದ ಪಕ್ಷೇತರ ಅಬ್ಯರ್ಥಿಯೊಬ್ಬರ ಗುರುತಿನ ಬಟನ್ ಒತ್ತಿದ್ದಾರೆ' ಎಂದು ಆರೋಪಿಸಿ ಪಟ್ಟಣದ ಮಕ್ತುಂಬಿ ದೊಡ್ಡಮನಿ (83) ಎಂಬ ವೃದ್ದೆಯು ಮತಗಟ್ಟೆಯ ಮುಂದೆ ಧರಣಿ ಕುಳಿತಿದ್ದಾಳೆ.

ಪಟ್ಟಣದ ಕೆಜಿಎಸ್ ಸರ್ಕಾರಿ ಶಾಲೆಯ 53ನೇ ಮತಗಟ್ಟೆಲ್ಲಿ ಘಟನೆ ನಡೆದದ್ದು, ತಹಶೀಲ್ದಾರರು ಮತಗಟ್ಟೆಗೆ ಬರುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ವೃದ್ದೆಯು ಪಟತೊಟ್ಟಿದ್ದಾರೆ.

'ಮತಹಾಕಲು ಮತಗಟ್ಟೆಗೆ ಹೋಗಿದ್ದಾಗ ನನಗೆ ಕಣ್ಣು ಕಾಣುವುದಿಲ್ಲ. ನಾನು ಹೇಳುವ ಬಟನ್‌ಗೆ ಮತ ಹಾಕಿರಿ ಎಂದು ಅಲ್ಲಿಯ ಸಿಬ್ಬಂದಿಗೆ ತಿಳಿಸಿದೆ. ಅವರು ನನ್ನನ್ನು ಮತ ಯಂತ್ರದ ಬಳಿ ಕರೆದುಕೊಂಡು ಹೋಗಿ, ನಾನು ಹೇಳಿದ ಗುರುತಿನ ಬದಲಾಗಿ ನನ್ನ ತಮಗೆ ಬೇಕಾದವರ ಗುರುತಿನ ಬಟನ್‌ಗೆ ನನ್ನ ಬೆರಳನ್ನು ಒತ್ತಿದ್ದಾರೆ' ಎಂದು ಮಕ್ತುಂಬಿ ಅರೋಪಿಸಿದ್ದಾರೆ.

ADVERTISEMENT

'ಮತಗಟ್ಟೆಯಲ್ಲಿರುವ ಚುನಾವಣಾ ಸಿಬ್ಬಂದಿಯು ಒಬ್ಬ ಪಕ್ಷೇತರ ಅಭ್ಯರ್ಥಿಯ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ತಕ್ಷಣ ಮತದಾನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು. ವೃದ್ದೆಗೆ ಪುನಃ ಮತ ನೀಡಲು ಅವಕಾಶ ನೀಡಬೇಕು' ಎಂದು ಪುರಸಭೆಯ ಕಾಂಗ್ರೆಸ್ ಸದಸ್ಯ ನಾಗರಾಜ ಹೊಂಬಳಗಟ್ಟಿ ಒತ್ತಾಯಿಸಿದ್ದಾರೆ.

'ಅಜ್ಜಿಯು ಹೇಳಿದ ಗುರುತಿಗೆ ಮತ ಹಾಕಿದ್ದು, ಯಾವ ಪಕ್ಷಪಾತವನ್ನೂ ಮಾಡಿಲ್ಲ' ಎಂದು ಮತಗಟ್ಟೆ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.