ಬೆಳಗಾವಿ: ‘ಮತ ಪ್ರತಿಯೊಬ್ಬರ ಹಕ್ಕು. ಸಮಾಜಕ್ಕಾಗಿ ದುಡಿಯುವ ವ್ಯಕ್ತಿಗಳನ್ನು ವಿಧಾನಸಭೆಗೆ ಕಳುಹಿಸಿ ಕೊಡುವಲ್ಲಿ ಪ್ರತಿಯೊಬ್ಬರ ಮತಗಳು ಪರಿಣಾಮ ಬೀರುತ್ತವೆ. ಚಲಾವಣೆಗೆ ನಿರುತ್ಸಾಹ ತೋರದೆ ಮತ ಚಲಾಯಿಸಿ ಸಂವಿಧಾನದ ಆಶಯಗಳನ್ನು ಉಳಿಸಬೇಕು' ಎಂದು ಗದಗ- ಡಂಬಳ ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.
ಬೆಳಗಾವಿಯ ಶಿವಬಸವ ನಗರದ ಮತಗಟ್ಟೆಯಲ್ಲಿ ಬುಧವಾರ ಮತದಾನ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿ ಅವರು ಮತದಾನ ಮಹತ್ವನ್ನು ತಿಳಿಸಿದರು.
ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಕಾರಂಜಿಮಠದ ಡಾ.ಶಿವಯೋಗಿ ಸ್ವಾಮೀಜಿ, ವಿಜಯಪುರದ ಸಿದ್ದಾರೂಢ ಸ್ವಾಮೀಜಿ, ಶೇಗುಣಸಿಯ ಮಹಾಂತ ಸ್ವಾಮೀಜಿ ಅವರು ಇಲ್ಲಿನ ಶಿವಬಸವ ನಗರ ಮತ್ತು ಮಾರುತಿ ಗಲ್ಲಿಯ ಮತಗಟ್ಟೆಗಳಲ್ಲಿ ಮತ ಚಲಾಯಿಸಿ ಗಮನ ಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.