ADVERTISEMENT

ಶೇ 85 ಕಮಿಷನ್‌ ತಿನ್ನುವ ಕಾಂಗ್ರೆಸ್‌: ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2023, 10:07 IST
Last Updated 30 ಏಪ್ರಿಲ್ 2023, 10:07 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಕೋಲಾರ: ‘ಕಾಂಗ್ರೆಸ್‌ನ ರಾಜ ಪರಿವಾರ ದೇಶದ ಜನರ ವಿಶ್ವಾಸಕ್ಕೆ ಭಂಗ ಮಾಡುತ್ತಲೇ ಬಂದಿದೆ. ಅವರ ಸರ್ಕಾರದ ಅವಧಿಯಲ್ಲಿ ಫಲಾನುಭವಿಗಳಿಗೆ ದೊರೆಯಬೇಕಾದ ಶೇ 85ರಷ್ಟು ಹಣವನ್ನು ನುಂಗಿ ನೀರು ಕುಡಿದಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

ಕೋಲಾರದಲ್ಲಿ ಬಿಜೆಪಿ ಭಾನುವಾರ ಆಯೋಜಿಸಿದ್ದ ವಿಧಾನಸಭೆ ಚುನಾವಣೆ ಪ್ರಚಾರ ಸಮಾವೇಶದಲ್ಲಿ ಅವರು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

‘ಪ್ರಧಾನಿಯಾಗಿದ್ದ ಅವರದ್ದೇ ಪಕ್ಷದ ರಾಜೀವ್‌ ಗಾಂಧಿ ಫಲಾನುಭವಿಗಳಿಗೆ ಎಷ್ಟು ಹಣ ತಲುಪುತ್ತದೆ ಎಂಬುದನ್ನು ವಿವರಿಸಿದ್ದರು. ಕೇಂದ್ರದಿಂದ ₹ 1 ಬಿಡುಗಡೆಯಾದರೆ ಫಲಾನುಭವಿಗಳಿಗೆ ತಲುಪುವುದು 15 ಪೈಸೆ ಮಾತ್ರ ಎಂದಿದ್ದರು. ಹೀಗಾಗಿ, ಶೇ 85 ಕಮಿಷನ್‌ ತಿನ್ನುವ ಸರ್ಕಾರವಿದ್ದರೆ ಅದು ಕಾಂಗ್ರೆಸ್‌ ಆಡಳಿತದ ಸರ್ಕಾರ. ಇಂಥ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಸಾಧ್ಯವೇ?’ ಎಂದು ಪ್ರಶ್ನಿಸಿದರು.

ADVERTISEMENT

ಕಾಂಗ್ರೆಸ್‌ನದ್ದು ಔಟ್‌ಡೇಟೆಡ್‌ ಎಂಜಿನ್‌

‘ಕಾಂಗ್ರೆಸ್‌ನದ್ದು ದುರ್ಬಲ, ಔಟ್‌ಡೇಟೆಡ್‌ ಎಂಜಿನ್‌. ಈ ಎಂಜಿನ್‌ ಇಟ್ಟುಕೊಂಡರೆ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ. ಕೇಂದ್ರದ ಎಂಜಿನ್‌ನಷ್ಟೇ ಸಾಮರ್ಥ್ಯದ ಎಂಜಿನ್‌ ಕರ್ನಾಟಕದಲ್ಲಿ ಸ್ಥಾಪನೆ ಮಾಡಬೇಕಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

‘ಕರ್ನಾಟಕವನ್ನು ನಂಬರ್‌ ಒನ್‌ ರಾಜ್ಯ ಮಾಡುವುದು ಬಿಜೆಪಿ ಸಂಕಲ್ಪ. ಇದಕ್ಕಾಗಿ ಡಬಲ್‌ ಎಂಜಿನ್‌ ಸರ್ಕಾರದ ಅಗತ್ಯವಿದೆ. ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಿಂದ ಅಭಿವೃದ್ಧಿಗೆ ಬ್ರೇಕ್‌ ಬಿದ್ದಿತ್ತು. ಡಬಲ್‌ ಎಂಜಿನ್‌ ಸರ್ಕಾರ ಬಂದ ಮೇಲೆ ಅಭಿವೃದ್ಧಿ ವೇಗ ಹೆಚ್ಚಿದೆ. ಅದನ್ನು ಮುಂದುವರಿಸಲು ಮತ್ತೆ ಬಿಜೆಪಿಗೆ ಮತ ನೀಡಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.