ADVERTISEMENT

ದೊಡ್ಡಬಳ್ಳಾಪುರ: ಹಿರಿಯ ನಾಗರಿಕರ, ಅಂಗವಿಕಲರ ಮತದಾನ ಆರಂಭ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2023, 6:21 IST
Last Updated 29 ಏಪ್ರಿಲ್ 2023, 6:21 IST
   

ದೊಡ್ಡಬಳ್ಳಾಪುರ: ಇಲ್ಲಿನ ವಿಧಾನಸಭಾ ಕ್ಷೇತ್ರದ 276 ಮತಗಟ್ಟೆಗಳ ವ್ಯಾಪ್ತಿಯಲ್ಲಿ 220 ಜನ ಹಿರಿಯ ನಾಗರಿಕರು (80 ವರ್ಷ ಮೆಲ್ಪಟ್ಟವರು) ಹಾಗೂ ವಿಶೇಷಚೇತನರಿಗೆ ಮನೆಯಿಂದ ಮತದಾನ ಇಂದು ಮತ್ತು ನಾಳೆ ನಡೆಯುತ್ತಿದೆ. ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯುತ್ತಿದೆ ಎಂದು ಚುನಾವಣ ಅಧಿಕಾರಿ ಎನ್.ತೇಜಸ್ ಕುಮಾರ್ ಹೇಳಿದರು.

ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 5004 ಜನ ಮತದಾರರು ಇದ್ದಾರೆ. 3327 ಮಂದಿ ಅಂಗವಿಕಲರ ಮತದಾರರು ಇದ್ದಾರೆ. ಮತಗಟ್ಟೆಗೆ ಬರಲಾಗದ 270 ಜನರಿಗೆ 12 ಡಿ ಫಾರಂ ನೀಡಿ ಅವರಿಂದ ಒಪ್ಪಿಗೆ ಪಡೆಯಲಾಗಿದೆ. ಒಪ್ಪಿಗೆ ಪಡೆದಿರುವ ಮತದಾರರ ಮನೆಗೆ ಹೋಗಿ ಮತದಾನ ಮಾಡಿಸಲಾಗುತ್ತಿದೆ. ಮತದಾನದ ಗೌಪ್ಯತೆ ಸೇರಿದಂತೆ ಸಾಮಾನ್ಯ ಮತಗಟ್ಟೆಯಲ್ಲಿ ನಡೆಯುವ ಎಲ್ಲಾ ಪ್ರಕ್ರಿಯೆಗಳು ಇರಲಿವೆ. ಮತ ಪತ್ರಗಳನ್ನು ಬಳಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT