ADVERTISEMENT

Lok Sabha Polls Karnataka LIVE | ಮತದಾನ ಅಂತ್ಯ– ಬಹುತೇಕ ಶಾಂತಿಯುತ

ರಾಜ್ಯದಲ್ಲಿ 5 ಗಂಟೆವರೆಗೆ ಶೇ 66.05 ರಷ್ಟು ಮತದಾನವಾಗಿದೆ: ಚುನಾವಣಾ ಆಯೋಗ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಮೇ 2024, 10:12 IST
Last Updated 8 ಮೇ 2024, 10:12 IST
<div class="paragraphs"><p>ಶಿಗ್ಗಾವಿಯಲ್ಲಿ ಕರ್ನಾಟಕ ರಾಜ್ಯ ಗಡಿ ಅಭಿವೃದ್ದಿ ನಿಗಮದ ಅಧ್ಯಕ್ಷ ಸೋಮಣ್ಣ ಬೇವಿನಮರದ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದರು</p></div>

ಶಿಗ್ಗಾವಿಯಲ್ಲಿ ಕರ್ನಾಟಕ ರಾಜ್ಯ ಗಡಿ ಅಭಿವೃದ್ದಿ ನಿಗಮದ ಅಧ್ಯಕ್ಷ ಸೋಮಣ್ಣ ಬೇವಿನಮರದ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದರು

   

ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಆರಂಭ

ದೇಶ– ನಾಡಿನ ಭವಿಷ್ಯ ರೂಪಿಸುವ ಲೋಕಸಭೆಯ ಎರಡನೇ ಹಂತದ ಮತದಾನಕ್ಕೆ ಅರ್ಧ ರಾಜ್ಯ ಸಜ್ಜಾಗಿದೆ. ರಾಜ್ಯದ 14 ಕ್ಷೇತ್ರ ಒಳಗೊಂಡಂತೆ 93 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಮತದಾರರ ಬರುವಿಕೆಗೆ ಮತಗಟ್ಟೆಗಳು ಅಣಿಗೊಂಡಿದ್ದು, ಬಿರುಬಿಸಿಲು ನಡುವೆಯೂ ಮತದಾರರು ತಮ್ಮ ಕರ್ತವ್ಯಪ್ರಜ್ಞೆ ಮೆರೆಯುತ್ತಾರೆಂಬ ನಿರೀಕ್ಷೆ ಬಲಗೊಂಡಿದೆ. ಕರಾವಳಿ, ಮಲೆನಾಡು, ಮಧ್ಯ, ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕದ 14 ಕ್ಷೇತ್ರಗಳಲ್ಲಿ ಬಿಜೆಪಿ– ಕಾಂಗ್ರೆಸ್ ಮಧ್ಯೆಯೇ ನೇರ ಹಣಾಹಣಿ ಇದೆ. ಶಿವಮೊಗ್ಗ ಮತ್ತು ದಾವಣಗೆರೆಯಲ್ಲಿ ಪಕ್ಷೇತರ ಅಭ್ಯರ್ಥಿ ಪೈಪೋಟಿ ನೀಡುತ್ತಿದ್ದು, ತ್ರಿಕೋನ ಸ್ಪರ್ಧೆಯ ವಾತಾವರಣ ಇದೆ.

ಬಿಸಿಲ ನಡುವೆ ಮತದಾನ: ಮುಂಜಾಗ್ರಾತಾ ಕ್ರಮ

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಎರಡನೆಯ ಮತ್ತು ಕೊನೆಯ ಹಂತದ ಮತದಾನ ಇಂದು ನಡೆಯಲಿದ್ದು, ಹಲವು ರಾಜಕೀಯ ನಾಯಕರ ಭವಿಷ್ಯ ನಿರ್ಧಾರವಾಗಲಿದೆ. ನೆತ್ತಿ ಸುಡುವ, ಧಗೆಯೇರಿಸಿದ ಬಿಸಿಲ ನಡುವೆಯೇ ಮತಭಿಕ್ಷುಗಳು, ತಮ್ಮ ಶಕ್ತಿಯನ್ನೆಲ್ಲ ಧಾರೆಯೆರೆದು ಪ್ರಚಾರ ನಡೆಸಿದ್ದಾರೆ. ರಾಜ್ಯದಲ್ಲಿ ಭಾರಿ ಗಮನ ಸೆಳೆವ ಕ್ಷೇತ್ರಗಳು, ಯಾವೆಲ್ಲ ನಾಯಕರಿಗೆ ಈ ಹಂತದ ಚುನಾವಣೆ ನಿರ್ಣಾಯಕ ಎಂಬ ಚಿತ್ರಣ ಇಲ್ಲಿದೆ.

ADVERTISEMENT

ವಿಜಯನಗರ ಜಿಲ್ಲೆಯಲ್ಲಿ ಮತದಾನ ಆರಂಭ

ಹೊಸಪೇಟೆ (ವಿಜಯನಗರ): ಬಳ್ಳಾರಿ ಲೋಕಸಭಾ ಕ್ಷೇತ್ರದ ಭಾಗವಾಗಿರುವ ವಿಜಯನಗರ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಬಿಸಿಲೇರುವ ಮೊದಲೇ ತಮ್ಮ ಹಕ್ಕನ್ನು ಚಲಾಯಿಸಲು ಮತದಾರರು ಮತಗಟ್ಟೆಯತ್ತ ಧಾವಿಸತೊಡಗಿದ್ದಾರೆ.

ನಗರದ ಹೃದಯ ಭಾಗದಲ್ಲಿರುವ  ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಮತಗಟ್ಟೆಯಲ್ಲಿ ಬೆಳಿಗ್ಗೆ 7 ಗಂಟೆಗೇ ಸರದಿ ಸಾಲು ಕಾಣಿಸಿತು.

ಲೋಕಸಭೆ ಚುನಾವಣೆ: ವಿಜಯಪುರದಲ್ಲಿ ಮತದಾನ ಬಿರುಸು

ವಿಜಯಪುರ: ವಿಜಯಪುರ ಎಸ್‌.ಸಿ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಜಿಲ್ಲೆಯಾದ್ಯಂತ ಬೆಳಿಗ್ಗೆ 7ರಿಂದಲೇ ಮತದಾನ ಬಿರುಸಿನಿಂದ ಆರಂಭವಾಗಿದೆ. 

ವಿಜಯಪುರ ನಗರದಲ್ಲಿ ಬೆಳಿಗ್ಗೆ 7 ಕ್ಕೆ ಮತದಾನ ಆರಂಭವಾಗುತ್ತಿರುವಂತೆ ಜನರು ಸರದಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸುತ್ತಿರುವುದು ಕಂಡುಬಂದಿತು.

ಬೆಳಗಾವಿಯಲ್ಲಿ ಬಿರುಸಿನ ಮತದಾನ

ಬೆಳಗಾವಿ ನಗರದಲ್ಲಿ ಬೆಳಿಗ್ಗೆ 7ರಿಂದಲೇ ಮತದಾನ ಚುರುಕುಗೊಂಡಿದೆ. ಬಿಸಿಲಿನ ಕಾರಣಕ್ಕೆ ಜನರು ಬೇಗ ಬಂದು ಮತ ಚಲಾಯಿಸುತ್ತಿರುವ ಕಾರಣ, ಹಲವು ಮತಗಟ್ಟೆಗಳಲ್ಲಿ ಜನರ ಉದ್ದನೆಯ ಸರದಿ ಸಾಲು ಕಂಡುಬರುತ್ತಿದೆ.

ಬೆಳಗಾವಿಯ ಹೊಸೂರಿನ ಬಸವನ ಗಲ್ಲಿಯ ಸರ್ಕಾರಿ ಮರಾಠಿ ಶಾಲೆ ಮತಗಟ್ಟೆಯಲ್ಲಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮತ ಚಲಾಯಿಸಿದರು

ಬಳ್ಳಾರಿ| ಮತದಾನಕ್ಕೆ ಪೂರಕ 'ವಾತಾವರಣ'!

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಬಹುತೇಕ ಮತಗಟ್ಟೆಗಳಲ್ಲಿ ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ.

ಮತ ಚಲಾಯಿಸಲು ಜನ ಮತಗಟ್ಟೆ ಕೇಂದ್ರಗಳಿಗೆ ತೆರಳುತ್ತಿರುವ, ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡು ಬಂದವು.

ಮತ ಚಲಾಯಿಸಲು ಜನ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ

ಬಾಗಲಕೋಟೆ: ಮತದಾನ ಚುರುಕು

ಬಾಗಲಕೋಟೆ: ಲೋಕಸಭಾ ಕ್ಷೇತ್ರದ ಹಲವು ಮತಗಟ್ಟೆಗಳ ಮುಂದೆ ಜನರು ಸಾಲುಗಟ್ಟಿ ನಿಂತಿದ್ದಾರೆ.

ಬಿಸಿಲು ಹೆಚ್ಚಾಗುವ ಮುನ್ನ ಮತ ಹಾಕಲು ಉತ್ಸುಕರಾಗಿದ್ದಾರೆ. ಯುವ ಜನಾಂಗವೂ ಸಾಕಷ್ಟು ಸಂಖ್ಯೆಯಲ್ಲಿ ಮತ ಚಲಾಯಿಸಲು ಮುಂದಾಗಿದ್ದಾರೆ.

ಗದಗ ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರ ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 18,06,183 ಮಂದಿ ಮತ ಚಲಾಯಿಸಲಿದ್ದಾರೆ.

ಶಾಸಕ ಸಿದ್ದು ಸವದಿ ಕುಟುಂಬ ಮತ್ತು ಕಾರ್ಯಕರ್ತರ ಜೊತೆಗೂಡಿ ಮತದಾನ ಮಾಡಿದರು

ಕೊಪ್ಪಳ ಜಿಲ್ಲೆಯಾದ್ಯಂತ ಮತದಾನ ಆರಂಭ

ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದ ಕಣದಲ್ಲಿರುವ 19 ಜನ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವ ಮತದಾನ ಜಿಲ್ಲೆಯಾದ್ಯಂತ ಮಂಗಳವಾರ ಆರಂಭಗೊಂಡಿದೆ.

ಒಟ್ಟು 18,66,397 ಮತದಾರರು ಇದ್ದು, ಜಿಲ್ಲೆಯಲ್ಲಿ 1317 ಮತಗಟ್ಟೆಗಳಿವೆ. ಸಾಕಷ್ಟು ಬಿಸಿಲು ಇರುವ ಕಾರಣ 570 ಮತಗಟ್ಟೆಗಳಲ್ಲಿ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ವಿಶ್ರಾಂತಿ ಕೊಠಡಿ ವ್ಯವಸ್ಥೆ ಮಾಡಲಾಗಿದೆ.

ಕೊಪ್ಪಳ ‌ಜಿಲ್ಲೆ ಅಳವಂಡಿ ಸಮೀಪದ ಕಾತರಕಿ ಗ್ರಾಮದಲ್ಲಿ ಅಂಗವಿಕಲ ಗವಿಸಿದ್ದಪ್ಪ ಮತ‌ಚಲಾಯಿಸಿದರು

ಬೀದರ್ ಲೋಕಸಭಾ ಕ್ಷೇತ್ರ; ಚುರುಕಿನ ಮತದಾನ

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಬಹುತೇಕ ಮತಗಟ್ಟೆಗಳಲ್ಲಿ ಚುರುಕಿನ ಮತದಾನ ಆರಂಭವಾಗಿದೆ.

ಬೆಳಿಗ್ಗೆ ಏಳು ಗಂಟೆಯಿಂದಲೇ ಜನ ಮತಗಟ್ಟೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸುತ್ತಿದ್ದಾರೆ. ಕುಟುಂಬ ಸದಸ್ಯರೊಡನೆ ಮತದಾನಕ್ಕೆ ಮತಗಟ್ಟೆಗಳಿಗೆ ಬಂದಿರುವುದರಿಂದ ಎಲ್ಲ ಕಡೆಗಳಲ್ಲಿ ಉದ್ದನೆಯ ಸಾಲು ಕಂಡು ಬಂತು.

ಬೀದರಿನ ಮೈಲೂರು ಶಾಲೆಯ ಮತಗಟ್ಟೆ ಸಂಖ್ಯೆ 196ರಲ್ಲಿ 95 ವರ್ಷದ ವೆಂಕಟರಾವ್ ಎಂಬುವರು ವೀಲ್ ಚೇರ್ ನಲ್ಲಿ ಬಂದು ಮತ ಹಾಕಿದರು.

ಹುಲಸೂರ: ಜಾಲತಾಣದಲ್ಲಿ ಮತ ಹಾಕಿದ ವಿಡಿಯೊ!

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಮತ ಹಾಕುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿರುವ ಮತದಾರರೊಬ್ಬರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮೊದಲು ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಹೆಸರಿನ ಮುಂದೆ ಬೆರಳಿಟ್ಟು, ಆನಂತರ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಹೆಸರಿಗೆ ಮತ ಹಾಕಿ ಸನ್ನೆ ಮಾಡಿದ್ದಾರೆ. ವಿ.ವಿ ಪ್ಯಾಟಿನಲ್ಲಿ ಬಂದ ವಿವರವೂ ಇದರಲ್ಲಿದೆ.

ಇನ್‌ಸ್ಟಾಗ್ರಾಮ್‌ ಸೇರಿ ವಾಟ್ಸ್‌ಆ್ಯಪ್‌ನಲ್ಲಿ ಅಭ್ಯರ್ಥಿಗಳ ವಿಡಿಯೊ ಹರಿದಾಡುತ್ತಿದೆ.

ಉತ್ತರ ಕನ್ನಡ:  ಮತ ಚಲಾವಣೆಗೆ ಉತ್ಸಾಹ, ಮತಯಂತ್ರದಲ್ಲಿ ದೋಷ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು ನಸುಕಿನ ಜಾವದಿಂದಲೇ ಮತದಾನಕ್ಕೆ ಮತಗಟ್ಟೆಗಳ ಎದುರು ಜನರ ಸರತಿ ಸಾಲು ಕಂಡು ಬಂತು.

7 ಗಂಟೆಗೆ ಮತದಾನ ಆರಂಭಗೊಳ್ಳುತ್ತಿದ್ದಂತೆ ಹಲವರು ಮತದಾನಕ್ಕೆ ಉತ್ಸಾಹ ತೋರಿಸಿದರು. ಯುವಕರು, ವೃದ್ಧರು ಸೇರಿದಂತೆ ಮತಗಟ್ಟೆಗಳತ್ತ ಜನರು ದೌಡಾಯಿಸಿದರು.

ಕಾರವಾರದ ಸೆಂಟ್ ಮೈಕಲ್ ಶಾಲೆಯ 103ನೇ ಮತಗಟ್ಟೆಯಲ್ಲಿ ಇವಿಎಂ ನಲ್ಲಿ ದೋಷ ಕಂಡುಬಂದಿದ್ದರಿಂದ ಮತದಾರರು ಕಾಯುತ್ತಿದ್ದರು

ಮತದಾನಕ್ಕೂ‌ ಮೊದಲು ಗವಿಮಠದಲ್ಲಿ ದರ್ಶನ ಪಡೆದ ಬಿಜೆಪಿ ಅಭ್ಯರ್ಥಿ

ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ‌ ಅಭ್ಯರ್ಥಿ ಡಾ.‌ ಬಸವರಾಜ ಕ್ಯಾವಟರ್ ಮತ ಚಲಾಯಿಸುವ ಮೊದಲು ಇಲ್ಲಿನ ಗವಿಸಿದ್ದೇಶ್ವರ ಮಠಕ್ಕೆ ತೆರಳಿ ಆಶೀರ್ವಾದ ಪಡೆದರು.

ಮಂಗಳವಾರ ಬೆಳಗಿನ ಜಾವವೇ ಗವಿಮಠಕ್ಕೆ ಬಂದು ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಬಿಜೆಪಿ‌ ಅಭ್ಯರ್ಥಿ ಡಾ.‌ ಬಸವರಾಜ ಕ್ಯಾವಟರ್ ಮತ ಚಲಾಯಿಸುವ ಮೊದಲು ಇಲ್ಲಿನ ಗವಿಸಿದ್ದೇಶ್ವರ ಮಠಕ್ಕೆ ತೆರಳಿ ಆಶೀರ್ವಾದ ಪಡೆದರು.

ಕಲಬುರಗಿ ಮೀಸಲು ಕ್ಷೇತ್ರದಲ್ಲಿ ಮತದಾನ ಆರಂಭ

ಕಲಬುರಗಿ: ಕಲಬುರಗಿ ಲೋಕಸಭಾ ಚುನಾವಣೆಯ ಮೀಸಲು ಕ್ಷೇತ್ರದಲ್ಲಿ ಮಂಗಳವಾರ ಬಿಸಿಲಿನೊಂದಿಗೆ ಶಾಂತಿಯುತವಾಗಿ ಮತದಾನ ಆರಂಭವಾಗಿದೆ.

ಮಧ್ಯಾಹ್ನದ ರಣ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಬೆಳಿಗ್ಗೆ 7ಕ್ಕೂ ಮೊದಲೇ ಮತಗಟ್ಟೆಗಳ ಮುಂದೆ ಮತದಾರರ ಸಾಲು ನೆರೆದಿತ್ತು. ಚುನಾವಣಾ ಸಿಬ್ಬಂದಿ ಇವಿಎಂ ಯಂತ್ರ ಜೋಡಿಸಿ ಅಣಕು ಮತದಾನ ಮಾಡಿದರು.

ಹೊಸಪೇಟೆ | ಕೈಕೊಟ್ಟ ಮತಯಂತ್ರ: 20 ನಿಮಿಷದಿಂದ ಮತದಾನ ಸ್ಥಗಿತ

ಹೊಸಪೇಟೆ (ವಿಜಯನಗರ): ಇಲ್ಲಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಮೂರು ಮತಗಟ್ಟೆಗಳಿದ್ದು, ಮತಗಟ್ಟೆ ಸಂಖ್ಯೆ 20ರಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ಸುಮಾರು 20 ನಿಮಿಷಗಳಿಂದ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿದೆ.

ಇದೇ ಕಾಲೇಜಿನ ಆವರಣದಲ್ಲಿರುವ ಇತರ ಎರಡು ಮತಗಟ್ಟೆಗಳಲ್ಲಿ ಮತದಾನ ಸಾಂಗವಾಗಿ ನಡೆದಿದ್ದು, 20ನೇ ಮತಗಟ್ಟೆಯಲ್ಲಿ ಮತದಾರರು ವಿದ್ಯುನ್ಮಾನ ಮತಯಂತ್ರದ ದುರಸ್ತಿಗಾಗಿ ಕಾಯುತ್ತಿದ್ದಾರೆ.

ಹೊಸಪೇಟೆ ನಗರದ ಇತರ ಮತಗಟ್ಟೆಗಳಲ್ಲಿ ಮತದಾನ ಮಾಡಲು ಜನರು ಸರದಿಯಲ್ಲಿ ನಿಂತಿದ್ದು, ಮತದಾನ ಬಿರುಸಿನಿಂದ ಸಾಗುತ್ತಿದೆ.

ಯಾದಗಿರಿ: ಲೋಕಸಭೆ, ಸುರಪುರ ಉಪ ಚುನಾವಣೆ ಆರಂಭ

ಯಾದಗಿರಿ: ರಾಯಚೂರು ಲೋಕಸಭೆ ಚುನಾವಣೆ‍, ಸುರಪುರ ಉಪ ಚುನಾವಣೆ ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಆರಂಭವಾಯಿತು.

ಬಿಸಿಲಿನ ಪ್ರಖರತೆ ನಡೆಯುವೆಯೂ ಅಲ್ಲಲ್ಲಿ ಮತದಾರರು ಮತಗಟ್ಟೆಗೆ ಆಗಮಿಸುತ್ತಿದ್ದಾರೆ. ಶಾಮಿಯಾನ ವ್ಯವಸ್ಥೆ ಮಾಡಲಾಗಿದೆ.

ಸುರಪುರದ ನಗರಸಭೆ ಮತಗಟ್ಟೆಯಲ್ಲಿ 10 ನಿಮಿಷ ತಡವಾಗಿ ಮತದಾನ ಆರಂಭವಾಯಿತು.

ಸುರಪುರ ಉಪ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ್ ನಾಯಕ ನಗರದ ಗ್ರಂಥಾಲಯ ಮತಗಟ್ಟೆಯಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಮಾಡಿದರು.

ಹುಬ್ಬಳ್ಳಿಯಲ್ಲಿ ಇವಿಎಂ ದೋಷ: ಮತದಾನ ಸ್ಥಗಿತ

ಹುಬ್ಬಳ್ಳಿ: ಇಲ್ಲಿನ ಅಮರಗೋಳ ಸರ್ಕಾರಿ ಮಾದರಿ ಶಾಲೆಯ ಬೂತ್ ಸಂಖ್ಯೆ 113ರಲ್ಲಿ ಮತಯಂತ್ರದಲ್ಲಿ (ಇವಿಎಂ) ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಮತದಾನ ಸ್ಥಗಿತವಾಗಿದೆ.

ಹಿರಿಯ ಅಧಿಕಾರಿಗಳು ಮತಯಂತ್ರವನ್ನು ಪರಿಶೀಲಿಸುತ್ತಿದ್ದಾರೆ.

ಗದಗದಲ್ಲಿ ಇವಿಎಂ ದೋಷ: ಮತದಾನ ಸ್ಥಗಿತ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಮತಗಟ್ಟೆ ಸಂಖ್ಯೆ 110ರಲ್ಲಿ ಇವಿಎಂ ಮಷಿನ್ ಕೈಕೊಟ್ಟಿದ್ದರಿಂದ ಮತದಾನ 45 ನಿಮಿಷ ತಡವಾಗಿ ಆರಂಭವಾಯಿತು.

ಶಿಕಾರಿಪುರ: ಯಡಿಯೂರಪ್ಪ, ರಾಘವೇಂದ್ರ ಮತ ಚಲಾವಣೆ

ಶಿಕಾರಿಪುರ: ಇಲ್ಲಿನ ತಾಲ್ಲೂಕು ಕಚೇರಿ ಮತಗಟ್ಟೆಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಮತ ಚಲಾಯಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ 24ರಿಂದ 25 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಪುತ್ರ ಬಿ.ವೈ.ರಾಘವೇಂದ್ರ 2.5 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.

ಮತದಾನಕ್ಕೂ ಮುನ್ನ ಪುತ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಯಡಿಯೂರಪ್ಪ ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಕೊಪ್ಪಳ : ಮತದಾರರಿಗೆ ಪಾನೀಯ ನೀಡಿ ಮತದಾನಕ್ಕೆ ಸ್ವಾಗತ

ಕೊಪ್ಪಳ: ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ವಡ್ಡರಹಟ್ಟಿ ಗ್ರಾಮದಲ್ಲಿ ಸಖಿ ಮತಗಟ್ಟೆಯಲ್ಲಿ ಮತದಾರರಿಗೆ ಪಾನೀಯ ನೀಡಿ ಮತಗಟ್ಟೆಗೆ ಬರಮಾಡಿಕೊಳ್ಳಲಾಯಿತು.

ಜಿಲ್ಲೆಯಲ್ಲಿ ಬಿಸಿಲು ಹೆಚ್ವಿರುವ ಕಾರಣ ಮತದಾನದ ಪ್ರಮಾಣ ಕಡಿಮೆಯಾಗದಂತೆ ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಹಲವು ಮತಗಟ್ಟೆಯಲ್ಲಿ ಈ ರೀತಿಯ ಕ್ರಮ ಕೈಗೊಂಡಿದೆ.

ಬೆಳಗಾವಿ: ಹೆಬ್ಬಾಳಕರ ಕುಟುಂಬದಿಂದ ಮತದಾನ

ಬೆಳಗಾವಿ: ತಾಲ್ಲೂಕಿನ ಹಿಂಡಲಗಾದ ವಿಜಯನಗರದ ಸರ್ಕಾರಿ ಮರಾಠಿ ಶಾಲೆ ಮತಗಟ್ಟೆಯಲ್ಲಿ ಮಹಿಳಾ ಮತ್ತು ಮಕ್ಕಳ‌ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಮತ ಚಲಾಯಿಸಿದರು.

ಮತ ಚಲಾಯಿಸಿ ಹೊರಬಂದು ವಿಜಯದ ಸಂಕೇತ ತೋರಿದರು.

ತೀರ್ಥಹಳ್ಳಿ: ಕಿಮ್ಮನೆ ರತ್ನಾಕರ ಮತದಾನ

ತೀರ್ಥಹಳ್ಳಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರು ತೀರ್ಥಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೊಪ್ಪುಗುಡ್ಡೆ ಬೂತ್ ನಂಬರ್ 180ರಲ್ಲಿ ಪತ್ನಿಯೊಂದಿಗೆ, ಬೂತ್ ನಲ್ಲಿ ಮೊದಲಿಗರಾಗಿ ಮತದಾನ ಮಾಡಿದರು ಜೊತೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಜಯಪ್ರಕಾಶ್ ಶೆಟ್ಟಿ, ಶಬನಮ್ ಸಹ ಜೊತೆ ಇದ್ದರು.

ಬಳ್ಳಾರಿ ಲೋಕಸಭೆ ಕ್ಷೇತ್ರ: ಮತ ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಇ.ತುಕರಾಂ

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇ.ತುಕರಾಂ ಸಂಡೂರಿನ ಪಂಚಾಯತ್ ರಾಜ್ ಇಂಜಿನಿಯರಿಂಗ್ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಕಾರ್ಯಾಲಯದಲ್ಲಿ ಸ್ಥಾಪಿಸಿರುವ ಮತಗಟ್ಟೆ ಸಂಖ್ಯೆ 67 ರಲ್ಲಿ ಕುಟುಂಬ ಸಮೇತ ಆಗಮಿಸಿ ಮತ ಚಲಾಯಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಅವರು ತಮ್ಮ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಶರಣಗೌಡ ಕಂದಕೂರ ಮತದಾನ

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಕಂದಕೂರ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ 110 ಮತಗಟ್ಟೆ ಕೇಂದ್ರದಲ್ಲಿ ಮತದಾನ ಮಾಡಿದರು.

ಕಮಲಾಪುರ | ಇವಿಎಂ ಸಮಸ್ಯೆ: ಮತದಾನ ಪ್ರಕ್ರಿಯೆ 1 ಗಂಟೆ ವಿಳಂಬ

ಕಮಲಾಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಅಷ್ಟಗಿ ಗ್ರಾಮದಲ್ಲಿ ಇವಿಎಂ ಚಾಲೂ ಆಗದ ಕಾರಣ ಮತದಾನ ಪ್ರಕ್ರಿಯೆ ಒಂದು ಗಂಟೆ ಹತ್ತು ನಿಮಿಷ ವಿಳಂಬವಾಗಿ ಆರಂಭವಾಯಿತು. ಗ್ರಾಮದಲ್ಲಿ 146, 147 ಸಂಖ್ಯೆಯ ಎರಡು ಮತಗಟ್ಟೆಗಳಿವೆ.

ಇದರಲ್ಲಿ 146 ಸಂಖ್ಯೆಯ ಮತಗಟ್ಟೆಯಲ್ಲಿ ಇವಿಎಂ ಮತಯಂತ್ರ ಚಾಲೂ ಆಗಲಿಲ್ಲ. ಹೀಗಾಗಿ ಬೆಳಿಗ್ಗೆ 7ಕ್ಕೆ ಆರಂಭವಾಗಬೇಕ್ಕಿದ್ದ ಮತದಾನ ಪ್ರಕ್ರಿಯೆ 8.10ಕ್ಕೆ ಆರಂಭವಾಯಿತು. ಸುಮಾರು 1 ಗಂಟೆ 10 ನಿಮಿಷ ಕಾಲ ಮತದಾನ ಸ್ಥಗಿತಗೊಂಡಿತ್ತು ಎಂದು ಮತದಾರರು ತಿಳಿಸಿದರು.

ಕಾರವಾರ: ಮತಯಂತ್ರದಲ್ಲಿ ದೋಷ

ಕಾರವಾರ: ತಾಲ್ಲೂಕಿನ ಶಿರವಾಡದ ಮತಗಟ್ಟೆ ಸಂಖ್ಯೆ 62 ರಲ್ಲಿ ಹಾಗೂ ಶಿರಸಿಯ ಆವೆಮರಿಯಾ ಶಾಲೆಯ ಮತಗಟ್ಟೆ ಸಂಖ್ಯೆ 74 ರಲ್ಲಿ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿತು.

ಮತ ಚಲಾಯಿಸಲು ಬಂದ ಮತದಾರರು ತಾಸಿಗೂ ಹೆಚ್ಚು ಕಾಲ ಸುಸ್ತಾದರು. ಕೆಲವರು ಬೇಸರಗೊಂಡು ಮರಳಿದರು.

ಬೆಳಗಾವಿ: ಬಿಜೆಪಿ ಅಭ್ಯರ್ಥಿ ಶೆಟ್ಟರ್ ಮತದಾನ

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ನಗರದ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ ಸಂಖ್ಯೆ 26ರ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಮತಗಟ್ಟೆಯಿಂದ ಹೊರಬಂದು ವಿಜಯದ ಸಂಕೇತ ತೋರಿಸಿದರು. ಸಂಸದೆ ಮಂಗಲಾ ಅಂಗಡಿ, ಸೊಸೆ ಶ್ರದ್ಧಾ ಶೆಟ್ಟರ್ ಇದ್ದರು.

ಕಲಬುರಗಿ ಲೋಕಸಭೆ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ಮತದಾನ

ಕಲಬುರಗಿ ದಕ್ಷಿಣ ಮತಕ್ಷೇತ್ರದ ಎನ್‌ಜಿಒ ಕಾಲೊನಿಯಲ್ಲಿನ ಜವಾಹರ್ ಶಿಕ್ಷಣ ಸಂಸ್ಥೆಯ ಸೀತಾದೇವಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ 93ರಲ್ಲಿ ಬಿಜೆಪಿ ಅಭ್ಯರ್ಥಿ, ಸಂಸದ ಡಾ.ಉಮೇಶ ಜಾಧವ ಅವರು ಮತದಾನ ಮಾಡಿದರು. ಮತಚಲಾಯಿಸಿ ಹೊರಬಂದು ‌ವಿಜಯದ ಸಂಕೇತ ತೋರಿಸಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತದಾನ

ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯ ಮತಗಟ್ಟೆ ಕೇಂದ್ರದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಪುತ್ರ ವಸಂತ ಹೊರಟ್ಟಿ ಮತ್ತು ಕುಟುಂಬ ಸದಸ್ಯರೊಂದಿಗೆ ಮತದಾನ ಮಾಡಿ ಹೊರಬಂದು ಶಾಯಿ ತೋರಿಸಿದರು.

ಕಲಬುರಗಿ: ಪ್ರಿಯಾಂಕ್ ಖರ್ಗೆ, ರಾಧಾಕೃಷ್ಣ ದೊಡ್ಡಮನಿ ಮತದಾನ

ಕಲಬುರಗಿ: ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಪತ್ನಿ ಶೃತಿ ಖರ್ಗೆ ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮತದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಿಯಾಂಕ್, 'ಬಿಜೆಪಿಯ ಜನವಿರೋಧಿ ನೀತಿಯಿಂದಾಗಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ' ಎಂದರು.ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತದಾನ

ಬಳ್ಳಾರಿ: ಸಂಪ್ರದಾಯಿಕ ವೇಷಭೂಷಣದೊಂದಿಗೆ ಮತಗಟ್ಟೆಗೆ ಬಂದ ಸಿಂಧೋಳು ಜನಾಂಗ

ಬಳ್ಳಾರಿ: ತೆಕ್ಕಲಕೋಟೆ ಪಟ್ಟಣದ 1ನೇ ವಾರ್ಡಿನ ಸಂಪ್ರದಾಯಿಕ ಮತಗಟ್ಟೆ ಸಿಂಧೋಳ್ಳಿ ಕಾಲೋನಿಯ ಸಿಂಧೋಳು ಜನಾಂಗದವರು ತಮ್ಮ ಸಂಪ್ರದಾಯಿಕ ವೇಷಭೂಷಣದೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದರು ಈ ಸಂದರ್ಭದಲ್ಲಿ ಸಿರುಗುಪ್ಪ ತಹಶೀಲ್ದಾರ್ ಶಂಶಾ ಆಲಂ, ಸಿ ಪಿ ಐ ಸುಂದರೇಶ್ ಹೊಳೆಣ್ಣವರ, ಕ್ಲಸ್ಟರ್ ಅಧಿಕಾರಿ ಸಾಲಿ ಚಂದ್ರಮೌಳಿ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಸುಬ್ರಮಣ್ಯ ಹಾಜರಿದ್ದರು

ಸುರಪುರ ಉಪಚುನಾವಣೆ: ಮತಗಟ್ಟೆಗಳಲ್ಲಿ ತಾಂತ್ರಿಕ ದೋಷ

ಯಾದಗಿರಿ: ಜಿಲ್ಲೆಯ ನಾಲ್ಕು ಮತಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಅಲ್ಲಲ್ಲಿ ಮತಯಂತ್ರಗಳಲ್ಲಿ ತಾಂತ್ರಿಕ ದೋಷದಿಂದ ಮತಗಟ್ಟೆಗಳಲ್ಲಿ ಮತದಾನ ತಡವಾಗಿ ಆರಂಭವಾಯಿತು.

ಸುರಪುರ ನಗರದ ಆನಂದ ವಿದ್ಯಾಲಯ ಮತ್ತು ರಾಣಿ ಜಾನಕಿ ದೇವಿ ಶಾಲೆ ಮತಗಟ್ಟೆಗಳಲ್ಲಿ ತಾಂತ್ರಿಕ ತೊಂದರೆಯಿಂದ 15 ನಿಮಿಷ ತಡವಾಗಿ ಮತದಾನ ಆರಂಭವಾಯಿತು.

ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಬೂತ್ ಸಂಖ್ಯೆ 1ರಲ್ಲಿ ತಾಂತ್ರಿಕ ತೊಂದರೆಯಿಂದ ಅರ್ಧಗಂಟೆ ತಡವಾಗಿ ಮತದಾನ ಆರಂಭವಾಯಿತು.

ಮತದಾನಕ್ಕೆ ದೌಡಾಯಿಸುತ್ತಿರುವ ಮತದಾರರು: ಬಿಸಿಲಿನ ಪ್ರಖರತೆ 7 ಗಂಟೆಯಿಂದಲೇ ಹೆಚ್ಚಿದ್ದು ಮತ್ತಷ್ಟು ಬಿಸಿಲು ಬರುವ ಮುನ್ನವೇ ಮತದಾರರು ಮತಗಟ್ಟೆಗಳಿಗೆ ಬರುತ್ತಿದ್ದಾರೆ. ಬಿಸಿಲು ಹೆಚ್ಚಿರುವ ಕಾರಣ ಜಿಲ್ಲಾಡಳಿತ ವತಿಯಿಂದ ಮತಗಟ್ಟೆಗಳಲ್ಲಿ ಶಾಮಿಯಾ‌ನ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಮೊದಲ ಬಾರಿಗೆ ಮತ ಚಲಾಯಿಸಿದ ಸಂಭ್ರಮ

ವಿಜಯಪುರ: ವಿಜಯಪುರ ಎಸ್‌ಸಿ ಮೀಸಲು ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ಬೂತ್ ಸಂಖ್ಯೆ 127 ರಲ್ಲಿ ಶ್ರೀರಕ್ಷಾ ಘಾಟಗಿ ಮೊದಲ ಬಾರಿಗೆ ಮತ ಚಲಾಯಿಸಿದರು.

'ನಾನು ಪ್ರಥಮ ಬಾರಿಗೆ ಮತ ಚಲಾಯಿಸಿದ್ದು ಖುಷಿಯಾಗಿದೆ. ಎಲ್ಲ ಯುವಕ-ಯುವತಿಯರು ಸ್ವಯಂ ಪ್ರೇರಿತರಾಗಿ ಬೂತ್ ಗೆ ಬಂದು ಮತ ಚಲಾಯಿಸಿ' ಎಂದು ಶ್ರೀರಕ್ಷಾ ಸಂತಸ ವ್ಯಕ್ತಪಡಿಸಿದರು.

ಶ್ರೀರಕ್ಷಾ

ಊಡಗಿ: ಮತಚಲಾಯಿಸಿದ ಸಚಿವ ಡಾ.ಶರಣಪ್ರಕಾಶ ಪಾಟೀಲ

ಸೇಡಂ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಊಡಗಿ ಗ್ರಾಮದ 136ನೇ ಮತಗಟ್ಟೆ ಕೇಂದ್ರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಪತ್ನಿ ಡಾ.ಭಾಗ್ಯಶ್ರೀ ಪಾಟೀಲ ಅವರ ಜೊತೆಗೆ ಮತಚಲಾಯಿಸಿದರು.‌

ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದ ಸಚಿವರು, ಬಳಿಕ ಶಾಹಿ ಹಚ್ಚಿದ ಬೆರಳು ತೋರಿಸಿದರು. 'ಎಲ್ಲರೂ ಮತಗಟ್ಟೆ ಕೇಂದ್ರಗಳಿಗೆ ಬಂದು ತಮ್ಮ ಮತಚಲಾಯಿಸಬೇಕು' ಎಂದು ಕೋರಿದರು.‌

ಈ ಸಂದರ್ಭದಲ್ಲಿ ಸಚಿವರ ಸಹೋದರರಾದ ಬಸವರಾಜ ಪಾಟೀಲ ಊಡಗಿ, ಡಾ. ಓಂಪ್ರಕಾಶ ಪಾಟೀಲ, ಜೈ ಪ್ರಕಾಶ ಪಾಟೀಲ, ಮುಖಂಡ ಸಂಪತಕುಮಾರ ಭಾಂಜಿ, ರೇವಣಸಿದ್ದಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾರವಾರ: ಮತ ಚಲಾಯಿಸಿದ ಜಿಲ್ಲಾಧಿಕಾರಿ

ಕಾರವಾರ: ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಇಲ್ಲಿನ ಅಲಿಗದ್ದಾದಲ್ಲಿರುವ ಅಂಗನವಾಡಿ ಕೇಂದ್ರದ ಮತಗಟ್ಟೆ ಸಂಖ್ಯೆ 109ರಲ್ಲಿ ಮತ ಚಲಾಯಿಸಿದರು.

ಅವರೊಂದಿಗೆ ಪುತ್ರಿ ತ್ರಿಷಿಕಾ, ಸಹೋದರನ ಪುತ್ರ ಅಭಿಷೇಕ ಕೂಡ ಆಗಮಿಸಿ ಮತ ಚಲಾಯಿಸಿದರು. ಇವರಿಬ್ಬರೂ ಇದೇ ಮೊದಲ ಬಾರಿ ಮತ ಚಲಾಯಿಸಿದರು.

'ಜಿಲ್ಲೆಯ ಕೆಲವು ಕಡೆ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿದೆ. ಬಹುತೇಕ ಎಲ್ಲ ದುರಸ್ತಿಯಾಗಿದೆ. ದುರಸ್ತಿಯಾಗದ ಮತಯಂತ್ರ ಬದಲಿಸಲು ಎಂಜಿನಿಯರ್ ಗಳಿಂದ ಪ್ರಮಾಣ ಪತ್ರ ಸಿಗಬೇಕಿದೆ. ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಳ್ಳಲಾಗುವುದು' ಎಂದು ಜಿಲ್ಲಾಧಿಕಾರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ದಾವಣಗೆರೆ: ಮತದಾನ ಬಿರುಸು, ಸಂಸದ ಜಿ.ಎಂ.ಸಿದ್ದೇಶ್ವರ ದಂಪತಿ ಮತದಾನ

ದಾವಣಗೆರೆ: ಜಿಲ್ಲೆಯಾದ್ಯಂತ 1693 ಮತಗಟ್ಟೆಗಳಲ್ಲಿ ಬೆಳಿಗ್ಗೆ 7ರಿಂದಲೇ ಮತದಾನ ಆರಂಭವಾಗಿದ್ದು, ಬಿರುಸಿನಿಂದ ಸಾಗಿದೆ.

ಹರಿಹರ ತಾಲ್ಲೂಕಿನ ಮಲೇಬೆನ್ನೂರು ಹೋಬಳಿಯ ಜಿ.ಬೇವಿನಹಳ್ಳಿ ಯಕ್ಕೆಗುಂದ ಗ್ರಾಮದ ಮತಗಟ್ಟೆಗಳಲ್ಲಿ ತಾಂತ್ರಿಕ ದೋಷದಿಂದ ಮತದಾನ ವಿಳಂಬವಾಗಿ ಆರಂಭವಾಯಿತು.

ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹಾಗೂ ಸಂಸದ ಜಿ.ಎಂ.ಸಿದ್ದೇಶ್ವರ ದಂಪತಿ ನಗರದ ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ದಾವಣಗೆರೆಯ ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮತದಾನ ಮಾಡಿದರು

ವಿಜಯಪುರ: ಸಂಸದ, ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮತ ಚಲಾವಣೆ

ವಿಜಯಪುರ: ವಿಜಯಪುರ ಎಸ್ ಸಿ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂಸದ ರಮೇಶ ಜಗಜಿಣಗಿ ಅವರು ಭೂತನಾಳ ತಾಂಡದ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಕ್ಷೇತ್ರದಲ್ಲಿ ಬಿಜೆಪಿ ಪರ ಮತದಾರರ ಒಲವು ವ್ಯಕ್ತವಾಗಿದೆ. ಮತದಾರರು ಉತ್ಸಾಹದಿಂದ ಸರದಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿರುವುದು ಖುಷಿ ನೀಡಿದೆ. ಬಿಜೆಪಿ ಗೆಲುವು ನಿಶ್ಚಿತ ಎಂದು ಅವರು ಹೇಳಿದರು.

ವಿಜಯನಗರ ಜಿಲ್ಲೆ: 10 ಮತಗಟ್ಟೆಗಳಲ್ಲಿ ತಾಂತ್ರಿಕ ದೋಷ

ಹೊಸಪೇಟೆ (ವಿಜಯನಗರ): ‘ಜಿಲ್ಲೆಯಲ್ಲಿ ಮತದಾನ ಶಾಂತಿಯುತವಾಗಿ ಹಾಗೂ ಉತ್ಸಾಹದಿಂದ ನಡೆದಿದೆ. ಆದರೆ ಹತ್ತು ಮತಗಟ್ಟೆಗಳಲ್ಲಿನ ವಿದ್ಯುನ್ಮಾನ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು’ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್ ತಿಳಿಸಿದ್ದಾರೆ.

‘ಸದ್ಯ ಎಲ್ಲಾ ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗಿದ್ದು, ಮತದಾನ ಪುನರಾರಂಭವಾಗಿದೆ. ಒಟ್ಟಾರೆ 20ರಿಂದ 30 ನಿಮಿಷಗಳಷ್ಟು  ಸಮಯ ಮತದಾನ ಪ್ರಕ್ರಿಯೆಗೆ ಅಡ್ಡಿ ಉಂಟಾಗಿತ್ತು. ಈಗ ಎಲ್ಲವೂ ಸುಗಮವಾಗಿ ಸಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಹಾವೇರಿಯಲ್ಲಿ ನ್ಯಾಯಾಧೀಶರಿಂದ ಮತದಾನ

ಹಾವೇರಿಯ ಮತಗಟ್ಟೆ ಸಂಖ್ಯೆ 219ರಲ್ಲಿ ಕೆ.ಸಿ ಸದಾನಂದಸ್ವಾಮಿ ದಂಪತಿ ಮತದಾನ ಮಾಡಿದರು

ವಿ.ಬಿ ದೊಡ್ಡಮನಿ ಮತ್ತು ಕುಟುಂಬದವರು ಹಾವೇರಿಯ ಲಯನ್ಸ್ ಶಾಲೆಯಲ್ಲಿ ಮತ ಚಲಾಯಿಸಿದರು

ಕೊಪ್ಪಳ: ಸರತಿಯಲ್ಲಿ ನಿಂತು ಹಕ್ಕು ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಕ್ಯಾವಟರ್

ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಜಿಲ್ಲೆಯ ಕುಷ್ಟಗಿ ಪಟ್ಟಣದ ವಿದ್ಯಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸರತಿಯಲ್ಲಿ‌ ನಿಂತು ಮತದಾನ ಮಾಡಿದರು.

ಬಳಿಕ ಮಾಧ್ಯಮದವರ ಜೊತೆ ಮಾತನಾಡಿ ಮತದಾರರು ಬಿಜೆಪಿ ಪರ ಒಲವು ತೋರಿದ್ದು, ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತವಾಗಿದೆ. ದೇಶದಲ್ಲಿ ಬಿಜೆಪಿ ಗೆದ್ದರೆ ಪ್ರಜಾಪ್ರಭುತ್ವ ಗೆದ್ದಂತೆ ಎಂದರು.

ದೇಶದಲ್ಲಿ ಮೂರನೇ ಹಂತದ ಮತದಾನ ನಡೆಯುತ್ತಿದ್ದು, ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡಿ. ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿ ಎಂದರು.

ಕೊಪ್ಪಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಮತ ಚಲಾಯಿಸಿದರು

ಉತ್ತರ ಕನ್ನಡ: 9 ಗಂಟೆವರೆಗೆ ಶೇ.11.42 ರಷ್ಟು ಮತದಾನ

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ ಶೇ‌.11.42 ರಷ್ಟು ಮತದಾನವಾಗಿದೆ.

ಶಿರಸಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.13.66, ಯಲ್ಲಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.12.05, ಖಾನಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.11.47, ಹಳಿಯಾಳ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.10.82, ಕುಮಟಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.12.98, ಭಟ್ಕಳ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.11.64, ಕಾರವಾರ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.10.97, ಕಿತ್ತೂರು ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.8.32 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾ ಕಚೇರಿ ತಿಳಿಸಿದೆ.

ಚಿಕ್ಕೋಡಿ: ಹಕ್ಕು ಚಲಾಯಿಸಿದ ಜೊಲ್ಲೆ ಕುಟುಂಬ

ಚಿಕ್ಕೋಡಿ: ತಾಲ್ಲೂಕಿನ ಯಕ್ಸಂಬಾ ಪಟ್ಟಣದ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 28 ರಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ, ಪತ್ನಿ, ಶಾಸಕಿ ಶಶಿಕಲಾ ಜೊಲ್ಲೆ, ಹಿರಿಯ ಪುತ್ರ ಜ್ಯೋತಿಪ್ರಸಾದ ಜೊಲ್ಲೆ, ಸೊಸೆ ಪ್ರಿಯಾ ಜ್ಯೋತಿಪ್ರಸಾದ ಜೊಲ್ಲೆ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು.

ಕಲಬುರಗಿ: ಜಿಲ್ಲೆಯ ಹಲವೆಡೆ ಬಿರುಸಿನ ಮತದಾನ

ಕಲಬುರಗಿ: ಕಲಬುರಗಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಸಿಲೇರುವ ಭೀತಿಯಿಂದ ಬೆಳಿಗ್ಗೆಯೇ ಮತಗಟ್ಟೆಗಳ ಬಳಿ ಮತದಾನಕ್ಕಾಗಿ ಸಾಲುಗಟ್ಟಿ ನಿಂತಿದ್ದಾರೆ.

ಕಲಬುರಗಿ ನಗರದ ಕೋಟನೂರು, ಹಳೇ ಜೇವರ್ಗಿ ರಸ್ತೆ, ಹೊಸ ಜೇವರ್ಗಿ ರಸ್ತೆ, ಎಂಎಸ್ ಕೆ ಮಿಲ್, ಬ್ರಹ್ಮಪುರ ಸೇರಿದಂತೆ ಹಲವು ಮತಗಟ್ಟೆಗಳ ಬಳಿ ದಟ್ಟಣಿ ಕಂಡು ಬಂತು‌.

ಬೀದರ್: ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮತದಾನ

ಬೀದರ್ ಜಿಲ್ಲೆಯ ಔರಾದ್ ಪಟ್ಟಣದ ಮತಗಟ್ಟೆ ಸಂಖ್ಯೆ 84ರಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಪತ್ನಿ ಶೀಲಾ, ಮಕ್ಕಳೊಂದಿಗೆ ಮತದಾನ ಮಾಡಿದರು.

ಧಾರವಾಡ: ಸಾಹಿತಿ ಸಿದ್ದಲಿಂಗ ಪಟ್ಟಣ ಶೆಟ್ಟಿ, ಹೇಮಾ ಪಟ್ಟಣಶೆಟ್ಟಿ ಮತದಾನ

ಧಾರವಾಡ: ಸಾಹಿತಿ ಸಿದ್ದಲಿಂಗ ಪಟ್ಟಣ ಶೆಟ್ಟಿ, ಹೇಮಾ ಪಟ್ಟಣಶೆಟ್ಟಿ ಮತದಾನ ಮಾಡಿ, ಬೆರಳಿನ ಶಾಯಿ ಗುರುತು ತೋರಿದರು.

ಬಳ್ಳಾರಿ: ಗೌಪ್ಯಮತದಾನ ನಿಯಮ ಉಲ್ಲಂಘಿಸಿದ ಕಾರ್ಪೊರೇಟರ್

ಬಳ್ಳಾರಿ: ಬಳ್ಳಾರಿಯ ವಾರ್ಡ್ ನಂ. 35ರ ಮತಗಟ್ಟೆ ಸಂಖ್ಯೆ 63ರಲ್ಲಿ ಮತ ಚಲಾಯಿಸಿದ ಬಿಜೆಪಿ ಕಾರ್ಪೊರೇಟರ್ ಕೋನಂಕಿ ತಿಲಕ್ ಅವರು ಗೌಪ್ಯ ಮತದಾನದ ನಿಯಮ ಉಲ್ಲಂಘಿಸಿದ್ದಾರೆ.

ಬಿಜೆಪಿಗೆ ಮತ ಹಾಕಿ, ಫೋಟೊ ತೆಗೆದುಕೊಂಡಿರುವ ತಿಲಕ್, ಅದನ್ನು ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದಾರೆ. ತಿಲಕ್ ಅವರು ಬಳ್ಳಾರಿ ಪಾಲಿಕೆಯ 10ನೇ ವಾರ್ಡ್ ನ ಸದಸ್ಯ.

ಬಳ್ಳಾರಿ ಲೋಕಸಭಾ ಕ್ಷೇತ್ರ: ಬೆಳಗ್ಗೆ 9.30ರವರೆಗೆ ಒಟ್ಟು ಶೇ.10.37 ಮತದಾನ

ಬಳ್ಳಾರಿ ಗ್ರಾಮೀಣ - ಶೇ 11.06

ಬಳ್ಳಾರಿ ನಗರ - ಶೇ10.43.

ಹೂವಿನಹಡಗಲಿ - ಶೇ 6.60

ಹಗರಿಬೊಮ್ಮನಹಳ್ಳಿ- ಶೇ 9.24

ಕಂಪ್ಲಿ - ಶೇ 13.06.

ಕೂಡ್ಲಿಗಿ - ಶೇ.10.09.

ಸಂಡೂರು - ಶೇ 9.91

ವಿಜಯನಗರ - ಶೇ 11.83

ಹಾವೇರಿ : ಸಾವಿನ ದುಃಖದಲ್ಲೂ ಮತದಾನ ಮಾಡಿದ ಕುಟುಂಬ

ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ಗ್ರಾಮದ ವಾಟರ್ ಮ್ಯಾನ್ ನಾಗಪ್ಪ ಕಾಳಂಗಿ ಸೋಮವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇವರ ಅಂತ್ಯಸಂಸ್ಕಾರವೂ ಕೂಡಾ ಆಗಿಲ್ಲ. ಆದರೂ ಪತ್ನಿ ಚಿನ್ನವ್ವ, ಮಗ ಮಾಲತೇಶ, ಮಗಳು ಜ್ಯೋತಿ ದುಃಖದ ಮಡುವಿನಲ್ಲಿದ್ದರೂ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವ ಮೂಲಕ ಎಲ್ಲರೂ ಮತ ಚಲಾಯಿಸುವಂತೆ ಸಂದೇಶ ಸಾರಿದ್ದಾರೆ.

ಬೀದರ್ ಲೋಕಸಭಾ ಕ್ಷೇತ್ರ: ಬೆಳಿಗ್ಗೆ 9ರವರೆಗೆ ಶೇ 8.9 ಮತದಾನ

ಧಾರವಾಡ ಲೊಕಸಭಾ ಕ್ಷೇತ್ರ: ಬೆಳಿಗ್ಗೆ 9ಕ್ಕೆ ಶೇ 9.38 ಮತದಾನ

ಧಾರವಾಡ: ಧಾರವಾಡ ಲೊಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 9ಕ್ಕೆ ಶೇ 9.38 ಮತದಾನವಾಗಿದೆ.

ವಿಧಾನಸಭಾ ಕ್ಷೇತ್ರವಾರು ನವಲಗುಂದ ಶೇ 7.88, ಕುಂದಗೋಳ ಶೇ 5.8, ಧಾರವಾಡ ಶೇ 10.51, ಹುಬ್ಬಳ್ಳಿ-ಧಾರವಾಡ ಪೂರ್ವ ಶೇ 11.32, ಹುಬ್ಬಳ್ಳಿ-ಧಾರವಾಡ ಕೇಂದ್ರ ಶೇ 11.30, ಹುಬ್ಬಳ್ಳಿ-ಧಾರವಾಡ ಪೂರ್ವ ಶೇ 10.5, ಕಲಘಟಗಿ ಶೇ 8.14 ಹಾಗೂ ಶಿಗ್ಗಾವಿ ಶೇ 8.29 ಮತದಾನವಾಗಿದೆ.

ಕಲಬುರಗಿಯಲ್ಲಿ ಶೇ 8.71ರಷ್ಟು ಮತದಾನ

ಕಲಬುರಗಿ: ಕಲಬುರಗಿ ಲೋಕಸಭಾ ‌ಮೀಸಲು ಕ್ಷೇತ್ರದಲ್ಲಿ ಬೆಳಿಗ್ಗೆ‌ 9.31ರ ವರೆಗೆ ಶೇ 8.71ರಷ್ಟು ಮತದಾನವಾಗಿದೆ.

ಅಫಜಲಪುರದಲ್ಲಿ ಶೇ 8.60, ಚಿತ್ತಾಪುರದಲ್ಲಿ ಶೇ 8.83ರಷ್ಟು, ಜೇವರ್ಗಿಯಲ್ಲಿ‌‌ ಶೇ 7.73ರಷ್ಟು, ಕಲಬುರಗಿ ದಕ್ಷಿಣದಲ್ಲಿ ಶೇ 9.29ರಷ್ಟು, ಕಲಬುರಗಿ ಉತ್ತರದಲ್ಲಿ ಶೇ 10.47ರಷ್ಟು, ಕಲಬುರಗಿ ಗ್ರಾಮೀಣಲ್ಲಿ ಶೇ 7.95ರಷ್ಟು, ಸೇಡಂನಲ್ಲಿ ಶೇ 9.15ರಷ್ಟು ಹಾಗೂ ಗುರುಮಠಕಲ್‌ನಲ್ಲಿ ಶೇ 7.18ರಷ್ಟು ಮತಗಳು ಚಲಾವಣೆಯಾಗಿವೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರ: 9 ಗಂಟೆವರೆಗೆ ಶೇ 10.79 ರಷ್ಟು ಮತದಾನ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಶೇಕಡ 10.79 ರಷ್ಟು ಮತದಾನವಾಗಿದ್ದು, 1 ಲಕ್ಷ 90 ಸಾವಿರ 38 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಅದರಲ್ಲೂ ಯುವಕರು, ಮಹಿಳೆಯರು ಮತಗಟ್ಟೆಗಳಲ್ಲಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ದೃಶ್ಯಗಳು ಬಹುತೇಕ ಮತಗಟ್ಟೆಗಳಲ್ಲಿ ಕಂಡು ಬಂದವು.

ಹಾವೇರಿ ಲೋಕಸಭಾ ಕ್ಷೇತ್ರ: ಶೇ 8.62ರಷ್ಟು ಮತದಾನ

ಹಾವೇರಿ: ಹಾವೇರಿ ಮತ್ತು ಗದಗ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಎರಡು ಗಂಟೆಯಲ್ಲಿ ಶೇ 8.62 ರಷ್ಟು ಮತದಾನವಾಗಿದೆ.

ಬ್ಯಾಡಗಿ -ಶೇ 9.15,

ಗದಗ- ಶೇ 9.60

ಹಾನಗಲ್-ಶೇ 9.19

ಹಾವೇರಿ - ಶೇ 8.86

ಹಿರೇಕೆರೂರು- ಶೇ 8.85

ರಾಣೆಬೆನ್ನೂರ- ಶೇ 9.85

ರೋಣ - ಶೇ 6.79

ಶಿರಹಟ್ಟಿ - ಶೇ 7.33 ರಷ್ಟು ಮತದಾನವಾಗಿದೆ.

ಹಾವೇರಿ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮತದಾನ

ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಪುತ್ರ ಭರತ್ ಅವರೊಂದಿಗೆ ಶಿಗ್ಗಾವಿ ಪಟ್ಟಣದಲ್ಲಿ ಮತದಾನ ಮಾಡಿದರು.

ಬಾಗಲಕೋಟೆ ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಮತದಾನ

ಬಾದಾಮಿ ಟಿಎಪಿಸಿಎಂಎಸ್(162) ಮತಗಟ್ಟೆಯಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಮತವನ್ನು ಚಲಾಯಿಸಿ ಐದನೇ ಬಾರಿ 2ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ವಿಜಯಪುರ ಲೋಕಸಭಾ ಕ್ಷೇತ್ರ: ಬೆಳಿಗ್ಗೆ  9ರವರೆಗೆ ಶೇ 9.22 ರಷ್ಟು ಮತದಾನ

ವಿಜಯಪುರ: ವಿಜಯಪುರ ಲೋಕಸಭಾ ಸಭೆ ಕ್ಷೇತ್ರಕ್ಕೆ ಬೆಳಿಗ್ಗೆ 9ರ ವರೆಗೆ ಶೇ 9.22ರಷ್ಟು ಮತದಾನವಾಗಿದೆ.

ವಿಜಯಪುರ ವಿಧಾನಸಭೆ ಕ್ಷೇತ್ರದಲ್ಲಿ ಶೇ 12.71, ಬಬಲೇಶ್ವರ ಶೇ 10.26, ನಾಗಠಾಣ ಶೇ 9.25, ಬಸವನ ಬಾಗೇವಾಡಿ ಶೇ 9.07, ಸಿಂದಗಿ ಶೇ 8.52, ಮುದ್ದೇಬಿಹಾಳ ಶೇ 8.13, ದೇವರ ಹಿಪ್ಪರಗಿ ಶೇ 7.63, ಇಂಡಿ ಶೇ 7.51 ಸೇರಿದಂತೆ ಒಟ್ಟು ಶೇ 9.22ರಷ್ಟು ಮತದಾನವಾಗಿದೆ.

ಬಳ್ಳಾರಿ: ಕೃಷ್ಣನಗರ ಕ್ಯಾಂಪ್‌ನಲ್ಲಿ ಉತ್ತಮ ಮತದಾನ

ಬಳ್ಳಾರಿ: ಮತ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದ ಕೃಷ್ಣ ನಗರ ಕ್ಯಾಂಪ್ ಗ್ರಾಮದಲ್ಲಿ ಉತ್ತಮ ಮತದಾನ ನಡೆದಿದೆ.

ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕ್ಯಾಂಪ್‌ನಲ್ಲಿ ರೈತರ ಜಮೀನುಗ ಪಹಣಿಯಲ್ಲಿ ದೋಷ ಕಂಡು ಬಂದಿತ್ತು. ಹೀಗಾಗಿ ಗ್ರಾಮಸ್ತರು ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದರು.

ಸದ್ಯ ವಾರದ ಹಿಂದೆ ಸಮಸ್ಯೆ ಬಗೆಹರಿದಿದ್ದು ಉತ್ಸಾಹದಿಂದ ಮತದಾನ ನಡೆಯುತ್ತಿದೆ. ಗ್ರಾಮದಲ್ಲಿ ಒಟ್ಟು 550 ಮತಗಳಿವೆ.

ರೈಲು ಎಂಜಿನ್‌ನಲ್ಲಿ ದೋಷ: ಸೈದಾಪುರದಲ್ಲೇ ಉಳಿದ ಬೀದರ್ ಮತದಾರರು!

ಕಲಬುರಗಿ: ಮತದಾನಕ್ಕೆ ಬರುವ ಬೆಂಗಳೂರಿನಿಂದ ಸೋಮವಾರ ರಾತ್ರಿ ಹೊರಟ ಬೆಂಗಳೂರು-ಬೀದರ್ ವಿಶೇಷ ರೈಲಿನ ಎಂಜಿನ್ ದೋಷದಿಂದಾಗಿ ಯಾದಗಿರಿ ಜಿಲ್ಲೆಯ ಸೈದಾಪುರ ನಿಲ್ದಾಣದಲ್ಲಿಯೇ ನಿಂತಿದೆ.

ಬೆಳಿಗ್ಗೆ 8ಕ್ಕೆ ರೈಲು ಸೈದಾಪುರ ನಿಲ್ದಾಣಕ್ಕೆ ಬರುತ್ತಿದ್ದಂತೆ ಎಂಜಿನ್‌ನಲ್ಲಿ ದೋಷ ಕಾಣಿಸಿಕೊಂಡಿತು. ರೈಲ್ವೆ ಅಧಿಕಾರಿಗಳು ಮತ್ತೊಂದು ಎಂಜಿನ್ ತರಿಸಿದರು. ಆದರೆ, ಬೋಗಿಗೆ ಇರುವ ಎಂಜಿನ್ ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರಯಾಣಿಕರೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.

ದಾವಣಗೆರೆ: ಶೇ 9.9ರಷ್ಟು ಮತದಾನ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 9 ಗಂಟೆಯ ವೇಳೆಗೆ ಶೇ 9.9ರಷ್ಟು ಮತದಾನವಾಗಿದೆ.

ಶಿವಮೊಗ್ಗ: ಮತ ಹಾಕಿದವರಿಗೆ ಕಿರೀಟ ಧಾರಣೆಗೆ ಅವಕಾಶ!

ಶಿವಮೊಗ್ಗ: ಇಲ್ಲಿನ ಕುವೆಂಪು ರಸ್ತೆಯ ಜಿಲ್ಲಾ ಪಂಚಾಯ್ತಿ ಆಡಳಿತ ಕಚೇರಿಯ ಮತಗಟ್ಟೆ ಸಂಖ್ಯೆ 283ನ್ನು ಅರಮನೆ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಎಲ್ಲರ ಗಮನ ಸೆಳೆಯುತ್ತಿದೆ.

ಮತಗಟ್ಟೆಯಲ್ಲಿ ಕರ್ತವ್ಯ ನಿರತ ಸಿಬ್ಬಂದಿ ರಾಜ-ರಾಣಿಯ ಪೋಷಾಕಿನಲ್ಲಿ ಗಮನ ಸೆಳೆಯುತ್ತಿದ್ದಾರೆ.

ಮತ ಹಾಕಿದ ನಂತರ ಮತದಾರರು ಕಿರೀಟ ಧರಿಸಿ, ಸಿಂಹಾಸನದಲ್ಲಿ ಕುಳಿತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು, ಫೋಟೊ ತೆಗೆಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.ಉ ಪ್ರಜಾಪ್ರಭುತ್ವದಲ್ಲಿ ಮತದಾರರೇ ಮಹಾರಾಜರು ಎಂಬ ಆಶಯದೊಂದಿಗೆ ಈ ವ್ಯವಸ್ಥೆ ಮಾಡಲಾಗಿದೆ ಎಂದು ಮತಗಟ್ಟೆ ಸಿಬ್ಬಂದಿ ಮಾಹಿತಿ ನೀಡಿದರು.

ಚಿಕ್ಕೋಡಿ: ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಮತದಾನ

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರು ಹುಕ್ಕೇರಿ ತಾಲ್ಲೂಕಿನಲ್ಲಿದೆ ಯಮಕನಮರಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳೆ ವಂಟಮೂರಿ ಗ್ರಾಮದ ಮತಗಟ್ಟೆ ಸಂಖ್ಯೆ 95ರಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಚಿಕ್ಕೋಡಿ ಲೋಕಸಭಾ ಕ್ಷೇತ್ರ: ಹಕ್ಕು ಚಲಾಯಿಸಿದ ಶತಾಯುಷಿ

ಕಾಗವಾಡ (ಬೆಳಗಾವಿ ಜಿಲ್ಲೆ): ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾಗವಾಡ ತಾಲ್ಲೂಕಿನ ಕೆಂಪವಾಡ ಗ್ರಾಮದಲ್ಲಿ 103 ವಯಸ್ಸಿನ ನೀಲವ್ವ ಶಿವಗೌಡ ಗಾಳಿ ಅವರು ಉತ್ಸಾಹದಿಂದ ಮತ ಚಲಾಯಿಸಿದರು.

ಮನೆ ಮನೆ ಮತದಾನ ಅಭಿಯಾನದಲ್ಲಿ ಭಾಗವಹಿಸಲು ನಿರಾಕರಿಸಿದ ಈ ಹಿರಿಯರು ಮತಗಟ್ಟೆಗೆ ಬಂದು ಮತಚಲಾಯಿಸುವುದಾಗಿ ತಿಳಿಸಿದರು. ಅದರಂತೆ ಇಂದು ಇಲ್ಲಿನ ಮತಗಟ್ಟೆ 90 ರಲ್ಲಿ ತಮ್ಮ ಪುತ್ರರೊಂದಿಗೆ ಆಗಮಿಸಿ ಮತ ಚಲಾಯಿಸಿದರು.

ನಿರಾಯಾಸವಾಗಿ ಮಡೆದುಕೊಂದು ಬಂದ ಅಜ್ಜಿಯನ್ನು ಕಂಡು ಮತಗಟ್ಟೆ ಸುತ್ತಲಿನ ಜನ ನಿಬ್ಬೆರಗಾದರು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪತ್ನಿ ರಾಧಾಬಾಯಿ ಖರ್ಗೆ ಮತದಾನ

ಕಲಬುರಗಿ: ಎಐಸಿಸಿ ಅಧ್ಯಕ್ಷ, ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪತ್ನಿ ರಾಧಾಬಾಯಿ ಖರ್ಗೆ ಅವರು ಮತ ಚಲಾಯಿಸಿದರು.

ನಗರದ ಬ್ರಹ್ಮಪುರ ಬಡಾವಣೆಯ ಬಸವನಗರದ ಕನ್ನಡ ಹಿರಿಯ ಪ್ರಾಥಮಿಕ‌ ಶಾಲೆಯ ಮತಗಟ್ಟೆಗೆ ಬಂದು ತಮ್ಮ ಹಕ್ಕ ಚಲಾಯಿಸಿದರು.

ಈ ವೇಳೆ ಶಾಸಕ ಅಲ್ಲಮಪ್ರಭು ಪಾಟೀಲ ಇತರೆ ಮುಖಂಡರು ಉಪಸ್ಥಿತರಿದ್ದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪತ್ನಿ ರಾಧಾಬಾಯಿ ಖರ್ಗೆ ಮತ ಚಲಾಯಿಸಿದರು.

ಹುಬ್ಬಳ್ಳಿ: ಬಿರುಸಿನ ಮತದಾನ

ಹುಬ್ಬಳ್ಳಿ: ತಾಲ್ಲೂಕಿನ ಅದರಗುಂಚಿ‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿರುಸಿನ ಮತದಾನ ಕಂಡ ಬಂದಿತು.‌

ಯುವಕರು, ಹಿರಿಯರು, ಮಹಿಳೆಯರು ಸೇರಿದಂತೆ ಎಲ್ಲರೂ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು. 80 ವಯಸ್ಸಿನ ಲಕ್ಷ್ಮವ್ವ ಸೊರಟೂರ ಅವರನ್ನು ಸಂಬಂಧಿಕರೊಬ್ಬರು ಎತ್ತಕೊಂಡು ಬಂದು ಮತದಾನ ಮಾಡಿಸಿದರು.

ಮಂಜಮ್ಮ ಜೋಗತಿ ಮತದಾನ

ಮಂಜಮ್ಮ ಜೋಗತಿ ಅವರು ಭಾಗ್ಯಮ್ಮ ಜೋಗತಿ ಅವರೊಂದಿಗೆ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯ ಮತಗಟ್ಟೆ ಸಂಖ್ಯೆ 60ರಲ್ಲಿ ಮತದಾನ ಮಾಡಿದರು.

ಅಂತರರಾಷ್ಟ್ರೀಯ ಅಂಗವಿಕಲ ಈಜು ಪಟು ಮೋಯಿನ್ ಹಕ್ಕು ಚಲಾವಣೆ

ಬೆಳಗಾವಿ: ಅಂತರರಾಷ್ಟ್ರೀಯ ಈಜುಪಟು, ಅಂಗವಿಕಲರಾದ ಮೋಯಿನ್ ಅವರು ನಗರದ ಬಾಲಿಕಾ ಆದರ್ಶ ವಿದ್ಯಾಲಯ ಶಾಲೆಯ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು.

ವಿಶೇಷ ಮತದಾರ ಆದ ಅವರು ಸಂಬಂಧಿಕರು‌ ಹಾಗೂ ಮತಗಟ್ಟೆ ಸಿಬ್ಬಂದಿ ನೆರವಿನೊಂದಿಗೆ ಗಾಲಿಕುರ್ಚಿಯಲ್ಲಿ ಬಂದರು.

ಬಹು ಅಂಗವೂಣ ಸಮಸ್ಯೆ ಹೊಂದಿರುವ ಅವರು ನಡೆಯಲು ಸಾಧ್ಯವಿಲ್ಲ. ಆದರೂ ಉತ್ಸಾಹದಿಂದ ಬಂದು ತಮ್ಮ ಹಕ್ಕು ಚಲಾಯಿಸಿ‌ ಮಾದರಿಯಾದರು.

ಅಂಗವಿಕಲರ ವಿಭಾಗದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೂಡ ಮೋಯಿನ್ ಹಲವು ಪದಕಗಳನ್ನು ಬಾಚಿಕೊಂಡಿದ್ದಾರೆ.

ದಾವಣಗೆರೆ: ಪಕ್ಷೇತರ ಅಭ್ಯರ್ಥಿ ವಿನಯಕುಮಾರ್ ಮತದಾನ

ದಾವಣಗೆರೆ: ಪಕ್ಷೇತರ ಅಭ್ಯರ್ಥಿ ವಿನಯಕುಮಾರ್ ಅವರು ದಾವಣಗೆರೆ ತಾಲ್ಲೂಕಿನ ಕರೂರು ಅಂಗನವಾಡಿ ಕೇಂದ್ರ ಅವರು ಮತ ಚಲಾಯಿಸಿದರು.

ಬಳಿಕ ಮಾತನಾಡಿದ ಅವರು, ಮತದಾನ ಮಾಡುವ ಮೂಲಕ ನನ್ನ ಪರಮಾಧಿಕಾರ ಚಲಾಯಿಸಿದ್ದೇನೆ ಎಂದರು. ಕ್ಷೇತ್ರದ ಎಲ್ಲ ಮತದಾನ ಕೇಂದ್ರಗಳಲ್ಲಿ ಬಿರುಸಿನ ಮತದಾನ ನಡೆದಿದೆ. ಜ‌ನ ಅತೀ ಹೆಚ್ಚು ಸಂಖ್ಯೆಯಲ್ಲಿ ಹೊರಬಂದು ಮತ ಚಲಾಯಿಸಬೇಕು. ನಿಮ್ಮ ಸ್ವಾಭಿಮಾನ, ಆತ್ಮಸಾಕ್ಷಿಗೆ ಅನುಗುಣ ಒಳ್ಳೆಯ ಅಭ್ಯರ್ಥಿಗೆ ಮತ ಹಾಕಿ ಎಂದು ಮನವಿ ಮಾಡಿದರು.

ಜಿ.ಬಿ.ವಿನಯ್ ಕುಮಾರ್

ಸುರಪುರ ಉಪಚುನಾವಣೆ: ಶೇ 9.75ರಷ್ಟು ಮತದಾನ

ಯಾದಗಿರಿ: ಜಿಲ್ಲೆಯ ಸುರಪುರ ಮತಕ್ಷೇತ್ರ ಉಪಚುನಾವಣೆ ಬೆಳಿಗ್ಗೆ 9 ಗಂಟೆಯ ವರದಿಯಂತೆ ಶೇ 9.75 ಮತದಾನವಾಗಿದೆ.

ಮತಗಟ್ಟೆ ಆವರಣದಲ್ಲಿ ಶಾಮಿಯಾನ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದ ಮತದಾರರು ಸರದಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಪುರುಷರಗಿಂತ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ.

ಸುರಪುರ ನಗರದ ಮತಗಟ್ಟೆ 55ರ ಮತಗಟ್ಟೆಯಲ್ಲಿ 274 ಮಂದಿ ಬೆಳಿಗ್ಗೆ 10.40 ರವರೆಗೆ ಮತದಾನ ಮಾಡಿದ್ದಾರೆ.

ಪುರುಷ 130, ಮಹಿಳಾ 144 ಮತ ಚಲಾಯಿಸಿದ್ದಾರೆ. 56ರ ಮತಗಟ್ಟೆಯಲ್ಲಿ 275 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಪುರುಷ 135, 140 ಮಹಿಳಾ ಮತದಾರು ಸರಿಯಲ್ಲಿ ನಿಂತು ಮತದಾನ ಮಾಡಿದ್ದಾರೆ.

ವಿಜಯಪುರ ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಮತದಾನ

ವಿಜಯಪುರ ಎಸ್‌ಸಿ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರು ತಮ್ಮ ಪುತ್ರಿ ಭವಾನಿ ಜೊತೆ ಸ್ವಗ್ರಾಮ ತೊರವಿಯ ಸರ್ಕಾರಿ ಕನ್ನಡ ಹಿರಿಯ ಬಾಲಕಿಯರ ಶಾಲೆಯ ಮತಗಟ್ಟೆ 97ರಲ್ಲಿ ಹಕ್ಕು ಚಲಾಯಿಸಿದರು.

ಕುಕನೂರು: ಮತದಾನದಿಂದ ದೂರ ಉಳಿದ ಕುಕನೂರಿನ ಗುದ್ನೇಪ್ಪನಮಠ ನಿವಾಸಿಗಳು

ಕುಕನೂರು (ಕೊಪ್ಪಳ ಜಿಲ್ಲೆ): ಜಿಲ್ಲೆಯ ಕುಕನೂರು ಪಟ್ಟಣದ 19ನೇ ವಾರ್ಡಿನಲ್ಲಿ ಮತದಾರರು ಮತದಾನದಿಂದ ದೂರ ಮಾಡಿದ್ದಾರೆ.

ಜಿಲ್ಲೆಯಾದ್ಯಂತ ಬೆಳಿಗ್ಗೆ 7ಕ್ಕೆ ಮತದಾನ ಆರಂಭವಾಗಿದ್ದರೂ ಇಲ್ಲಿ ಇದುವರೆಗೂ ಒಬ್ಬರೂ ಮತದಾನ ಮಾಡಿಲ್ಲ. ಪಟ್ಟಣದ ಗುದ್ನೇಪ್ಪನಮಠದ ದೇವಸ್ಥಾನದ ಜಾಗದಲ್ಲಿ ಸರ್ಕಾರಿ ಕಟ್ಟಡ ಕಟ್ಟುವ ಆದೇಶ ಮಾಡಿದ್ದು, ಈ ಆದೇಶ ಹಿಂಪಡೆಯಬೇಕು ಎಂದು ಜನ ಬೇಡಿಕೆ ಮುಂದಿಟ್ಟಿದ್ದಾರೆ.

ಮತದಾನ ಮಾಡಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್

ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್‌ ಅವರು ಬೀದರ್ ನಗರದ ಮತಗಟ್ಟೆ 106ರಲ್ಲಿ ಕುಟುಂಬಸ್ಥರೊಂದಿಗೆ ಮತದಾನ ಮಾಡಿದರು.

ಪ್ರಜಾವಾಣಿ ಸಾಧಕಿ ಎನ್. ಲಕ್ಷ್ಮಿದೇವಿ ಮತದಾನ

ವಿಜಯನಗರ ಜಿಲ್ಲೆಯ ಕಾನಹೊಸಹಳ್ಳಿ ಸಮೀಪದ ಗುಂಡುಮುಣುಗು ಗ್ರಾಮದಲ್ಲಿ ವಿಜಯನಗರ ಲೋಕಸಭಾ ಚುನಾವಣಾ ರಾಯಭಾರಿ, 2023ರ ಪ್ರಜಾವಾಣಿ ಸಾಧಕಿ ಪ್ರಶಸ್ತಿ ವಿಜೇತರಾದ ಎರಡು ಕೈ ಇಲ್ಲದ ಎನ್. ಲಕ್ಷ್ಮಿದೇವಿ ಅವರು ಮತಗಟ್ಟೆ 122ರಲ್ಲಿ ತಮ್ಮ ಹಕ್ಕನ್ನು ಕಾಲಿನ ಮೂಲಕ ಚಲಾಯಿಸಿದರು‌.

ಎನ್. ಲಕ್ಷ್ಮಿದೇವಿ

ಸುರಪುರ ಉಪ ಚುನಾವಣೆ: ಬಿರುಸಿನ ಮತದಾನ

ಹುಣಸಗಿ (ಯಾದಗಿರಿ ಜಿಲ್ಲೆ): ರಾಯಚೂರು ಲೋಕಸಭೆ ಚುನಾವಣೆ, ಸುರಪುರ ಉಪ ಚುನಾವಣೆಗೆ ಪಟ್ಟಣದ 16 ಬೂತ್ ಗಳು ಸೇರಿದಂತೆ ತಾಲ್ಲೂಕಿನ ಎಲ್ಲಾ ಹಳ್ಳಿಗಳಲ್ಲಿ ಬೆಳಗಿನಿಂದಲೇ ಮತದಾನ ಬಿರುಸಿನಿಂದ ಆರಂಭವಾಯಿತು.

ಪ್ರತಿ ಬೂತ್ ಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಆಗಮಿಸಿದ್ದರಿಂದಾಗಿ ಪ್ರತಿ ಬೂತ್ ಗಳು ಮತ್ತು ಜನಜಂಗುಳಿಯಿಂದ ತುಂಬಿಕೊಂಡಿತ್ತು. ಕೆಲ ಬೂತ್‌ಗಳಲ್ಲಿ ಬೆಳಿಗ್ಗೆ 9 ಗಂಟೆ ಒಳಗೆ ಶೇಕಡ 30ಕ್ಕೂ ಹೆಚ್ಚು ಮತದಾನವಾಗಿರುವುದು ಕಂಡುಬಂತು.

ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ನರಸಿಂಹನಾಯಕ (ರಾಜೂಗೌಡ) ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು.

ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೂಗೌಡ ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು

ವಿಜಯಪುರ: ಮತ ಚಲಾಯಿಸಿದ ಮಂಗಳಮುಖಿಯರು

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಬೂತ್- 123, 124 ರಲ್ಲಿ ಲಿಂಗತ್ವ ಅಲ್ಪಸಂಖ್ಯಾತರು (ಮಂಗಳಮುಖಿಯರು) ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಸಂತಸದಿಂದ ಮತ ಚಲಾಯಿಸಿದರು.

'ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲರಿಗೂ ಮತ ಚಲಾಯಿಸುವ ಹಕ್ಕು ಇದ್ದು, ನಾವು ಮತ ಹಾಕಿದ್ದೇವೆ ನೀವು ಮತ ಹಾಕಿ ನಿಮ್ಮ ಹಕ್ಕು ಚಲಾಯಿಸಿ' ಎಂದರು.

ಲೋಕಸಭೆ ಚುನಾವಣೆ: ಭಕ್ತರಿಲ್ಲದೆ ಯಲ್ಲಮ್ಮನಗುಡ್ಡ ಭಣಭಣ...

ಉಗರಗೋಳ: ಲೋಕಸಭೆ ಚುನಾವಣೆ ಮತದಾನ ಪ್ರಕ್ರಿಯೆ ಹಿನ್ನೆಲೆಯಲ್ಲಿ ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡದಲ್ಲಿ ಮಂಗಳವಾರ ದೇವಿ ದರ್ಶನ ಪಡೆಯಲು ಭಕ್ತರಿಗೆ ನಿರ್ಬಂಧ ವಿಧಿಸಲಾಗಿತ್ತು. ಹಾಗಾಗಿ ಸದಾ ಭಕ್ತರಿಂದ ತುಂಬಿರುತ್ತಿದ್ದ ಯಲ್ಲಮ್ಮ ದೇವಿ ದೇವಸ್ಥಾನ ಅಂಗಳ ಭಣಗುಡುತ್ತಿತ್ತು.

ಪ್ರತಿ ಮಂಗಳವಾರ ಯಲ್ಲಮ್ಮನಗುಡ್ಡಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಇದರಿಂದಾಗಿ ಮತದಾನ ಪ್ರಮಾಣ ತಗ್ಗಬಾರದೆಂಬ ಕಾರಣಕ್ಕೆ, ಭಕ್ತರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ಕೊಡಲಿಲ್ಲ. ಹಾಗಾಗಿ ಗುಡ್ಡದ ಪರಿಸರ ಖಾಲಿ ಖಾಲಿಯಾಗಿತ್ತು. ಅಲ್ಲಲ್ಲಿ ಕೆಲವರಷ್ಟೇ ಕಂಡುಬಂದರು‌.

ಅಧಿಕಾರಿಗಳು, ಅರ್ಚಕರ ಸಮ್ಮುಖದಲ್ಲಷ್ಟೇ 'ಎಲ್ಲರ ಅಮ್ಮ' ಯಲ್ಲಮ್ಮ‌ ದೇವಿಗೆ ವಿಶೇಷ ಪೂಜೆ ನೆರವೇರಿತು.

ಶಿವಮೊಗ್ಗ: ಕೆ.ಎಸ್.ಈಶ್ವರಪ್ಪ ಮತದಾನ

ಶಿವಮೊಗ್ಗದ ಬಿ.ಎಚ್.ರಸ್ತೆ ಸೈನ್ಸ್ ಮೈದಾನದ ಮತಗಟ್ಟೆ ಸಂಖ್ಯೆ 166ರಲ್ಲಿ ಪಕ್ಷೇತರ ಅಭ್ಯರ್ಥಿಯೂ ಆದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕುಟುಂಬದ ಸದಸ್ಯರೊಂದಿಗೆ ಮತದಾನ ಮಾಡಿದರು.

ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ, ತಹಶೀಲ್ದಾರ್ ಸಂತೋಷರಾಣಿ ಮತದಾನ

ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಯಾದಗಿರಿ ನಗರದ ಪುರಣಮಲ್ ದೋಖಾ ಜೈನ್ ಶಾಲೆಯ ಮತಗಟ್ಟೆ 69ರಲ್ಲಿ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಚುನಾವಣಾ ತಹಶೀಲ್ದಾರ್ ಸಂತೋಷರಾಣಿ ಉಪಸ್ಥಿತರಿದ್ದರು.

ಡಾ.ಸುಶೀಲಾ ಮತ್ತು ಸಂತೋಷರಾಣಿ 

ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಮತದಾನ

ಧಾರವಾಡ: ನಗರದ ಕೆಸಿಡಿ ಕಾಲೇಜಿನ ಸಖಿ ಮತಗಟ್ಟೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಮತದಾನ ಮಾಡಿ, ಬೆರಳಿನ ಶಾಯಿ ಗುರುತು ತೋರಿದರು.

ದಿವ್ಯಪ್ರಭು

ಹುಬ್ಬಳ್ಳಿ | ಬಿರುಬಿಸಿಲು: ಚಿಕಿತ್ಸೆ ನೀಡಲು ಆರೋಗ್ಯ ತಂಡ‌ ಸಿದ್ಧ

ಹುಬ್ಬಳ್ಳಿ: ತಾಲ್ಲೂಕಿನ ನೂಲ್ವಿಯ ಪ್ರಾಥಮಿಕ ಶಾಲೆಯ ಮತಗಟ್ಟೆ 56, 57ರಲ್ಲಿ ಪ್ರಥಮ ಚಿಕಿತ್ಸಾ ಘಟಕ ತೆರೆಯಲಾಗಿದೆ. ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು ಈ ತಂಡದಲ್ಲಿದ್ದಾರೆ.

ಈ ಭಾಗದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಮತದಾರರಿಗೆ ಅನಾರೋಗ್ಯ ಸಮಸ್ಯೆ ಕಂಡುಬಂದರೆ ಪ್ರಥಮ ಚಿಕಿತ್ಸೆ ಕೊಡಲು ಸಿದ್ಧರಾಗಿದ್ದಾರೆ.

ಬೀದರ್ ಲೋಕಸಭಾ ಕ್ಷೇತ್ರ: ಮಧ್ಯಾಹ್ನ 11ರವರೆಗೆ ಶೇ 21.92ರಷ್ಟು ಮತದಾನ

ಶಾಸಕ ಮಹೇಶ ಟೆಂಗಿನಕಾಯಿ ಮತದಾನ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಅವರು ಹುಬ್ಬಳ್ಳಿಯ ಬಸವೇಶ್ವರ ನಗರದ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ನಂತರ ಮಾತನಾಡಿದ ಅವರು, 'ದೇಶದ ಸುಭದ್ರತೆ ಹಾಗೂ ಅತ್ಯುತ್ತಮ ಆಡಳಿತಕ್ಕಾಗಿ ಮತದಾನ ಮಾಡಿದ್ದೇನೆ' ಎಂದರು.

'ಎಲ್ಲರೂ ಆದಷ್ಟು ಬೇಗ ನಿಮ್ಮ‌ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಯಶಸ್ವಿಗೊಳಿಸಬೇಕು' ಎಂದು ಮನವಿ ಮಾಡಿದರು.

ಕೊಪ್ಪಳ ಲೋಕಸಭಾ ಕ್ಷೇತ್ರ: ಬೆಳಿಗ್ಗೆ 11 ಗಂಟೆವರೆಗೆ ಶೇ 24.47ರಷ್ಟು ಮತದಾನ

ಬೀದರ್ ಲೋಕಸಭಾ ಕ್ಷೇತ್ರ: 11 ಗಂಟೆವರೆಗೆ ಶೇ 21.92ರಷ್ಟು ಮತದಾನ

ಹುಬ್ಬಳ್ಳಿ: ಒಂದೇ ಕುಟುಂಬದ 35ಕ್ಕೂ ಹೆಚ್ಚು ಜನ‌ ಮತದಾನ

ಹುಬ್ಬಳ್ಳಿ: ನೂಲ್ವಿಯ ಕೊಪ್ಪದ ಕುಟುಂಬದ 35ಕ್ಕೂ ಹೆಚ್ವು ಜನ ಒಮ್ಮೆಲೇ ಬಂದು, ಮತದಾನ ಮಾಡಿ ಗಮನ ಸೆಳೆದರು.

ಕುಟುಂಬದ ಕಿರಿಯ ವಯಸ್ಸಿನ‌ ಪೂಜಾ‌ ಕೊಪ್ಪದ (20), ಮಂಗಳಾ ಕೊಪ್ಪದ (20) ಸರಸ್ವತಿ ಕೊಪ್ಪದ (20) ಇದೇ ಮೊದಲ ಬಾರಿಗೆ ಮತದಾನ‌ ಚಲಾಯಿಸಿದರು.

ಕುಟುಂಬದ ಹಿರಿಯರಾದ ಲಕ್ಷಮ್ಮವ್ವ ಹನುಮಂತಪ್ಪ ಕೊಪ್ಪದ (71) ಮತ ಚಲಾಯಿಸಿದರು.

ಬಾಗಲಕೋಟೆ ಲೋಕಸಭಾ ಕ್ಷೇತ್ರ: 11 ಗಂಟೆವರೆಗೆ ಶೇ 23.80ರಷ್ಟು ಮತದಾನ

ಹಾವೇರಿ ಲೋಕಸಭಾ ಕ್ಷೇತ್ರ: 11 ಗಂಟೆವರೆಗೆ ಶೇ 24.24ರಷ್ಟು ಮತದಾನ

ಬಳ್ಳಾರಿ ಲೋಕಸಭೆ ಕ್ಷೇತ್ರ: 11 ಗಂಟೆವರೆಗೆ ಶೇ 26.45ರಷ್ಟು ಮತದಾನ

ಧಾರವಾಡ ಲೋಕಸಭಾ ಕ್ಷೇತ್ರ: 11 ಗಂಟೆವರೆಗೆ ಶೇ 24ರಷ್ಟು ಮತದಾನ

ಕಲಬುರಗಿ ಲೋಕಸಭಾ ಕ್ಷೇತ್ರ: 11 ಗಂಟೆವರೆಗೆ ಶೇ 22.64ರಷ್ಟು ಮತದಾನ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ: 11 ಗಂಟೆವರೆಗೆ ಶೇ 28.19ರಷ್ಟು ಮತದಾನ

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಿಗ್ಗೆ 11 ಗಂಟೆಯವರೆಗೆ ಶೇ‌.28.19 ರಷ್ಟು ಮತದಾನವಾಗಿದೆ.

ಶಿರಸಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.31.90, ಯಲ್ಲಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.29.63, ಖಾನಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.28.46, ಹಳಿಯಾಳ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.26.83, ಕುಮಟಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.30.63, ಭಟ್ಕಳ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.27.45, ಕಾರವಾರ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.27.98, ಕಿತ್ತೂರು ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.23.31 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾ ಕಚೇರಿ ತಿಳಿಸಿದೆ.

ಕೊಪ್ಪಳ: ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಮತದಾನ

ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಮತ ಚಲಾಯಿಸಿದರು.

ಬೆಳಗಾವಿ: ಸ್ವೀಪ್ ರಾಯಭಾರಿಯಿಂದ ಮತದಾನ

ಬೆಳಗಾವಿ: ಇಲ್ಲಿನ ಅಂತರರಾಷ್ಟ್ರೀಯ ಅಂಗವಿಕಲ ಈಜುಪಟು, ಸ್ವೀಪ್ ರಾಯಭಾರಿ ರಾಘವೇಂದ್ರ ಅಣ್ವೇಕರ್ ಮಂಗಳವಾರ ಮತದಾನ ಮಾಡಿದರು.

ಟಿಳಕವಾಡಿಯ ಬುಧವಾರ ಪೇಟೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ ಅವರು, 'ಮತದಾನಕ್ಕೆ ಬರುವವರಿಗೆ ಸರ್ಕಾರ ಎಲ್ಲ ಸೌಕರ್ಯ ಕಲ್ಪಿಸಿದೆ‌. ಹಾಗಾಗಿ ಪ್ರತಿಯೊಬ್ಬರೂ ಮನೆಯಿಂದ ಹೊರಬಂದು, ಸುಭದ್ರ ದೇಶ ಮತ್ತು ನಾಡು ಕಟ್ಟಲು ಮತ ಹಾಕಬೇಕು' ಎಂದು ಮನವಿ ಮಾಡಿದರು‌. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ್ ಇದ್ದರು‌.

ರಾಘವೇಂದ್ರ ಅಣ್ವೇಕರ್

ದೋಣಿಯಲ್ಲಿ ಬಂದು ಮತದಾನ

ಅಂಕೋಲಾ ತಾಲ್ಲೂಕಿನ ಕೂರ್ವೆಯ ಮತದಾರರು ಗಂಗಾವಳಿ ನದಿ ಆಚೆಯಲ್ಲಿರುವ ಹಿಚಕಡ ಮತಗಟ್ಟೆಗೆ ತಲುಪಲು ದೋಣಿ ಮೂಲಕ ಸಾಗಿ ಬಂದರು

ವಿಜಯಪುರ ಲೋಕಸಭಾ ಕ್ಷೇತ್ರ: 11ರವರೆಗೆ ಶೇ 24.30ರಷ್ಟು ಮತದಾನ

ಶಹಾಪು ರ:ದರ್ಶನಾಪುರದಲ್ಲಿ ಮತಯಂತ್ರ ಬದಲಾವಣೆ

ಶಹಾಪುರ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ದರ್ಶನಾಪುರ ಮತಗಟ್ಟೆ ಸಂಖ್ಯೆ 79ರಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ಮತಯಂತ್ರ ಬದಲಾಯಿಸಿ ನಂತರ ಮತದಾನಕ್ಕೆ ಅವಕಾಶ ನೀಡಲಾಯಿತು.

ಬೆಳಿಗ್ಗೆ 11 ಗಂಟೆಗೆ ಶೇ 22ರಷ್ಟುಮತದಾನವಾಗಿದೆ.

ಬೆಳಗಾವಿ: ಮತದಾನಕ್ಕಾಗಿ ಅಮೆರಿಕದಿಂದ ಬಂದ ಯುವತಿ

ಮುನವಳ್ಳಿ (ಬೆಳಗಾವಿ ಜಿಲ್ಲೆ): ಅಮೆರಿಕದಲ್ಲಿ ನೆಲೆಸಿರುವ ಯುವತಿ ಸರಸ್ವತಿ ಕುಲಕರ್ಣಿ ಅವರು ತಾಯ್ನಾಡಿಗೆ ಬಂದು ತಮ್ಮ ಹಕ್ಕು ಚಲಾಯಿಸಿದರು.

ಮುನವಳ್ಳಿ ಮೂಲದವರಾದ ಸರಸ್ವತಿ ಅಮೆರಿಕದಲ್ಲಿ ಉದ್ಯೋಗಿ ಆಗಿದ್ದಾರೆ‌. ಮತದಾನಕ್ಕಾಗಿಯೇ ಅವರು ತುರ್ತು ರಜೆ ಪಡೆದು ತಮ್ಮೂರಿಗೆ ಬಂದಿದ್ದಾರೆ‌.

ಮಂಗಳವಾರ ಇಲ್ಲಿ‌ನ ಸರ್ಕಾರಿ ಶಾಲೆಯಲ್ಲಿ ತೆರೆದ ಮತಗಟ್ಟೆಯಲ್ಲಿ ತಂದೆ ರವಿ ಅವರ ಜತೆಗೆ ಬಂದು ಹಕ್ಕು ಚಲಾಯಿಸಿದರು.

ಇವಿಎಂ ಯಂತ್ರದಲ್ಲಿ ಬಾರದ ಬೀಪ್ ಸೌಂಡ್: ಮತದಾನ ಸ್ಥಗಿತ

ಚಿತ್ತಾಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಸಾತನೂರು ಗ್ರಾಮದಲ್ಲಿನ ಮತಗಟ್ಟೆ ಸಂಖ್ಯೆ 165ರ ಮತಯಂತ್ರದಲ್ಲಿ ದೋಷವುಂಟಾಗಿ ಮತದಾನದ ನಂತರ ಬೀಪ್ ಸೌಂಡ್ ಬಾರದೆ ಬೆಳಗ್ಗೆ 10.30 ರಿಂದ 11.38ರ ವರೆಗೆ ಒಟ್ಟು ಒಂದು ಗಂಟೆ ಕಾಲ ಮತದಾನ ಸ್ಥಗಿತಗೊಂಡಿದೆ.

ಮತಯಂತ್ರದಲ್ಲಿ ದೋಷ ಕಾಣುವ ಸಮಯದವರೆಗೆ ಒಟ್ಟು 185 ಮತದಾರರು ತಮ್ಮ ಮತ ಹಕ್ಕು ಚಲಾಯಿಸಿದ್ದರು. ಮತದಾನ ಮಾಡಲು ಮತಗಟ್ಟೆಗೆ ಆಗಮಿಸಿದ್ದ ಮತದಾರರು ಮತದಾನ ಮಾಡಲಾಗದೆ ಸರದಿ ಸಾಲಿನಲ್ಲಿಯೆ ನಿಂತ ಸ್ಥಳದಲ್ಲಿಯೆ ಕುಳಿತ್ತಿದ್ದರು.

ದುರಸ್ತಿಗೆ ಕ್ರಮ: ಮತಯಂತ್ರದಲ್ಲಿ ದೋಷವುಂಟಾದ ಕುರಿತು ಸಂಬಂಧಿಸಿದ ಅಧಿಕಾರಿಗೆ ಕಳುಹಿಸಿ ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳುವುದಾಗಿ ಚಿತ್ತಾಪುರ ಕ್ಷೇತ್ರದ ಸಹಾಯಕ ಚುನಾಣಾಧಿಕಾರಿ ನವೀನಕುಮಾರ ಅವರು ಮಂಗಳವಾರ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

ಚಿಕ್ಕೋಡಿಯಲ್ಲಿ ಲೋಕಸಭಾ ಕ್ಷೇತ್ರ: 11ರವರೆಗೆ ಶೇ 27.22ರಷ್ಟು ಮತದಾನ

ಸಂಸದ ವೈ.ದೇವೇಂದ್ರಪ್ಪ ಮತದಾನ

ವಿಜಯನಗರ ಜಿಲ್ಲೆ ಅರಸೀಕೆರೆ ಗ್ರಾಮದ ಜಿವಿವಿಡಿಎಸ್ ಪ್ರೌಢ ಶಾಲೆಯಲ್ಲಿ ಸಂಸದ ವೈ.ದೇವೇಂದ್ರಪ್ಪ ಕುಟುಂಬ ಸಹಿತ ಮತದಾನ ಮಾಡಿದರು.

ಸಚಿವ ಎಂ.ಬಿ. ಪಾಟೀಲ ಮತದಾನ

ವಿಜಯಪುರ ನಗರದ ಮದ್ದಿನ ಖಣಿಯಲ್ಲಿರುವ ಮತಗಟ್ಟೆ ಸಂಖ್ಯೆ 46ರಲ್ಲಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಮತದಾನ ಮಾಡಿದರು.

ಶಿಕಾರಿಪುರ: ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು

ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಆಸ್ಪತ್ರೆಗೆ ಭೇಟಿ ನೀಡಿ, ಹಲ್ಲೆಗೊಳಗಾದ ಕಾರ್ಯಕರ್ತರ ಆರೋಗ್ಯ ವಿಚಾರಿಸಿದರು.

ಶಿವಮೊಗ್ಗ: ಸಚಿವ ಮಧು ಬಂಗಾರಪ್ಪ ಮತದಾನ

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರೂ ಆಗಿರುವ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಂಗಳವಾರ ಸೊರಬ ತಾಲ್ಲೂಕಿನ ಕುಬಟೂರಿನ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 31ರಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿದರು.

ಕೊಪ್ಪಳ: ಸಚಿವ ಶಿವರಾಜ ತಂಗಡಗಿ ಮತದಾನ

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕಾರಟಗಿಯಲ್ಲಿ ಮತದಾನ ಮಾಡಿದರು.

ಮತಯಂತ್ರ ದೋಷ: ಮತದಾನ ಪದೇಪದೇ ಸ್ಥಗಿತ

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಇಲ್ಲಿ‌ ಮತಗಟ್ಟೆ ಸಂಖ್ಯೆ 211ರಲ್ಲಿ ಮತ ಯಂತ್ರ ಪದೇಪದೇ ಕೈಕೊಡುತ್ತಿದೆ. ಬೆಳಿಗ್ಗೆಯಿಂದ ಇಲ್ಲಿಯವರೆಗೆ ಐದು ಬಾರಿ ಮತದಾನ ಸ್ಥಗಿತಗೊಂಡಿತು.

ಸರದಿಯಲ್ಲಿ‌ ತಾಸುಗಟ್ಟಲೇ ಕಾದು ನಿಂತ ಮತದಾರರು ಯಂತ್ರ ಬದಲಿಸುವಂತೆ ಗಲಾಟೆ ಮಾಡಿದರು. ಇಲ್ಲದಿದ್ದರೆ ಮತದಾನ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

1311 ಮರದಾರರು ಇರುವ ಈ ಬೂತನಲ್ಲಿ ಮಧ್ಯಾಹ್ನ 12ರವರೆಗೆ 345 ಮಂದಿ ಮಾತ್ರ ಹಕ್ಕು ಚಲಾಯಿಸಲು ಸಾಧ್ಯವಾಗಿದೆ.

ಚಿಂಚೋಳಿ ಮತಗಟ್ಟೆ 140ರಲ್ಲಿ ಮತದಾನ ಸ್ಥಗಿತ

ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಚಿಮ್ಮಾಈದಲಾಯಿ ಗ್ರಾಮದ ಮತಗಟ್ಟೆ ಸಂಖ್ಯೆ140ರಲ್ಲಿ ಮತದಾನ ಸ್ಥಗಿತಗೊಂಡಿದೆ.

ಮತಯಂತ್ರದಲ್ಲಿ ಅಡಚಣೆ ಎದುರಾಗಿದ್ದರಿಂದ 30 ನಿಮಿಷದಿಂದ ಮತದಾನ ಸ್ಥಗಿತವಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ ಚಿಂಚೋಳಿಕರ ತಿಳಿಸಿದ್ದಾರೆ.

ಮತದಾರರು ಮತಗಟ್ಟೆ ಎದುರು ಸಾಲಾಗಿ ನಿಂತು ಸುಸ್ತಾಗಿದ್ದಾರೆ. ದೋಷ ಸರಿಪಡಿಸಿ ಮತದಾನಕ್ಕೆ ಅನುವು ಮಾಡಿಕೊವಂತೆ ಒತ್ತಾಯಿಸಿದ್ದಾರೆ.

ವಿಜಯಪುರ: ಸಚಿವ ಶಿವಾನಂದ ಪಾಟೀಲ ಮತದಾನ

ವಿಜಯಪುರ ಲೋಕಸಭಾ ಕ್ಷೇತ್ರದ ಸರ್ಕಾರಿ ಮರಾಠಿ ಬಾಲಕರ ಶಾಲೆ 2ನೇ ಮತಗಟ್ಟೆಯಲ್ಲಿ ಸಚಿವ ಶಿವಾನಂದ ಪಾಟೀಲ ಮತದಾನ ಮಾಡಿದರು. ಮತದಾನ ಪ್ರತೀ ಪ್ರಜೆಯ ಹಕ್ಕು ಮತ್ತು ಕರ್ತವ್ಯ. ಭವ್ಯ ಭಾರತದ ಸುಂದರ ಭವಿಷ್ಯಕ್ಕಾಗಿ ನನ್ನ ಹಕ್ಕು ಚಲಾಯಿಸಿದರು ಎಂದರು.

ಸಚಿವ ಶಿವಾನಂದ ಪಾಟೀಲ ಮತದಾನ ಮಾಡಿದರು.

ಧಾರವಾಡ: ಸಚಿವ ಸಂತೋಷ್ ಲಾಡ್ ಮತದಾನ

ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಕಲಘಟಗಿ ತಾಲ್ಲೂಕಿನ ಮಡಕಿಹೊನ್ನಳ್ಳಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಸಚಿವ ಸಂತೋಷ್ ಲಾಡ್ ಅವರು ಮತ ಚಲಾಯಿಸಿದರು.

ಮೊದಲ ಮತ ಚಲಾಯಿಸಿ ಸಂಭ್ರಮ

ಶಿರಸಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪುತ್ರಿ ಶ್ರೀಲಕ್ಷ್ಮೀ ಹೆಗಡೆ ಕುಳವೆ ಜನತಾ ವಿದ್ಯಾಲಯದ ಮತಗಟ್ಟೆಯಲ್ಲಿ ತಮ್ಮ ಮೊದಲ ಮತ ಚಲಾಯಿಸಿ ಸಂಭ್ರಮಿಸಿದರು.

ಶ್ರೀಲಕ್ಷ್ಮೀ ಹೆಗಡೆ

ಚಿಂಚೋಳಿ: ಮಹಿಳೆಯರಿಂದ ಉತ್ಸಾಹದ ಮತದಾನ

ಚಿಂಚೋಳಿ (ಕಲಬುರಗಿ ಜಿಲ್ಲೆ): ಬೀದರ್ ಲೋಕಸಭಾ ಕ್ಷೇತ್ರದ ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ಮತದಾನ ಸುಸೂತ್ರವಾಗಿ ನಡೆಯುತ್ತಿದೆ.

ಎಲ್ಲಿಯೂ ಅಹಿತಕರ ಘಟನೆ ನಡೆದ ವರದಿಗಳಿಲ್ಲ. ಆದರೆ, ಮಹಿಳೆಯರಿಂದ ಉತ್ಸಾಹದ ಮತದಾನ ಕಾಣಿಸಿತು. ಮಧ್ಯಾಹ್ನ 12 ಗಂಟೆ ವೇಳೆಗೆ ಶೇ 30ರಷ್ಟು ಮತದಾನವಾದ ವರದಿಗಳಿವೆ. ಬೆಳಿಗ್ಗೆ 11ಕ್ಕೆ ಶೇ 20.7ರಷ್ಟು ಮತದಾನವಾಗಿತ್ತು.

ಚಿಂಚೋಳಿಯ ಚಂದಾಪುರದ ಮತಗಟ್ಟೆ ಸಂಖ್ಯೆ 135ರಲ್ಲಿ ಸರತಿ ಸಾಲಿನಲ್ಲಿ ನಿಂತ ಮಹಿಳೆಯರು

ಬೆಳಗಾವಿ ಲೋಕಸಭಾ ಕ್ಷೇತ್ರ: ಮಧ್ಯಾಹ್ನ 12ರವರೆಗೆ ಶೇ 24.2ರಷ್ಟು ಮತದಾನ

ಚಿಕ್ಕೋಡಿ ಲೋಕಸಭಾ ಕ್ಷೇತ್ರ: ಮಧ್ಯಾಹ್ನ 12ರವರೆಗೆ ಶೇ 27.23ರಷ್ಟು ಮತದಾನ

ಶಿವಮೊಗ್ಗ: ಮತಗಟ್ಟೆಗೆ ಗೀತಾ ಶಿವರಾಜಕುಮಾರ ಭೇಟಿ

ಸೊರಬ: ತಾಲ್ಲೂಕಿನ ಜಡೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 35ಕ್ಕೆ ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರು ಮಂಗಳವಾರ ಭೇಟಿ ನೀಡಿದರು.

ರಾಯಚೂರು: ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ಮತದಾನ

ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಮತದಾನ ಮಾಡಿದರು.

ಬಳ್ಳಾರಿ: ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಮತದಾನ

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು ಅವರು ದೇವಿನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯ ಮತಗಟ್ಟೆಯಲ್ಲಿ ಮಂಗಳವಾರ ಕುಟುಂಬ ಸಹಿತರಾಗಿ ಮತಚಲಾಯಿಸಿದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ: ಶೇ 43.31ರಷ್ಟು ಮತದಾನ

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ‌ 43.31 ರಷ್ಟು ಮತದಾನವಾಗಿದೆ.

ಶಿರಸಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ 49.51, ಯಲ್ಲಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ 47.63, ಖಾನಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ 45.96, ಹಳಿಯಾಳ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ 44.99, ಕುಮಟಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ 45.64, ಭಟ್ಕಳ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ 43.52, ಕಾರವಾರ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ 43.67, ಕಿತ್ತೂರು ಕ್ಷೇತ್ರ ವ್ಯಾಪ್ತಿಯಲ್ಲಿ ಶೇ 40.42 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾ ಕಚೇರಿ ತಿಳಿಸಿದೆ.

ಶಿಕಾರಿಪುರ: ಬೈಕ್ ಗೆ ಬಸ್ ಡಿಕ್ಕಿ, ಮತ ಚಲಾಯಿಸಲು ಹೊರಟಿದ್ದ ವ್ಯಕ್ತಿ ಸಾವು

ಶಿವನೊಗ್ಗ: ಶಿಕಾರಿಪುರ ತಾಲ್ಲೂಕಿನ ಹಿತ್ತಲ ಬಳಿ ಮಂಗಳವಾರ ಮತ ಹಾಕಲು ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಖಾಸಗಿ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಭದ್ರಾವತಿಯ ನಿವಾಸಿ ಮಂಜುನಾಥ್ (32) ಸಾವಿಗೀಡಾದವರು. ಮಂಜುನಾಥ್ ಶಿಕಾರಿಪುರ ತಾಲ್ಲೂಕಿನ ಈಸೂರಿನಲ್ಲಿ ಸಹೋದರಿಯ ಮನೆಯಲ್ಲಿ ವಾಸವಿದ್ದರು. ಲೋಕಸಭಾ ಚುನಾವಣೆಗೆ ಮತ ಚಲಾಯಿಸಲು ಭದ್ರಾವತಿಗೆ ಹೊರಟಿದ್ದರು ಎಂದು ತಿಳಿದುಬಂದಿದೆ.

ಬಿಜೆಪಿ– ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ

ಚಿತ್ತಾಪುರ (ಕಲಬುರಗಿ ಜಿಲ್ಲೆ): ಲೋಕಸಭಾ ಚುನಾವಣೆ ಮತದಾನದ ಅಂಗವಾಗಿ ಚಿತ್ತಾಪುರ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಹದನೂರು ಗ್ರಾಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ವಾಗ್ವಾದ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.

ಮತಗಟ್ಟೆ ಹೊರಗಡೆ ರಸ್ತೆಯಲ್ಲಿ ಗಲಾಟೆಯಾಗಿದೆ. ಮತಗಟ್ಟೆಯೊಳಗೆ ಹೋಗುವ ವಿಷಯಕ್ಕೆ ಬಿಜೆಪಿ ಅಭ್ಯರ್ಥಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಜಗಳವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದು ಕಂಡು ಸ್ಥಳದಲ್ಲಿದ್ದ ಪೊಲೀಸರು ಮಧ್ಯ ಪ್ರವೇಶಸಿ ಜನರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಯಾದಗಿರಿ: ಹೆಡಗಿಮದ್ರಾದ ಶ್ರೀಗಳಿಂದ ಮತದಾನ

ಯಾದಗಿರಿ: ತಾಲ್ಲೂಕಿನ ಹೆಡಗಿಮದ್ರಾದ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸರದಿಯನಲ್ಲಿ ನಿಂತು ಗ್ರಾಮದ ಬೂತ್ ಸಂಖ್ಯೆ 8ರ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ದೇಶದ ಎಲ್ಲಾ ಜನ ಮತ ಚಲಾಯಿಸುವ ಮೂಲಕ ದೇಶದ ಪ್ರಜಾಪ್ರಭುತ್ವ ಉಳಿಸೋಣ ಹಾಗೂ ಬಲಿಷ್ಠ ಭಾರತ ಕಟ್ಟೋಣ ಎಂದು ಹೇಳಿದರು.

ವಿಜಯಪುರ: ಮತ ಚಲಾಯಿಸಿದ ವಲಸೆ ಕುಟುಂಬ

ವಿಜಯಪುರ ಲೋಕಸಭಾ ಕ್ಷೇತ್ರದ ಮುದ್ದೇಬಿಹಾಳ ತಾಲ್ಲೂಕಿನ ಕೊಪ್ಪ ತಾಂಡದಿಂದ ಬೆಂಗಳೂರಿಗೆ ದುಡಿಯಲು ವಲಸೆ ಹೋಗಿದ್ದ ಸವಿತಾ ಹಾಗೂ ಅವರ ಕುಟುಂಬ ಸದಸ್ಯರು ಮರಳಿ ಊರಿಗೆ ಬಂದು ಮತ ಚಲಾಯಿಸಿದರು.

'ನಾವು ನಮ್ಮ ಕುಟುಂಬ ದುಡಿಯಲು ಬೆಂಗಳೂರಿಗೆ ಹೋಗಿದ್ದೇವು. ಚುನಾವಣೆ ಸಂಬಂಧ ವೋಟ್ ಹಾಕಲು ಮತ್ತೆ ಊರಿಗೆ ಬಂದಿದ್ದೇವೆ. ನೀವು ವೋಟ್ ಹಾಕಿ, ಯಾರು ಮತವನ್ನು ವ್ಯರ್ಥ ಮಾಡಬೇಡಿ' ಎಂದರು.

ಸವಿತಾ

ಶಿರಸಿ: ಮತದಾನ ಮಾಡಿದ ಬಿಜೆಪಿ ಅಭ್ಯರ್ಥಿ ಕಾಗೇರಿ

ಶಿರಸಿ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಾಲ್ಲೂಕಿನ ಕುಳವೆ ಬರೂರಿನ ಜನತಾ ವಿದ್ಯಾಲಯದ ಮತಗಟ್ಟೆ ಸಂಖ್ಯೆ 127ರಲ್ಲಿ ಹಕ್ಕು ಚಲಾಯಿಸಿದರು.

ಬರೂರಿನ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪತ್ನಿ ಹಾಗೂ ಪುತ್ರಿಯರೊಂದಿಗೆ ಆಗಮಿಸಿ ಮತ ಚಲಾಯಿಸಿದರು. ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ನಿ ಭಾರತಿ ಹೆಗಡೆ, ಪುತ್ರಿಯಂದಿರರಾದ ಜಯಲಕ್ಷ್ಮೀ ಹೆಗಡೆ, ರಾಜಲಕ್ಷ್ಮೀ ಹೆಗಡೆ ಹಾಗೂ ಶ್ರೀಲಕ್ಷ್ಮೀ ಹೆಗಡೆ ಮತ ಚಲಾಯಿಸುವ ವೇಳೆ ಸಾಥ್ ನೀಡಿದರು.

ಕೊಪ್ಪಳ ಲೋಕಸಭಾ ಕ್ಷೇತ್ರ: ಮಧ್ಯಾಹ್ನ 1 ಗಂಟೆವರೆಗೆ ಶೇ 42.64ರಷ್ಟು ಮತದಾನ

ಕಲಬುರಗಿ ಲೋಕಸಭಾ ಕ್ಷೇತ್ರ: ಮಧ್ಯಾಹ್ನ 1 ಗಂಟೆವರೆಗೆ ಶೇ 37.65ರಷ್ಟು ಮತದಾನ

ಕಲಬುರಗಿ: ಕಲಬುರಗಿ ಲೋಕಸಭಾ ‌ಮೀಸಲು ಕ್ಷೇತ್ರದಲ್ಲಿ ಮಧ್ಯಾಹ್ನ 1ರ ವರೆಗೆ ಶೇ 37.65ರಷ್ಟು ಮತದಾನವಾಗಿದೆ.

ಅಫಜಲಪುರದಲ್ಲಿ ಶೇ 38.71ರಷ್ಟು, ಚಿತ್ತಾಪುರದಲ್ಲಿ ಶೇ 37.62ರಷ್ಟು, ಜೇವರ್ಗಿಯಲ್ಲಿ‌‌ ಶೇ 39.15ರಷ್ಟು, ಕಲಬುರಗಿ ದಕ್ಷಿಣದಲ್ಲಿ ಶೇ 35.19ರಷ್ಟು, ಕಲಬುರಗಿ ಉತ್ತರದಲ್ಲಿ ಶೇ 37.62ರಷ್ಟು, ಕಲಬುರಗಿ ಗ್ರಾಮೀಣಲ್ಲಿ ಶೇ 35.42ರಷ್ಟು, ಸೇಡಂನಲ್ಲಿ ಶೇ 40.54ರಷ್ಟು ಹಾಗೂ ಗುರುಮಠಕಲ್‌ನಲ್ಲಿ ಶೇ 37.92ರಷ್ಟು ಮತಗಳು ಚಲಾವಣೆಯಾಗಿವೆ.

ಬಾಗಲಕೋಟೆ ಲೋಕಸಭಾ ಕ್ಷೇತ್ರ: ಮಧ್ಯಾಹ್ನ 1 ಗಂಟೆವರೆಗೆ ಶೇ 42.01ರಷ್ಟು ಮತದಾನ

ವಿಜಯಪುರ ಲೋಕಸಭಾ ಕ್ಷೇತ್ರ: ಮಧ್ಯಾಹ್ನ 1ರವರೆಗೆ ಶೇ 40.18ರಷ್ಟು ಮತದಾನ

ವಿಜಯಪುರ: ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಸುಡು ಬಿಸಿಲನಲ್ಲೂ ಜನರು ಮತಗಟ್ಟೆಯತ್ತ ಹೆಜ್ಜೆ ಹಾಕಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಬೆಳಿಗ್ಗೆಯಿಂದ ಮಧ್ಯಾಹ್ನ 1ರ ವರೆಗೆ ಶೇ 40.18ರಷ್ಟು ಮತದಾನವಾಗಿದೆ. ವಿಜಯಪುರ ವಿಧಾನಸಭೆ ಕ್ಷೇತ್ರದಲ್ಲಿ ಶೇ 41.93 ರಷ್ಟು ಮತದಾನವಾಗಿದೆ. ಉಳಿದಂತೆ ಮುದ್ದೇಬಿಹಾಳ ಶೇ 38.75, ದೇವರ ಹಿಪ್ಪರಗಿ ಶೇ 38.55 ಬಸವನ ಬಾಗೇವಾಡಿ ಶೇ 42.30, ಬಬಲೇಶ್ವರ ಶೇ 42.05, ನಾಗಠಾಣ ಶೇ 39.22, ಇಂಡಿ ಶೇ 39.67, ಸಿಂದಗಿ ಶೇ 38.92 ಸೇರಿದಂತೆ ಜಿಲ್ಲೆಯಾದ್ಯಂತ ಶೇ 40.18 ಮತದಾನ ಆಗಿದೆ.

ಬೀದರ್ ಲೋಕಸಭಾ ಕ್ಷೇತ್ರ: ಮಧ್ಯಾಹ್ನ 1ರವರೆಗೆ ಶೇ 37.97ರಷ್ಟು ಮತದಾನ

ಹಾವೇರಿ ಲೋಕಸಭಾ ಕ್ಷೇತ್ರ:  ಮಧ್ಯಾಹ್ನ 1ರವರೆಗೆ ಶೇ 43.26ರಷ್ಟು ಮತದಾನ

ಧಾರವಾಡ ಲೋಕಸಭಾ ಕ್ಷೇತ್ರ: ಮಧ್ಯಾಹ್ನ 1ರವರೆಗೆ ಶೇ 40.05ರಷ್ಟು ಮತದಾನ

ಬಳ್ಳಾರಿ ಲೋಕಸಭಾ ಕ್ಷೇತ್ರ: ಮಧ್ಯಾಹ್ನ 1ರವರೆಗೆ ಶೇ.44.36ರಷ್ಟು ಮತದಾನ

ಬೆಳಗಾವಿ ಲೋಕಸಭಾ ಕ್ಷೇತ್ರ: ಮಧ್ಯಾಹ್ನ 1ರವರೆಗೆ ಶೇ 40.78ರಷ್ಟು ಮತದಾನ

ಚಿಕ್ಕೋಡಿ ಲೋಕಸಭಾ ಕ್ಷೇತ್ರ: ಮಧ್ಯಾಹ್ನ 1ರವರೆಗೆ ಶೇ 45.69ರಷ್ಟು ಮತದಾನ

ಹೊಸಪೇಟೆ: ಬಿಸಿಲಲ್ಲೂ ಕುಗ್ಗದ ಮತದಾನ ಉತ್ಸಾಹ

ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಯಲ್ಲಿ ಬಿಸಿಲಿನ ಝಳ ತೀವ್ರವಾಗಿ ಇದ್ದರೂ ಮತದಾರರ ಉತ್ಸಾಹಕ್ಕೆ ಅದು ಧಕ್ಕೆ ತಂದಿಲ್ಲ ಎಂಬುದನ್ನು ಮಧ್ಯಾಹ್ನದ ಮತಗಟ್ಟೆ ದೃಶ್ಯಗಳು ಸಾಬೀತುಪಡಿಸಿವೆ.

ಬಿಸಿಲಿನ ಝಳ ಇದ್ದರೂ ಮಧ್ಯಾಹ್ನ 1 ಗಂಟೆಯ ಸಮಯದಲ್ಲೂ ಹಲವೆಡೆ ಉದ್ದರ ಸರದಿ ಸಾಲುಗಳು ಕಾಣಿಸಿದವು. ಹೊಸಪೇಟೆಯ ನಗರದ ಊರಮ್ಮನಬೈಲು ಮತಗಟ್ಟೆಯಲ್ಲಿ ಉದ್ದದ ಸರದಿ ಕಂಡರೆ, ಸೀತಾರಾಮ ತಾಂಡಾದಲ್ಲಿ ಶೇ 67ರಷ್ಟು ಮತದಾನವಾಗಿದೆ.

ಬಿಸಿಲ ಝಳ; ಬೀದರ್‌ನಲಲ್ಲಿ ಬಿಕೋ ಎನ್ನುತ್ತಿರುವ ಮತಗಟ್ಟೆಗಳು : ಬೆಳಿಗ್ಗೆ ಚುರುಕಿನಿಂದ ನಡೆದ ಮತದಾನ ಮಧ್ಯಾಹ್ನ ಬಿಸಿಲೇರುತ್ತಿದ್ದಂತೆ ಬಹಳ ನಿಧಾನವಾಗಿದೆ. ಬಿಸಿಲು ಹೆಚ್ಚಾಗಿ, ಉಷ್ಣ ಅಲೆಗಳು ಬೀಸಲಾರಂಬಿಸಿದ್ದು ಬಹುತೇಕ ಮತಗಟ್ಟೆಗಳಲ್ಲಿ ಮತದಾರರು ಇಲ್ಲದೆ ಬಿಕೋ‌ ಎನ್ನುತ್ತಿವೆ. ಮತದಾರರು ಇಲ್ಲದ ಕಾರಣ ಮತಗಟ್ಟೆ ಸಿಬ್ಬಂದಿ ಊಟ ಮಾಡುತ್ತಿದ್ದಾರೆ. ಕೆಲವೆಡೆ ಒಂದಿಬ್ಬರು ಬಂದು ಹೋಗುತ್ತಿದ್ದರೆ ಕೆಲವೆಡೆ ಯಾರೊಬ್ಬರೂ ಸುಳಿಯುತ್ತಿಲ್ಲ. ಪ್ರಮುಖ ರಸ್ತೆಗಳೆಲ್ಲ ಬಿಕೋ ಎನ್ನುತ್ತಿವೆ. ಜಿಲ್ಲೆಯಾದ್ಯಂತ ಕಳೆದ ಎರಡ್ಮೂರು ದಿನಗಳಿಂದ 42ರಿಂದ 43 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಮಂಗಳವಾರ 43 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಷ್ಣ ಅಲೆಗಳು ಬೀಸುತ್ತಿವೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಂಜೆ 6.30ರ ವರೆಗೆ ಬಿಸಿಲು ಇರುತ್ತಿದೆ. ಬಿಸಿ ಗಾಳಿ ಬೀಸುತ್ತಿದೆ. ಮತದಾನ ಪ್ರಮಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ‌ಎಂದು‌ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಮಧ್ಯಾಹ್ನ 2ರ ವರೆಗೆ ಕ್ಷೇತ್ರದ ಲ್ಲಿ ಶೇ 40ರಷ್ಟು ಮತದಾನವಾಗಿದೆ. ಶೇ 55ರಿಂದ 60 ರಷ್ಟು ಮತದಾನ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹಿಂದಿನ ಚುನಾವಣೆಯಲ್ಲಿ ಶೇ 63.5ರಷ್ಟು ಮತದಾನವಾಗಿತ್ತು.

ಮುಂಡಗೋಡ: ತಾಲ್ಲೂಕಿನ ನಂದಿಗಟ್ಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಾಪುರ ಗ್ರಾಮಸ್ಥರು ಪ್ರತ್ಯೇಕ ಮತಗಟ್ಟೆಗೆ ಒತ್ತಾಯಿಸಿ, ಮಂಗಳವಾರ ಮಧ್ಯಾಹ್ನ 2 ಗಂಟೆವರೆಗೂ ಮತಗಟ್ಟೆಗೆ ಹೋಗದೇ, ಗ್ರಾಮದಲ್ಲಿಯೇ ಉಳಿದು ಮತದಾನವನ್ನು ಬಹಿಷ್ಕರಿಸಿದ್ದಾರೆ. ನಂದಿಗಟ್ಟಾ ಮತಗಟ್ಟೆ ಸಂಖ್ಯೆ 105ರ ವ್ಯಾಪ್ತಿಯಲ್ಲಿ ಬರುವ ಬಸಾಪುರ ಗ್ರಾಮದಲ್ಲಿ ಸುಮಾರು 300ಕ್ಕೂ ಹೆಚ್ಚು ಮತದಾರರಿದ್ದಾರೆ. ಈ ಗ್ರಾಮದಿಂದ ನಂದಿಗಟ್ಟಾ ಗ್ರಾಮದ ಮತಗಟ್ಟೆ ಸುಮಾರು 2ರಿಂದ3ಕಿಮೀ ಅಂತರದಲ್ಲಿದೆ. ಮಹಿಳೆಯರು, ವೃದ್ಧರು ಇಷ್ಟು ದೂರ ನಡೆದುಕೊಂಡು ಹೋಗಿ ಮತದಾನ ಮಾಡಲು ಕಷ್ಟವಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. 'ಸಮರ್ಪಕ ರಸ್ತೆ, ವಾಹನ ವ್ಯವಸ್ಥೆಯೂ ಇಲ್ಲ. ಕಳೆದ ಹಲವು ವರ್ಷಗಳಿಂದ ಪ್ರತ್ಯೇಕ ಮತಗಟ್ಟೆಗೆ ಬೇಡಿಕೆ ಇಡುತ್ತಿದ್ದರೂ, ಅಧಿಕಾರಿಗಳು ತಾತ್ಕಾಲಿಕ ಭರವಸೆ ನೀಡಿ ಗ್ರಾಮಸ್ಥರನ್ನು ಸಮಾಧಾನ ಪಡಿಸುವ ಕೆಲಸ ಮಾಡುತ್ತ ಬಂದಿದ್ದಾರೆ. ಆದರೆ, ಇಲ್ಲಿಯವರೆಗೂ ಪ್ರತ್ಯೇಕ ಮತಗಟ್ಟೆ ಬೇಡಿಕೆ ಈಡೇರಿಲ್ಲ' ಎಂದು ಗ್ರಾಮಸ್ಥರಾದ ಬಸವರಾಜ ಅಂಗಡಿ, ನಾಗನಗೌಡ, ಈರಯ್ಯ ಕರ್ಪೂರಮಠ, ನಿಂಗಪ್ಪ ಬೇವಿನಮರದ, ಕಲ್ಲಪ್ಪ ಸೇರಿದಂತೆ ಹಲವರು ಆರೋಪಿಸಿದರು. ವಿಷಯ ತಿಳಿದು ಸ್ಥಳಕ್ಕೆ ತಹಶೀಲ್ದಾರ್ ಶಂಕರ ಗೌಡಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಮತದಾರರ ಮನವೊಲಿಸಲು ಪ್ರಯತ್ನಿಸಿದರೂ, ಮಧ್ಯಾಹ್ನದವರೆಗೂ ಗ್ರಾಮಸ್ಥರು ಮತದಾನ ಮಾಡದೇ, ಬೇಡಿಕೆ ಈಡೇರಿಕೆಗೆ ಪಟ್ಟು ಹಿಡಿದಿದ್ದಾರೆ.

ಬೀದರ್ ಲೋಕಸಭಾ ಕ್ಷೇತ್ರದಲ್ಲಿ  ಮಧ್ಯಾಹ್ನ 3ಕ್ಕೆ... ಶೇ 47.58ರಷ್ಟು ಮತದಾನ

ಬೆಳಗಾವಿ: ಇಲ್ಲಿನ ಹನುಮಾನ್ ನಗರದಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಶಾಲೆಯಲ್ಲಿ ತೆರೆದ ಮತಗಟ್ಟೆಯಲ್ಲಿ ಮಂಗಳವಾರ ಮಧ್ಯಾಹ್ನ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬೆಳಗ್ಗೆ 03.00 ಗಂಟೆಯ ರವರೆಗೆ ಒಟ್ಟು ಶೇ.56.76% ಮತದಾನ ಪ್ರಮಾಣ. ಬಳ್ಳಾರಿ ಗ್ರಾಮೀಣ - ಶೇ.55.36 ಬಳ್ಳಾರಿ ನಗರ - ಶೇ.50.77 ಹೂವಿನಹಡಗಲಿ - ಶೇ.56.56 ಹಗರಿಬೊಮ್ಮನಹಳ್ಳಿ- ಶೇ.58.16 ಕಂಪ್ಲಿ - ಶೇ.63.03 ಕೂಡ್ಲಿಗಿ - ಶೇ.60.63 ಸಂಡೂರು - ಶೇ.56.97 ವಿಜಯನಗರ - ಶೇ.54.57

ಮಧ್ಯಾಹ್ನದವರೆಗೆ 14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು ಶೇ 50.40 ಮತದಾನವಾಗಿದೆ

ಬಿಸಿಲಿಗೆ ಬಿರುಸು ಕಳೆದುಕೊಂಡ ಮತದಾನ  ವಿಜಯಪುರ: ಬೆಳಿಗ್ಗೆಯಿಂದ ಮಧ್ಯಾಹ್ನ 3 ರ ವರೆಗೆ ಶೇ 50.43 ರಷ್ಟು ಮತದಾನವಾಗಿದೆ.  ವಿಜಯಪುರ ವಿಧಾನಸಭೆ ಕ್ಷೇತ್ರದಲ್ಲಿ ಶೇ 50.74 ರಷ್ಟು ಮತದಾನವಾಗಿದೆ. ಉಳಿದಂತೆ ಮುದ್ದೇಬಿಹಾಳ ಶೇ 49.65, ದೇವರ ಹಿಪ್ಪರಗಿ ಶೇ 47.14, ಬಸವನ ಬಾಗೇವಾಡಿ ಶೇ 52.95, ಬಬಲೇಶ್ವರ ಶೇ 54.02, ನಾಗಠಾಣ ಶೇ 49.89, ಇಂಡಿ ಶೇ 50.07, ಸಿಂದಗಿ ಶೇ 38.92 ಸೇರಿದಂತೆ ಜಿಲ್ಲೆಯಾದ್ಯಂತ ಶೇ 49.31ರಷ್ಟು ಮತದಾನವಾಗಿದೆ. ಬೆಳಿಗ್ಗೆ ಬಿರುಸಿನಿಂದ ಮತದಾನವಾಗಿದ್ದ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪದ ಪರಿಣಾಮ ನಿಧಾನಗತಿಯಲ್ಲಿ ಮತದಾನ ಪ್ರಕ್ರಿಯೆ ಸಾಗಿದೆ. ಬಿಸಿಲಿಗೆ ಅಂಜಿರುವ ಜನರು ಮಧ್ಯಾಹ್ನ ಮನೆಯಿಂದ ಹೊರಬರಲು ಹಿಂದೇಟು ಹಾಕಿದ್ದಾರೆ. ಮತಗಟ್ಟೆಗಳ ಬಳಿ ಬೆಳಿಗ್ಗೆ ಕಂಡುಬಂದ ಉತ್ಸಾಹ, ಸರದಿ ಸಾಲು ಮಧ್ಯಾಹ್ನದ ವೇಳೆಗೆ ಕರಗಿತ್ತು. ಉಷ್ಣಾಂಶ ಕಡಿಮೆಯಾದ ಬಳಿಕ ಮತದಾರರು ಸಂಜೆ ವೇಳೆಗೆ ಮತಗಟ್ಟೆಯತ್ತ ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ.

ಬೆಳಗಾವಿ ಕ್ಷೇತ್ರ ವಿಧಾನಸಭಾವಾರು ಶೇಕಡ ಮತದಾನ. ಮಧ್ಯಾಹ್ನ 3ರವರೆಗೆ ಬೆಳಗಾವಿ‌ ಗ್ರಾಮೀಣ- 57.o5, ಬೆಳಗಾವಿ ಉತ್ತರ 45.93, ಬೆಳಗಾವಿ ದಕ್ಷಿಣ 50.16, ಬೈಲಹೊಂಗಲ 53.22, ಸವದತ್ತಿ 56.09, ರಾಮದುರ್ಗ 54.56, ಅರಬಾವಿ 54.93, ಗೋಕಾಕ 55.14,.

ಹಾವೇರಿ ಲೋಕಸಭಾ ಕ್ಷೇತ್ರ: ಮಧ್ಯಾಹ್ನ 3ಗಂಟೆವರೆಗೆ ಶೇ. 58.45ರಷ್ಟು ಮತದಾನ ಬ್ಯಾಡಗಿ - 63.13 ಗದಗ- 56.22 ಹಾನಗಲ್ಲ- 60.86 ಹಾವೇರಿ - 58.01 ಹಿರೇಕೆರೂರ - 65.25 ರಾಣೇಬೆನ್ನೂರ-59.88 ರೋಣ - 54.18 ಶಿರಹಟ್ಟಿ - 54.31

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಆಕನಾಳ-ಉಪನಾಳ ಗ್ರಾಮದಲ್ಲಿ ದಲಿತ ಕಾಲೊನಿಗೆ ಮೂಲ ಸೌಲಭ್ಯ ಕಲ್ಪಿಸಿಲ್ಲ ಎಂದು ಪರಿಶಿಷ್ಟ ಜಾತಿ ಸಮುದಾಯದವರು ಚುನಾವಣೆ ಬಹಿಷ್ಕಾರ ಮಾಡಿದರು. ಕಾಲೊನಿಯಲ್ಲಿ ರಸ್ತೆ ಅಭಿವೃದ್ಧಿ ಮಾಡಿಲ್ಲ. ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಲ್ಲ. ಶೌಚಾಲಯ ಸೌಲಭ್ಯ ಇಲ್ಲ. ಚರಂಡಿ ಸೌಲಭ್ಯ ಇಲ್ಲ. ಎಲ್ಲಿ ಅಂದ್ರೆ ಅಲ್ಲಿ ವಿದ್ಯುತ್ ತಂತಿ ಜೋತು ಬಿದ್ದಿವೆ. ಹೀಗಾಗಿ ಮೂಲ ಸೌಲಭ್ಯ ಕಲ್ಪಿಸುವರಿಗೆ ಯಾವುದೆ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ ಎಂದು ಬಹಿಷ್ಕಾರ ಮಾಡಿದರು.

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಶೇ 55 ಮತದಾನವಾಗಿದೆ. ನವಲಗುಂದ ಶೇ 56.06., ಕುಂದಗೋಳ ಶೇ 54.54, ಧಾರವಾಡ ಶೇ 57.2, ಹು.ಧಾ ಪೂರ್ವ ಶೇ 55.2, ಹು-ಧಾ ಸೆಂಟ್ರಲ್ ಶೇ 52.61, ಹು-ಧಾ ಪಶ್ಚಿಮ ಶೇ 51.58, ಕಲಘಟಗಿ ಶೇ 60.1, ಶಿಗ್ಗಾವಿ ಶೇ 54.57 ಮತದನಾವಾಗಿದೆ.

ಲೋಕಸಭಾ ಚುನಾವಣೆಯ ಮತದಾನ ದಿನವಾದ ಇಂದು ಧಾರವಾಡದ ಬುದ್ಧ ರಕ್ಕಿತ ಶಾಲೆಯಲ್ಲಿ ತೆರೆಯಲಾಗಿದ್ದ ಮತಗಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಮತದಾನ ಮಾಡಿದ ಕಾನೂನು ವಿದ್ಯಾರ್ಥಿನಿ ತೇಜಸ್ವಿನಿ ನೀರಲಕೇರಿ ತನ್ನ ಪೋಷಕರಾದ ಬಿಜೆಪಿ ಮುಖಂಡ ಪಿ.ಎಚ್. ನೀರಲಕೇರಿ ಹಾಗೂ ರಾಜೇಶ್ವರಿ ನೀರಲಕೇರಿ ಅವರೊಂದಿಗೆ ಕಂಡು ಬಂದಿದ್ದು ಹೀಗೆ

ಬಾಗಲಕೋಟೆ ಲೋಕಸಭಾ ಕ್ಷೇತ್ರ * ಮಧ್ಯಾಹ್ನ 3 ಗಂಟೆವರೆಗೆ ಮತದಾನ ಪ್ರಮಾಣ ಶೇ.55.15 ಮುಧೋಳ - ಶೇ.57.5 ತೇರದಾಳ ಶೇ.58.39 ಜಮಖಂಡಿ ಶೇ.55.04 ಬೀಳಗಿ ಶೇ. 56.97 ಬಾಗಲಕೋಟೆ ಶೇ.51.49 ಬಾದಾಮಿ ಶೇ.53.31 ಹುನಗುಂದ ಶೇ. 51.05 ನರಗುಂದ ಶೇ. 58.18

ರಾಯಚೂರು ಲೋಕಸಭಾ ಕ್ಷೇತ್ರ ಸಮಯ:ಮಧ್ಯಾಹ್ನ 3 ಗoಟೆವರೆಗೆ ಮತದಾನ ವಿವರ: ಶೇ. 47.70

ಹೊಸಪೇಟೆ (ವಿಜಯನಗರ): ಬಿರು ಬಿಸಿಲಿನ ಕಾರಣಕ್ಕೆ ಲೋಕಸಭಾ ಚುನಾವಣೆಯ ಮತದಾನ ಕೊಂಚ ಇಳಿಮುಖವಾಗಬಹುದು ಎಂಬ ನಿರೀಕ್ಷೆಯನ್ನು ಹುಸಿಗೊಳಿಸಿರುವ ವಿಜಯನಗರ ಜಿಲ್ಲೆಯ ಮತದಾರರು, ಕಳೆದ ಬಾರಿಗಿಂತಲೂ ಅಧಿಕ ಅಂದರೆ ಶೇ 70ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವುದು ಬಹುತೇಕ ಖಚಿತವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಶೇ 69.60ರಷ್ಟು ಮತದಾನವಾಗಿತ್ತು. 

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 3 ಗಂಟೆ ವರೆಗೆ‌ ಮತದಾನದ ಶೇಕಡವಾರು ವಿವರ ಶಿವಮೊಗ್ಗ ಲೋಕಸಭಾ ಕ್ಷೇತ್ರ: ಶೇ. 58.04 ಒಟ್ಟು ಮತಗಳು: 17,52,885 ಮಧ್ಯಾಹ್ನ 3 ಗಂಟೆಯವರೆಗೆ ಚಲಾವಣೆ ಆದ ಮತಗಳು: 10,14,226 ಶಿವಮೊಗ್ಗ ನಗರ- ಶೇ.53.16 ಶಿವಮೊಗ್ಗ ಗ್ರಾಮಾಂತರ- ಶೇ.61.63 ಭದ್ರಾವತಿ- ಶೇ.53.28 ತೀರ್ಥಹಳ್ಳಿ- ಶೇ.60.01 ಸಾಗರ- ಶೇ.59.26 ಸೊರಬ- ಶೇ. 59.58 ಶಿಕಾರಿಪುರ- ಶೇ. 60.75 ಬೈಂದೂರು- ಶೇ. 58.41

ಬೆಳಗಾವಿ: ಇಲ್ಲಿನ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಂಡಿತ ನೆಹರೂ ಸಂಯುಕ್ತ ಜ್ಯೂನಿಯರ್ ಕಾಲೇಜು ಆವರಣದಲ್ಲಿರುವ ಮತಗಟ್ಟೆ ಸಂಖ್ಯೆ 201ರಲ್ಲಿ ಸಿಬ್ಬಂದಿ ಊಟಕ್ಕಾಗಿ ಮತದಾನ ಪ್ರಕ್ರಿಯೆ ಸ್ಥಗಿತಗೊಳಿಸಿದ್ದರಿಂದ ಮತದಾರರು ಹಾಗೂ ಹಿರಿಯ ನಾಗರಿಕರು ಅರ್ಧ ಗಂಟೆಗೂ ಹೆಚ್ಚು ಕಾಲ ಪರದಾಡಿದರು. ‘ನೀವು ಒಬ್ಬೊಬ್ಬರೇ ಊಟ ಮಾಡಿ. ಮತದಾನ ಪ್ರಕ್ರಿಯೆ ಮುಂದುವರಿಸಿ’ ಎಂದು ಮತದಾರರು ಕೋರಿದರೂ, ಸಿಬ್ಬಂದಿ ಪಟ್ಟು ಸಡಿಲಿಸಲಿಲ್ಲ. ಹಾಗಾಗಿ ಮತದಾನ ಆರಂಭವಾಗುವವರೆಗೂ ಜನರು ಕಾಯುತ್ತ ಕುಳಿತುಕೊಳ್ಳಬೇಕಾಯಿತು.

ಧಾರವಾಡ: ಕೊಲೆ ಪ್ರಕರಣದ ಆರೋಪ‌ದಲ್ಲಿ ಧಾರವಾಡ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧವಿರುವ ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ವಿನಯ ಕುಲಕರ್ಣಿ ಅವರು ಧಾರವಾಡ ಪ್ರವೇಶಿಸಿ ಮತ ಚಲಾಯಿಸಲು ಹೈಕೋರ್ಟ್ ಅನಮತಿ ನೀಡಿದ್ದು, ಅವರು ಮತ ಚಲಾಯಿಸಲಿರುವ ಸಪ್ತಾಪೂರದ ಶಾರದಾ ವಿದ್ಯಾಲಯದ ಆವರಣದಲ್ಲಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಪರಸ್ಪರ ಕಲ್ಲು ತೂರಾಟ. ಯಾದಗಿರಿ: ಮತದಾನದ ವೇಳೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಪರಸ್ಪರ ಕಲ್ಲು ತೂರಾಟವಾಗುವ ಹಂತಕ್ಕೆ ತಲುಪಿ ಒಬ್ಬರಿಗೆ ಗಂಭೀರ ಗಾಯವಾಗಿದೆ. ಗಾಯಾಳುವನ್ನು ಸುರಪುರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕಾಗವಾಡ ತಾಲ್ಲೂಕಿನ ಮಂಗಾವತಿ ಗ್ರಾಮದ ಮತಗಟ್ಟೆ 154ರಲ್ಲಿ ವ್ಯಕ್ತಿಯೊಬ್ಬರು, ಮತದಾನ ಮಾಡಿದ ಮೇಲೆ ಯಂತ್ರವು ಶಬ್ದ ಮಾಡಿಲ್ಲ ಎಂದು ಗಲಾಟೆ ಮಾಡಿದ ಪ್ರಸಂಗ ನಡೆಯಿತು. ‘ನಾನು ಸರಿಯಾಗಿಯೇ ಮತ ಹಾಕಿದ್ದೇನೆ. ಈ ಯಂತ್ರ ಸರಿಯಾಗಿಲ್ಲ’ ಎಂದು ಮತದಾರ ಮತಯಂತ್ರದ ಮುಂದೆಯೇ ನಿಂತು ಕೂಗಾಡಲು ಶುರು ಮಾಡಿದರು. ಯಂತ್ರವು ಸದ್ದು ಮಾಡಿದೆ, ನೀವೇ ಕೇಳಿಸಿಕೊಂಡಿಲ್ಲ ಎಂದು ಮತಗಟ್ಟೆ ಸಿಬ್ಬಂದಿ ಮನವರಿಕೆ ಮಾಡಲು ಯತ್ನಿಸಿದರು. ಆದರೂ ಕೇಳದೇ ಮತದಾರ ಕೂಗಾಡಲು ಶುರು ಮಾಡಿದರು.

ಹೃದಾಯಾಘಾತದಿಂದ ಮತಗಟ್ಟೆ ಅಧಿಕಾರಿ ಸಾವು ದೇವದುರ್ಗ (ರಾಯಚೂರು ಜಿಲ್ಲೆ): ತಾಲ್ಲೂಕಿನ ಜಾಗೀರಜಾಡಲದಿನ್ನಿ‌ ಗ್ರಾಮದ ಮತಗಟ್ಟೆಯಲ್ಲಿ ಬಿ ಎಲ್ ಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ (58) ಮಂಗಳವಾರ ಮಧ್ಯಾಹ್ನ ಹೃದಯಘಾತದಿಂದ ಮೃತಪಟ್ಟಿದ್ದಾರೆ.

ಧಾರವಾಡಕ್ಕೆ ಬಂದು ಮತ ಚಲಾಯಿಸಿದ ವಿನಯ್ ಕೊಲೆ ಆರೋಪಿ, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ. ಪ್ತಾಪೂರದ ಶಾರದಾ ವಿದ್ಯಾಲಯದಲ್ಲಿ ಮತ ಚಲಾಯಿಸಿದರು

ವಿಜಯಪುರ ಶೇ 61.18ರಷ್ಟು ಮತದಾನ ವಿಜಯಪುರ: ಬೆಳಿಗ್ಗೆಯಿಂದ ಸಂಜೆ 5ರ ವರೆಗೆ ಶೇ 61.18 ರಷ್ಟು ಮತದಾನವಾಗಿದೆ.  ವಿಜಯಪುರ ವಿಧಾನಸಭೆ ಕ್ಷೇತ್ರದಲ್ಲಿ ಶೇ 58.82 ರಷ್ಟು ಮತದಾನವಾಗಿದೆ. ಉಳಿದಂತೆ ಮುದ್ದೇಬಿಹಾಳ ಶೇ 60.04, ದೇವರ ಹಿಪ್ಪರಗಿ ಶೇ 57.64, ಬಸವನ ಬಾಗೇವಾಡಿ ಶೇ 64.97, ಬಬಲೇಶ್ವರ ಶೇ 66.51, ನಾಗಠಾಣ ಶೇ 60.73, ಇಂಡಿ ಶೇ 60.15, ಸಿಂದಗಿ ಶೇ 60.58 ಸೇರಿದಂತೆ ಜಿಲ್ಲೆಯಾದ್ಯಂತ ಶೇ 61.18 ರಷ್ಟು ಮತದಾನವಾಗಿದೆ.

ದುಬೈಯಿಂದ ಬಂದು ಮತದಾನ ;;; ಬಸವಕಲ್ಯಾಣ ನಗರದ ರೇವಣಸಿದ್ದಯ್ಯ ವಿ.ಪುರವಂತ ಮಂಗಳವಾರ ದುಬೈಯಿಂದ ಬಿಡುವು ಮಾಡಿಕೊಂಡು ಬಂದು ಲೋಕಸಭೆ ಚುನಾವಣೆಯ ಮತದಾನದ ಹಕ್ಕು ಚಲಾಯಿಸಿದ್ದಾರೆ.

ಹಾವೇರಿ.. ಹಾವೇರಿ ಲೋಕಸಭಾ ಕ್ಷೇತ್ರ: ಸಂಜೆ 5 ಗಂಟೆವರೆಗೆ ಶೇ. 71.9.ರಷ್ಟು ಮತದಾನ ಬ್ಯಾಡಗಿ - 77.32 ಗದಗ- 68.04 ಹಾನಗಲ್ಲ- 76.73 ಹಾವೇರಿ - 71.73 ಹಿರೇಕೆರೂರ - 77.47 ರಾಣೇಬೆನ್ನೂರ- 73.23 ರೋಣ - 66.09 ಶಿರಹಟ್ಟಿ - 66.45

ಬಾಗಲಕೋಟೆ ಲೋಕಸಭಾ ಕ್ಷೇತ್ರ * ಸಂಜೆ 5 ಗಂಟೆವರೆಗೆ ಮತದಾನ ಪ್ರಮಾಣ ಶೇ 67.12 ಮುಧೋಳ - ಶೇ70.57 ತೇರದಾಳ ಶೇ71.02 ಜಮಖಂಡಿ ಶೇ67.47 ಬೀಳಗಿ ಶೇ 69.22 ಬಾಗಲಕೋಟೆ ಶೇ61.31 ಬಾದಾಮಿ ಶೇ65.78 ಹುನಗುಂದ ಶೇ62.82 ನರಗುಂದ ಶೇ 69.71

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬೆಳಗ್ಗೆ 05.00 ಗಂಟೆಯ ರವರೆಗೆ ಒಟ್ಟು ಶೇ.68.94% ಮತದಾನ ಪ್ರಮಾಣ. ಬಳ್ಳಾರಿ ಗ್ರಾಮೀಣ - ಶೇ.67.53 ಬಳ್ಳಾರಿ ನಗರ - ಶೇ.60.33 ಹೂವಿನಹಡಗಲಿ - ಶೇ.70.72 ಹಗರಿಬೊಮ್ಮನಹಳ್ಳಿ- ಶೇ.72.12 ಕಂಪ್ಲಿ - ಶೇ.74.61 ಕೂಡ್ಲಿಗಿ - ಶೇ.73.29 ಸಂಡೂರು - ಶೇ.70.09 ವಿಜಯನಗರ - ಶೇ.65.61

ದೇವದುರ್ಗ: ಮತಗಟ್ಟೆ ಅಧಿಕಾರಿ ಹೃದಾಯಾಘಾತದಿಂದ ಸಾವು ದೇವದುರ್ಗ (ರಾಯಚೂರು ಜಿಲ್ಲೆ): ತಾಲ್ಲೂಕಿನ ಜಾಗೀರಜಾಡಲದಿನ್ನಿ‌ ಗ್ರಾಮದ ಮತಗಟ್ಟೆಯಲ್ಲಿ ಬಿ ಎಲ್ ಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ (58) ಮಂಗಳವಾರ ಮಧ್ಯಾಹ್ನ ಹೃದಯಘಾತದಿಂದ ಮೃತಪಟ್ಟಿದ್ದಾರೆ.

ಈ ಲೋಕಸಭೆ ಚುನಾವಣೆ ನಾಮಪತ್ರ, ಪ್ರಚಾರ ಸೇರಿದಂತೆ ಇಡೀ ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದ ಇಲ್ಲಿಯ ಶಾಸಕ ಪ್ರಭು ಚವಾಣ್ ಅವರು ಮಂಗಳವಾರ ಬೆಳಿಗ್ಗೆ ತಾಲ್ಲೂಕಿನ ಬೊಂತಿ ತಾಂಡಾದ ಮತಗಟ್ಟೆ ಸಂಖ್ಯೆ 31ರಲ್ಲಿ ತಮ್ಮ ಪತ್ನಿ ಸಕ್ಕುಬಾಯಿ, ಪುತ್ರ ಪ್ರತಿಕ್ ಚವಾಣ್ ಜತೆ ಬಂದು ಮತದಾನ ಮಾಡಿದರು.

ಕೆರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಿಷಭ್ ಶೆಟ್ಟಿ ಮತದಾನ . ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಭ್ ಶೆಟ್ಟಿ ಕುಂದಾಪುರ ಬಳಿಯ ಕೆರಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು .

ರಾಜ್ಯದಲ್ಲಿ 5 ಗಂಟೆವರೆಗೆ ಶೇ 66.05 ರಷ್ಟು ಮತದಾನವಾಗಿದೆ: ಚುನಾವಣಾ ಆಯೋಗ

ಹಾವೇರಿ: ಆಸ್ಟೇಲಿಯಾದ ಸಿಡ್ನಿಯಿಂದ ಹಾವೇರಿ ನಗರಕ್ಕೆ 9,600 ಕಿ.ಮೀ. ಪ್ರಯಾಣ ಮಾಡಿಕೊಂಡು ಬಂದ ಮಹಿಳೆಯೊಬ್ಬರು ಮಂಗಳವಾರ ಲಯನ್ಸ್‌ ಶಾಲೆಯ ಮತಗಟ್ಟೆ ಕೇಂದ್ರದಲ್ಲಿ ಮತದಾನ ಮಾಡಿದರು. ನಗರದ ಬಸವೇಶ್ವರ ನಗರ ಮೂಲದ ಭಾವನಾ ಶಿವಾನಂದ ಅವರು 12 ವರ್ಷಗಳಿಂದ ಹೊರದೇಶದಲ್ಲಿದ್ದು, ಪ್ರಸ್ತುತ ಸಿಡ್ನಿಯಲ್ಲಿ ವಾಸವಾಗಿದ್ದಾರೆ. 

ಹಾನಗಲ್ (ಹಾವೇರಿ): ತಾಲ್ಲೂಕಿನ ರತ್ನಾಪುರ ಗ್ರಾಮದಲ್ಲಿ ಸಂತ ಸೇವಾಲಾಲ್ ಭವನದ ಅಪೂರ್ಣ ಕಾಮಗಾರಿಯಿಂದ ಅಸಮಾಧಾನಗೊಂಡ ಗ್ರಾಮಸ್ಥರು ಮಂಗಳವಾರ ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದರು. ತಾಲ್ಲೂಕು ಆಡಳಿತದ ಮಧ್ಯಸ್ಥಿಕೆಯಿಂದ ಬಳಿಕ ಮತದಾನ ಪ್ರಕ್ರಿಯೆ ಯಥಾಸ್ಥಿತಿಯಲ್ಲಿ ನಡೆಯಿತು.

ರಾಣೆಬೆನ್ನೂರು (ಹಾವೇರಿ): ಲೋಕಸಭಾ ಚುನಾವಣೆಗೆ ಮೇ 7ರಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ತಾಲ್ಲೂಕಿನ ತೆರೇದಹಳ್ಳಿ ಗ್ರಾಮದ ಬಳಿಯ ವೆಂಕಟೇಶ್ವರ ಹ್ಯಾಚರೀಸ್‌ ಹಾಗೂ ಗೋಲ್ಡನ್‌ ಹ್ಯಾಚರೀಸ್‌ ಚಿಕನ್‌ ಫ್ಯಾಕ್ಟರಿ ಆಡಳಿತ ಮಂಡಳಿಯವರು ಕಾರ್ಮಿಕರಿಗೆ ಅವಕಾಶ ನೀಡಿಲ್ಲ ಎಂದು ಆರೋಪಿಸಿ ರೈತ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ಮಂಗಳವಾರ ಸಂಜೆ 7ರ ಹೊತ್ತಿಗೆ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಶೇ 70.77 ಹಾಗೂ ಚಿಕ್ಕೋಡಿ ಕ್ಷೇತ್ರಕ್ಕೆ ಶೇ 78.31ರಷ್ಟು ಮತದಾನವಾಗಿದೆ.

ಬೀದರ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಅವರು ತಮ್ಮ ಅಂಗಿ ಮೇಲೆ ಪಕ್ಷದ ಚಿಹ್ನೆ (ಕಮಲದ ಬ್ಯಾಡ್ಜ್) ಧರಿಸಿಕೊಂಡು ಮತಗಟ್ಟೆಗೆ ಹೋಗಿ ಮತದಾನ ಮಾಡಿದ ದೂರಿನ ಮೇರೆಗೆ ಅವರ ವಿರುದ್ಧ ಇಲ್ಲಿಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೀದರ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಅವರು ತಮ್ಮ ಅಂಗಿ ಮೇಲೆ ಪಕ್ಷದ ಚಿಹ್ನೆ (ಕಮಲದ ಬ್ಯಾಡ್ಜ್) ಧರಿಸಿಕೊಂಡು ಮತಗಟ್ಟೆಗೆ ಹೋಗಿ ಮತದಾನ ಮಾಡಿದ ದೂರಿನ ಮೇರೆಗೆ ಅವರ ವಿರುದ್ಧ ಇಲ್ಲಿಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧಾರವಾಡ: ಧಾರವಾಡ ಲೊಕಸಭಾ ಕ್ಷೇತ್ರದಲ್ಲಿ ಸಂಜೆ 5 ಗಂಟೆ ಹೊತ್ತಿಗೆ ಶೇ 67.15 ಮತದಾನವಾಗಿದೆ. ವಿಧಾನಸಭಾ ಕ್ಷೇತ್ರವಾರು ನವಲಗುಂದ ಶೇ68.42, ಕುಂದಗೋಳ ಶೇ 68, ಧಾರವಾಡ ಶೇ69.2, ಹುಬ್ಬಳ್ಳಿ-ಧಾರವಾಡ ಪೂರ್ವ ಶೇ 67.57, ಹುಬ್ಬಳ್ಳಿ-ಧಾರವಾಡ ಕೇಂದ್ರ ಶೇ 62.23, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಶೇ 61.44, ಕಲಘಟಗಿ ಶೇ 74.1 ಹಾಗೂ ಶಿಗ್ಗಾವಿ ಶೇ 69.48 ಮತದಾನವಾಗಿದೆ.

ರಾಯಚೂರು: ರಾಯಚೂರು ‍ಪರಿಶಿಷ್ಟ ಪಂಗಡದ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಶೇ.62 ರಷ್ಟು ಮತದಾನವಾಗಿದೆ. ಮತದಾನ ಮುಕ್ತಾಯವಾದ ವೇಳೆಗೆ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಶೇ 62ರಷ್ಟು, ನಗರ ಕ್ಷೇತ್ರದಲ್ಲಿ ಶೇ.57.37 ರಷ್ಟು, ಮಾನ್ವಿ ಕ್ಷೇತ್ರದಲ್ಲಿ ಶೇ.61.31, ದೇವದುರ್ಗ ಕ್ಷೇತ್ರದಲ್ಲಿ ಶೇ.60.44, ಲಿಂಗಸುಗೂರು ಕ್ಷೇತ್ರದಲ್ಲಿ ಶೇ.59.9, ಶೋರಾಪುರ ಕ್ಷೇತ್ರದಲ್ಲಿ ಶೇ.69.61, ಶಹಾಪುರ ಕ್ಷೇತ್ರದಲ್ಲಿ ಶೇ.60.13 ಹಾಗೂ ಯಾದಗಿರಿ ಕ್ಷೇತ್ರದಲ್ಲಿ ಶೇ ಶೇ.58.79ರಷ್ಟು ಮತದಾನವಾಗಿದೆ.

ಹಾವೇರಿ: ಅಮೇರಿಕಾದಿಂದ ಬಂದು ಬೆಳಗಾಲಪೇಟೆ ಗ್ರಾಮದಲ್ಲಿ ಮತಚಲಾಯಿಸಿದ ದಂಪತಿಗಳು

ಎರಡನೇ ಹಂತದಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ಅಂತ್ಯವಾಗಿದೆ. ಐದು ಗಂಟೆವರೆಗೆ 66.05 ರಷ್ಟು ಮತದಾನವಾಗಿದೆ: ಚುನಾವಣಾ ಆಯೋಗ

ವಿಜಯಪುರ: ಶೇ 66.32 ರಷ್ಟು ಮತದಾನ; ಮತಯಂತ್ರ ಸೇರಿದ ಭವಿಷ್ಯ

ಎರಡನೇ ಹಂತದಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ಅಂತ್ಯವಾಗಿದೆ. ಐದು ಗಂಟೆವರೆಗೆ 66.05 ರಷ್ಟು ಮತದಾನವಾಗಿತ್ತು ಎಂದು ಚುನಾವಣಾ ಆಯೋಗ ಹೇಳಿತ್ತು. ಬಿಸಿಲಿನ ನಡುವೆಯೂ ಅನೇಕ ಕಡೆ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ಹೈದರಾಬಾದ್ ಕರ್ನಾಟಕದ ಕೆಲವೆಡೆ ನಿರೀಕ್ಷಿಸಿದಷ್ಟು ಮತದಾನ ನಡೆದಿಲ್ಲ. ಇದಕ್ಕೆ ಭಾರಿ ಬಿಸಿಲೇ ಕಾರಣ ಎನ್ನಲಾಗಿದೆ. ಕೆಲವೆಡೆ ಮತದಾನ ಬಹಿಷ್ಕಾರ ಹಾಗೂ ಸುರಪುರ ಉಪ ಚುನಾವಣಾ ಕಣದಲ್ಲಿ ಕಾಂಗ್ರೆಸ್–ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿಯಾಗಿದ್ದು ಬಿಟ್ಟರೇ ಚುನಾವಣೆ ಬಹುತೇಕ ಅಂತ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.