ADVERTISEMENT

ಶಿರಾ: ಸುಗಮ ಮತದಾನಕ್ಕೆ 266 ಮತಗಟ್ಟೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2024, 14:18 IST
Last Updated 22 ಮಾರ್ಚ್ 2024, 14:18 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಶಿರಾ: ಚಿತ್ರದುರ್ಗ ಲೋಕಸಭೆ ವ್ಯಾಪ್ತಿಗೆ ಸೇರುವ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಸುಗಮ ಮತದಾನಕ್ಕಾಗಿ 266 ಮತಗಟ್ಟೆಗಳನ್ನು ತೆರೆಯಲಾಗಿದೆ.

ಶಿರಾ ಕ್ಷೇತ್ರದಲ್ಲಿ ಒಟ್ಟು 2,26,694 ಮತದಾರರಿದ್ದಾರೆ.

ADVERTISEMENT

ತಾಲ್ಲೂಕಿನ ಲಕ್ಕನಹಳ್ಳಿ, ಕೆಂತಾರ್ಲಹಟ್ಟಿ, ಗೌಡಗೆರೆ, ಕರೇಜವನಹಳ್ಳಿ, ಬೋರಸಂದ್ರ ಮತ್ತು ಹಾರೋಗೆರೆ ಸೇರಿದಂತೆ ಆರು ಕಡೆ ಚೆಕ್ ಪೋಸ್ಟ್ ತೆರೆಯಲಾಗಿದೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದೆ.

ಚುನಾವಣೆ ಸಿಬ್ಬಂದಿಗೆ ಮೊದಲನೇ ಹಂತದ ತರಬೇತಿಯನ್ನು ಮಾರ್ಚ್‌ 31ರಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.

ಚುನಾವಣೆ ಹಿನ್ನೆಲೆಯಲ್ಲಿ ಸಹಾಯವಾಣಿ ಪ್ರಾರಂಭಿಸಿದ್ದು ‘08135-200842’ ಸಂಪರ್ಕಿಸಬಹುದು.

ಶಿರಾ ತಾಲ್ಲೂಕಿನ ಕಸಬಾ, ಕಳ್ಳಂಬೆಳ್ಳ, ಗೌಡಗೆರೆ ಹಾಗೂ ಹುಲಿಕುಂಟೆ ಹೋಬಳಿಗಳು ಚಿತ್ರದುರ್ಗ ಲೋಕಸಭಾ ಕ್ಷೇತ್ರ ಸೇರಿದರೆ, ಬುಕ್ಕಾಪಟ್ಟಣ ಹೋಬಳಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಸೇರುವುದರಿಂದ ತಾಲ್ಲೂಕು ಇಬ್ಬರು ಸಂಸದರನ್ನು ಹೊಂದಿದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.