ADVERTISEMENT

Video: ಇಬ್ಬರ ಜಗಳದಲ್ಲಿ 3ನೆಯವರಿಗೆ ಲಾಭ-ಕೋಲಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೌತಮ್

ಪ್ರಜಾವಾಣಿ ವಿಶೇಷ
Published 30 ಮಾರ್ಚ್ 2024, 10:51 IST
Last Updated 30 ಮಾರ್ಚ್ 2024, 10:51 IST

ಕೋಲಾರ ಮೀಸಲು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸಂಬಂಧ ಕೆ.ಆರ್.ರಮೇಶ್ ಕುಮಾರ್ ಹಾಗೂ ಕೆ.ಎಚ್.ಮುನಿಯಪ್ಪ ಬಣಗಳ ಜಗಳದಲ್ಲಿ ಮೂರನೆಯವರಿಗೆ ಲಾಭ ಆಗಿದೆ. ಬೆಂಗಳೂರಿನ ಮಾಜಿ ಮೇಯರ್ ಕೆ.ಸಿ.ವಿಜಯಕುಮಾರ್ ಪುತ್ರ ಕೆ.ವಿ.ಗೌತಮ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಘೋಷಿಸಿದೆ. ಇವರ ಆಯ್ಕೆಗೆ ಈಗಾಗಲೇ ರಮೇಶ್ ಕುಮಾರ್ ಬಣದ ಒಪ್ಪಿಗೆ ಲಭಿಸಿರುವುದು ಗೊತ್ತಾಗಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಭೆ ನಡೆಸಿದ್ದಾಗ ಕೆ.ಎಚ್‌.ಮುನಿಯಪ್ಪ ಕುಟುಂಬ ಹೊರತುಪಡಿಸಿ ಯಾರಿಗೆ ಟಿಕೆಟ್ ನೀಡಿದರೂ ತಮ್ಮ ಒಪ್ಪಿಗೆ ಇರುತ್ತದೆ ಎಂಬುದಾಗಿ ಕ್ಷೇತ್ರದ ಶಾಸಕರು ಹೇಳಿದ್ದರು. ಆದರೆ, ಕೆ.ಎಚ್.ಮುನಿಯಪ್ಪ ಅವರ ನಡೆ ಏನಾಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ. ಅವರು ತಮ್ಮ ಅಳಿಯ ಕೆ.ಜಿ.ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರು‌‌‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.