ADVERTISEMENT

ಲೋಕಸಭಾ ಚುನಾವಣೆ: ರಾಜ್ಯದಲ್ಲಿ 2ನೇ ಹಂತದ ಮತದಾನ ಪ್ರಮಾಣ ಎಷ್ಟು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಮೇ 2024, 17:38 IST
Last Updated 7 ಮೇ 2024, 17:38 IST
<div class="paragraphs"><p>ಧಾರವಾಡದಲ್ಲಿ ವಿನಯ್ ಕುಲಕರ್ಣಿ ಮತದಾನ ಮಾಡಿದರು</p></div>

ಧಾರವಾಡದಲ್ಲಿ ವಿನಯ್ ಕುಲಕರ್ಣಿ ಮತದಾನ ಮಾಡಿದರು

   

ಬೆಂಗಳೂರು: ಎರಡನೇ ಹಂತದಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ಅಂತ್ಯವಾಗಿದೆ. ರಾಜ್ಯದಲ್ಲಿ ಎರಡನೇ ಹಂತದಲ್ಲಿ ಶೇ 70.03ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಬಿಸಿಲಿನ ನಡುವೆಯೂ ಅನೇಕ ಕಡೆ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ಹೈದರಾಬಾದ್ ಕರ್ನಾಟಕದ ಕೆಲವೆಡೆ ನಿರೀಕ್ಷಿಸಿದಷ್ಟು ಮತದಾನ ನಡೆದಿಲ್ಲ. ಇದಕ್ಕೆ ಭಾರಿ ಬಿಸಿಲೇ ಕಾರಣ ಎನ್ನಲಾಗಿದೆ.

ADVERTISEMENT

ಕೆಲವೆಡೆ ಮತದಾನ ಬಹಿಷ್ಕಾರ ಹಾಗೂ ಸುರಪುರ ಉಪ ಚುನಾವಣಾ ಕಣದಲ್ಲಿ ಕಾಂಗ್ರೆಸ್–ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿಯಾಗಿದ್ದು ಬಿಟ್ಟರೇ ಚುನಾವಣೆ ಬಹುತೇಕ ಅಂತ್ಯವಾಗಿದೆ.

ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಮತದಾನ?

ಚಿಕ್ಕೋಡಿ: 76.47

ಬೆಳಗಾವಿ: 71.00

ವಿಜಯಪುರ: 64.71

ಬಾಗಲಕೋಟೆ: 70.10

ಧಾರವಾಡ: 72.12

ಹಾವೇರಿ: 74.75

ದಾವಣಗೆರೆ: 76.23

ಶಿವಮೊಗ್ಗ: 76.05

ಉತ್ತರ ಕನ್ನಡ: 73.52

ಕೊಪ್ಪಳ: 69.87

ಬಳ್ಳಾರಿ: 72.35

ರಾಯಚೂರು: 61.81

ಕಲಬುರಗಿ: 61.73

ಬೀದರ್: 63.55

ರಾಜ್ಯದ ಮೊದಲನೇ ಹಂತದ ಕ್ಷೇತ್ರಗಳ ವಿವರ:

ಬೆಂಗಳೂರು ಸೆಂಟ್ರಲ್

ಬೆಂಗಳೂರು ಉತ್ತರ

ಬೆಂಗಳೂರು ದಕ್ಷಿಣ

ಬೆಂಗಳೂರು ಗ್ರಾಮೀಣ

ಮಂಡ್ಯ

ಮೈಸೂರು

ಚಿಕ್ಕಬಳ್ಳಾಪುರ

ಕೋಲಾರ

ಹಾಸನ

ತುಮಕೂರು

ಚಿತ್ರದುರ್ಗ

ದಕ್ಷಿಣ ಕನ್ನಡ

ಉಡುಪಿ– ಚಿಕ್ಕಮಗಳೂರು

ಚಾಮರಾಜನಗರ

–––

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.