ADVERTISEMENT

ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರ ತಂದಿದ್ದು ಜನಾರ್ದನ ರೆಡ್ಡಿ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 15:38 IST
Last Updated 4 ಏಪ್ರಿಲ್ 2024, 15:38 IST
<div class="paragraphs"><p>ಶ್ರೀರಾಮುಲು</p></div>

ಶ್ರೀರಾಮುಲು

   

ಬಳ್ಳಾರಿ: ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಜನಾರ್ದನ ರೆಡ್ಡಿ ಅವರೂ ಕಾರಣ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಹೇಳಿದರು. 

ಸಿರುಗುಪ್ಪ ರಸ್ತೆಯಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಯಡಿಯೂರಪ್ಪ ಅವರಿಗೆ ನೆರವಾಗಿದ್ದು, ಅವರೊಂದಿಗೆ ಕೈಜೋಡಿಸಿದ್ದು ಜನಾರ್ದನ ರೆಡ್ಡಿ ಮತ್ತು ಅರುಣಾ ಲಕ್ಷ್ಮೀ ’ ಎಂದು ಹೇಳಿದರು. 

ADVERTISEMENT

ಬಿಜೆಪಿಯನ್ನು ಅಧಿಕಾರಕ್ಕೆ ತರುವಾಗ, ಜನಾರ್ದನ ರೆಡ್ಡಿ ಜತೆಗೆ  ಶ್ರೀರಾಮುಲು, ಸೋಮಶೇಖರ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಆನಂದ್ ಸಿಂಗ್‌ ಅವರು ಪಂಚ ಪಾಂಡವರಂತೆ ಕೆಲಸ ಮಾಡಿದ್ದೇವೆ. ಈ ಮೂಲಕ ಇತಿಹಾಸ ಸೃಷ್ಟಿ ಮಾಡಿದ್ದೇವೆ ಎಂದರು.  

ಜನಾರ್ದನ ರೆಡ್ಡಿ ಚಾಣಕ್ಯನಂತೆ. ಮುಂದಾಲೋಚನೆ, ಬುದ್ಧಿಶಕ್ತಿ, ಆಲೋಚನೆಗಳಲ್ಲಿ ಅವರು ಚಾಣಕ್ಯನಿಗೆ ಹೋಲುತ್ತಾರೆ ಎಂದೂ ಶ್ರೀರಾಮುಲು ಬಣ್ಣಿಸಿದರು. 

ವಿಧಾನಸಭಾ ಚುನಾವಣೆ ವೇಳೆ ಅರುಣಾ ಲಕ್ಷ್ಮೀ ಮತ್ತು ಸೋಮಶೇಖರ್ ರೆಡ್ಡಿ ಅವರ ನಡುವಿನ ಸ್ಪರ್ಧೆಯಿಂದ ಬಳ್ಳಾರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವಂತಾಯ್ತು ಎಂದೂ ಅವರು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು. 

ಬಿಜೆಪಿ, ಕೆಆರ್‌ಪಿಪಿ, ಜೆಡಿಎಸ್‌ ಈ ಮೂರು ಪಕ್ಷಗಳೂ ಸೇರಿ ತ್ರಿಶೂಲದಂತೆ ಶಕ್ತಿಯಾಗಿ ನಿಂತಿದ್ದೇವೆ. ಈ ಚುನಾವಣೆ ಗೆಲ್ಲುತ್ತೇವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.