ADVERTISEMENT

ಕೇಂದ್ರಕ್ಕೆ ಕಟ್ಟುವ ₹100 ತೆರಿಗೆಯಲ್ಲಿ ಮರಳಿ ಸಿಗುವುದು ಕೇವಲ ₹13: ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಏಪ್ರಿಲ್ 2024, 6:05 IST
Last Updated 21 ಏಪ್ರಿಲ್ 2024, 6:05 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಕರ್ನಾಟಕ ಕಟ್ಟುವ ಪ್ರತಿ ₹100 ತೆರಿಗೆಯಲ್ಲಿ ಕರ್ನಾಟಕಕ್ಕೆ ಮರಳಿ ಸಿಗುವುದು ಕೇವಲ ₹13 ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'‌ನಲ್ಲಿ 'ಬಿಜೆಪಿ ಚೊಂಬು ಸರ್ಕಾರ' ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಪೋಸ್ಟ್ ಮಾಡಿರುವ ಸಿಎಂ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

'ಕನ್ನಡಿಗರು ಬೆವರು ಸುರಿಸಿ ದುಡಿದು ಕೇಂದ್ರ ಬಿಜೆಪಿ ಸರ್ಕಾರಕ್ಕೆ ₹100 ತೆರಿಗೆ ಕಟ್ಟಿದರೆ ಮರಳಿ ನಮಗೆ ಸಿಗುವುದು ₹13. ರಾಜ್ಯಕ್ಕೆ ಬರಬೇಕಿದ್ದ ಬರಪರಿಹಾರ, ವಿಶೇಷ ಅನುದಾನ, ನೀರಾವರಿ ಯೋಜನೆಗಳಿಗೆ ಆರ್ಥಿಕ ನೆರವಿನ ಬದಲಿಗೆ ಸಿಕ್ಕಿದ್ದು ಚೊಂಬು. ಈ ಚುನಾವಣೆಯಲ್ಲಿ ಬಿಜೆಪಿಯ ಕೈಗಳಿಗೆ ಚೊಂಬು ಕೊಟ್ಟು ಕಾಂಗ್ರೆಸ್ ಕೈಗಳಿಗೆ ಬಲತುಂಬಿ. ನಾವು ನಿಮ್ಮ ಪ್ರತಿ ಮತಕ್ಕೂ ನ್ಯಾಯ ಒದಗಿಸುತ್ತೇವೆ' ಎಂದು ಹೇಳಿದ್ದಾರೆ.

ಇದೇ ಪೋಸ್ಟ್ ಅನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಂಚಿಕೊಂಡಿದ್ದು, 'ನ್ಯಾಯಯುತವಾಗಿ ಹಂಚಿಕೆಯಾಗದ ತೆರಿಗೆಯು ದರೋಡೆಗೆ ಸಮಾನ. ಕನ್ನಡಿಗರ ಬೆವರಿಗೆ ತಕ್ಕ ಫಲ ಸಿಗುತ್ತಿಲ್ಲ. ನಾವು ಕಟ್ಟುವ ₹100ಗೆ ಕೇಂದ್ರದಿಂದ ಬರುತ್ತಿರುವುದು ಕೇವಲ ₹13. ಇದು ಪಾರದರ್ಶಕತೆ ಹಾಗೂ ಸಮಾನ ಹಂಚಿಕೆಯ ಸಮಯ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.