ಶಿರಸಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಮಂಗಳವಾರ ಶಿರಸಿ ಮಾರಿಕಾಂಬಾ ಜಾತ್ರೆ ಬಯಲಿನಲ್ಲಿ ಸಾಮಾನ್ಯರಂತೆ ಸುತ್ತಾಡಿ ಗಮನ ಸೆಳೆದರು.
ಜಾತ್ರೆ ಹಿನ್ನಲೆಯಲ್ಲಿ ದೇವಿ ವಿರಾಜಮಾನವಾದ ಗದ್ದುಗೆಗೆ ಭೇಟಿ ನೀಡಿ ಮಾರಿಕಾಂಬೆಗೆ ಉಡಿ ಸೇವೆ ಸಲ್ಲಿಸಿ, ಪೂಜೆ ಸಲ್ಲಿಸಿದರು. ಬಳಿಕ ಜಾತ್ರಾ ಪೇಟೆಯಲ್ಲಿ ಸುತ್ತಾಡಿದರು. ಬಿಡ್ಕಿ ಬಯಲಿನ ಬೀದಿಬದಿ ಅಂಗಡಿಗಳನ್ನು ವೀಕ್ಷಿಸಿ ಜಾತ್ರಾ ವಹಿವಾಟಿನ ಮಾಹಿತಿ ಪಡೆದರು. ಈ ವೇಳೆ ವ್ಯಾಪಾರಸ್ಥ ಮಹಿಳೆಯರೊಂದಿಗೆ ರುದ್ರಾಕ್ಷಿ ಮಾಲೆ, ಮೂರ್ತಿಗಳ ಕುರಿತು ಮಾಹಿತಿ ಪಡೆದಿದ್ದಲ್ಲದೇ, ಅವುಗಳ ಬಗ್ಗೆ ಕುತೂಹಲದಿಂದ ಚರ್ಚಿಸಿದರು.
ಪೇಟೆ ಸುತ್ತಾಡಿ ವಾಪಸ್ಸು ತೆರಳುವ ವೇಳೆ ಫೋಟೊ ತೆಗೆಸಿಕೊಳ್ಳುವಂತೆ ವ್ಯಾಪಾರಸ್ಥ ಮಹಿಳೆಯೋರ್ವರ ಕರೆಗೆ ಕಾರಿನಿಂದ ಇಳಿದ ಅವರು ಮಹಿಳೆ ಜತೆ ಫೋಟೊ ತೆಗೆಸಿಕೊಂಡು ಅವರ ಕುಶಲೋಪರಿ ವಿಚಾರಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ದೀಪಕ್ ದೊಡ್ಡೂರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.