ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ 22 ಅಭ್ಯರ್ಥಿಗಳ ಪೈಕಿ ಎಂಟು ಮಂದಿ ತಮ್ಮ ಉಮೇದುವಾರಿಕೆಯನ್ನು ವಾಪಸ್ ಪಡೆದಿದ್ದು, ಅಂತಿಮವಾಗಿ ಕಣದಲ್ಲಿ 14 ಮಂದಿ ಹುರಿಯಾಳುಗಳು ಇದ್ದಾರೆ.
ಉಮೇದುವಾರಿಕೆ ವಾಪಸ್ ಪಡೆಯಲು ಸೋಮವಾರ ಕೊನೆಯ ದಿನವಾಗಿತ್ತು. ಪಕ್ಷೇತರ ಅಭ್ಯರ್ಥಿಳಾಗಿ ಕಣಕ್ಕಿಳಿದಿದ್ದ ನಟರಾಜು, ಬಲ್ಲಯ್ಯ (ಬಾಲು), ಸಣ್ಣಸ್ವಾಮಿ, ಸುಭಾಷ್ ಚಂದ್ರ ಕೆ., ನಿಂಗರಾಜು ಜೆ, ಸಿ.ಶಂಕರ ಅಂಕನಶೆಟ್ಟಿಪುರ, ರಾಜು ಕೆ., ಎಂ.ನಾಗೇಂದ್ರಬಾಬು ಅವರು ಸೋಮವಾರ ಉಮೇದುವಾರಿಕೆ ಹಿಂಪಡೆದಿದ್ದಾರೆ.
ಅಂತಿಮ ಕಣದಲ್ಲಿ
ಎಂ.ಕೃಷ್ಣಮೂರ್ತಿ (ಬಿಎಸ್‌ಪಿ),
ಎಸ್.ಬಾಲರಾಜು (ಬಿಜೆಪಿ),
ಸುನಿಲ್ ಬೋಸ್ (ಕಾಂಗ್ರೆಸ್),
ಸಿ.ಎಂ.ಕೃಷ್ಣ (ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ),
ನಿಂಗರಾಜು ಎಸ್. (ಕರ್ನಾಟಕ ಜನತಾ ಪಕ್ಷ),
ಪ್ರಸನ್ನ ಕುಮಾರ್ ಬಿ. (ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ),
ಕಂದಳ್ಳಿ ಮಹೇಶ್ (ಕರ್ನಾಟಕ ರಾಷ್ಟ್ರ ಸಮಿತಿ),
ಸುಮ ಎಸ್. (ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷ)
ಸ್ವತಂತ್ರ (ಪಕ್ಷೇತರ) ಅಭ್ಯರ್ಥಿಗಳು
ಕದಂಬ ನಾ. ಅಂಬರೀಷ್,
ನಿಂಗರಾಜು. ಜಿ,
ಪಟಾಸ್ ಪ್ರದೀಪ್ ಕುಮಾರ್ ಎಂ,
ಮಹದೇವಸ್ವಾಮಿ. ಬಿ.ಎಂ (ಪಂಪಿ),
ಜಿ.ಡಿ.ರಾಜಗೋಪಾಲ (ಎಚ್.ಡಿ.ಕೋಟೆ),
ಎಚ್.ಕೆ.ಸ್ವಾಮಿ ಹರದನಹಳ್ಳಿ ಅವರು ಅಂತಿಮ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ನಾಗ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.