ADVERTISEMENT

ಪ್ರಜ್ವಲ್ ಹೀನ ಕೃತ್ಯದ ಬಗ್ಗೆ ತಿಳಿದೂ ಮೋದಿ-ಶಾ ಟಿಕೆಟ್ ನೀಡಿದ್ದಾರೆ: ಸುಪ್ರಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಏಪ್ರಿಲ್ 2024, 10:11 IST
Last Updated 30 ಏಪ್ರಿಲ್ 2024, 10:11 IST
ಸುಪ್ರಿಯಾ ಶ್ರೀನೇತ್‌
ಸುಪ್ರಿಯಾ ಶ್ರೀನೇತ್‌   

ಬೆಂಗಳೂರು: ಹಾಸನ ಕ್ಷೇತ್ರದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂಬ ಪ್ರಕರಣದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಈ ಬಗ್ಗೆ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ (ಎಸ್ಐಟಿ) ತನಿಖೆಯನ್ನು ಚುರುಕುಗೊಳಿಸಿದೆ.

ವಿಡಿಯೊದಲ್ಲಿ ಇದ್ದಾರೆ ಎನ್ನಲಾದ ಐವರು ಸಂತ್ರಸ್ತೆಯರನ್ನು ಕರೆಯಿಸಿಕೊಂಡಿದ್ದ ಎಸ್ಐಟಿ ತನಿಖಾ ತಂಡದ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ ಎಂದು ಗೊತ್ತಾಗಿದೆ. ಇದರ ಬೆನ್ನಲ್ಲೇ ಪ್ರಕರಣ ಸಂಬಂಧ ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನೇತ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

‘ಒಬ್ಬ ವ್ಯಕ್ತಿ ಇಷ್ಟು ಕ್ರೂರ, ಇಷ್ಟು ರಾಕ್ಷಸನಾಗಿದ್ದಾನೆ ಎಂದರೆ ಅದನ್ನು ಯೋಚಿಸಲೂ ಸಾಧ್ಯವಿಲ್ಲ. ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಸಾವಿರಾರು ವಿಡಿಯೊಗಳು ನೂರಾರು ಮಹಿಳೆಯರ ಬದುಕನ್ನೇ ನಾಶ ಮಾಡಿವೆ. ಮನೆಗೆಲಸ ಮಾಡುವವರು, ಪಕ್ಷದ ಕಾರ್ಯಕರ್ತೆಯರು, ಜಿಲ್ಲಾ ಪಂಚಾಯತ್ ಸದಸ್ಯೆ ಸೇರಿದಂತೆ ಯಾರನ್ನೂ ಈ ರಾಕ್ಷಸ ಬಿಟ್ಟಿಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

‘ನರೇಂದ್ರ ಮೋದಿಯವರು ಪ್ರಜ್ವಲ್ ರೇವಣ್ಣ ಅವರ ಪರ ಮತ ಯಾಚಿಸಿದ ದಿನ, ಅವರೊಂದಿಗೆ ವೇದಿಕೆ ಹಂಚಿಕೊಂಡ ದಿನ, ಬೆನ್ನು ತಟ್ಟಿ ಪ್ರಶಂಸಿಸಿದ ದಿನ ಮೋದಿಗೆ ಪ್ರಜ್ವಲ್ ರೇವಣ್ಣರ ಎಲ್ಲಾ ಕರ್ಮಕಾಂಡಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿತ್ತು. ಈ ಎಲ್ಲಾ ಹೀನ ಕೃತ್ಯಗಳ ಬಗ್ಗೆ ತಿಳಿದೂ ಮೋದಿ - ಅಮಿತ್ ಶಾ ಅವರು ಪ್ರಜ್ವಲ್ ರೇವಣ್ಣರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ಪ್ರಜ್ವಲ್ ರೇವಣ್ಣ ಅವರೊಂದಿಗೆ ಪ್ರಧಾನಿ ಮೋದಿ ವೇದಿಕೆ ಹಂಚಿಕೊಂಡಿರುವ ಫೋಟೊಗಳನ್ನು ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.