ADVERTISEMENT

ವಿಧಾನಸಭಾ ಚುನಾವಣೆ | ಬೀದರ್‌ನಲ್ಲಿ ಶಾಂತಿಯುತ ಮತದಾನ: ಬಿಸಿಲ ಝಳಕ್ಕೆ ತತ್ತರಿಸಿದ ಜನ

ಪ್ರಜಾಪ್ರಭುತ್ವದ ಹಬ್ಬ: ಯುವ ಮತದಾರರಿಂದ ಉತ್ಸಾಹದಿಂದ ಮತದಾನ

​ಪ್ರಜಾವಾಣಿ ವಾರ್ತೆ
Published 10 ಮೇ 2023, 10:02 IST
Last Updated 10 ಮೇ 2023, 10:02 IST
ಬೀದರ್‌ ದಕ್ಷಿಣ ವಿಧಾನ ಕ್ಷೇತ್ರದ ಬೀದರ್‌ ತಾಲ್ಲೂಕಿನ ಅಷ್ಟೂರ್‌ ಗ್ರಾಮದ ಮತಗಟ್ಟೆ 26ರಲ್ಲಿ ಮತದಾನಕ್ಕೆ ಸಾಲಿನಲ್ಲಿ ನಿಂತಿದ್ದ ಜನ
ಬೀದರ್‌ ದಕ್ಷಿಣ ವಿಧಾನ ಕ್ಷೇತ್ರದ ಬೀದರ್‌ ತಾಲ್ಲೂಕಿನ ಅಷ್ಟೂರ್‌ ಗ್ರಾಮದ ಮತಗಟ್ಟೆ 26ರಲ್ಲಿ ಮತದಾನಕ್ಕೆ ಸಾಲಿನಲ್ಲಿ ನಿಂತಿದ್ದ ಜನ   

ಬೀದರ್: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ ನಿಧಾನವಾಗಿ ಆರಂಭವಾಗಿರುವ ಮತದಾನ ಮಧ್ಯಾಹ್ನದ ನಂತರವೂ ಮಂದಗತಿಯಲ್ಲಿ ಸಾಗಿದೆ. ಈವರೆಗೆ ಔರಾದ್‌ನಲ್ಲಿ ಗರಿಷ್ಠ ಶೇ 43.5 ರಷ್ಟು ಜಿಲ್ಲೆಯಲ್ಲಿ ಸರಾಸರಿ ಶೇಕಡ 34.63ರಷ್ಟು ಮತದಾನವಾಗಿದೆ.

ಬೆಳಿಗ್ಗೆ 7ರಿಂದ 9 ಗಂಟೆ ವರೆಗೆ ಬಸವಕಲ್ಯಾಣ ಕ್ಷೇತ್ರದಲ್ಲಿ ಶೇ 11 ರಷ್ಟು, ಹುಮನಾಬಾದ್‌ನಲ್ಲಿ ಶೇ 6 ರಷ್ಟು, ಬೀದರ್‌ ದಕ್ಷಿಣದಲ್ಲಿ ಶೇ 7 ರಷ್ಟು, ಬೀದರ್‌ನಲ್ಲಿ ಶೇ 6.24 ರಷ್ಟು, ಭಾಲ್ಕಿಯಲ್ಲಿ ಶೇ 8.36 ರಷ್ಟು, ಔರಾದ್‌ನಲ್ಲಿ ಶೇ7 ರಷ್ಟು ಜನ ಮತ ಚಲಾಯಿಸಿದ್ದಾರೆ.

ಬೆಳಿಗ್ಗೆ 9 ರಿಂದ 11 ಗಂಟೆ ವರೆಗೆ ಬಸವಕಲ್ಯಾಣದಲ್ಲಿ ಶೇ 19.8 ರಷ್ಟು, ಹುಮನಾಬಾದ್‌ನಲ್ಲಿ ಶೇ 20.87 ರಷ್ಟು, ಬೀದರ್‌ ದಕ್ಷಿಣದಲ್ಲಿ ಶೇ18.2 ರಷ್ಟು, ಬೀದರ್‌ನಲ್ಲಿ ಶೇ 18.05 ರಷ್ಟು, ಭಾಲ್ಕಿಯಲ್ಲಿ ಶೇ 24.73 ಹಾಗೂ ಔರಾದ್‌ನಲ್ಲಿ ಶೇ 21.79 ರಷ್ಟು, ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಬಸವಕಲ್ಯಾಣದಲ್ಲಿ ಶೇ 32 ರಷ್ಟು, ಹುಮನಾಬಾದ್‌ನಲ್ಲಿ ಶೇ 36.28 ರಷ್ಟು, ಬೀದರ್‌ ದಕ್ಷಿಣದಲ್ಲಿ ಶೇ 24.2ರಷ್ಟು, ಬೀದದರ್‌ನಲ್ಲಿ ಶೇ30.12 ರಷ್ಟು, ಭಾಲ್ಕಿಯಲ್ಲಿ ಶೇ 40.82 ರಷ್ಟು, ಔರಾದ್‌ನಲ್ಲಿ ಶೇ 43.5 ರಷ್ಟು ಜನ ಮತದಾನ ಮಾಡಿದ್ದಾರೆ.

ADVERTISEMENT

ರಾಜ್ಯ ವಿಧಾನಸಭೆ ಚುನಾವಣೆಗೆ ನಡೆದ ಚುನಾವಣೆಯಲ್ಲಿ ಯುವ ಮತದಾರರು ಉತ್ಸಾಹದಿಂದ ಮತದಾನ ಮಾಡಿದರೆ, ಶತಾಯುಷಿಗಳು ಬದುಕಿನ ಕೊನೆಯ ಕಾಲಘಟ್ಟದಲ್ಲಿ ತಮ್ಮ ಹಕ್ಕು ಚಲಾಯಿಸಿ ಕರ್ತವ್ಯ ಪ್ರಜ್ಞೆ ಮೆರೆದರು. ಬೆಳಿಗ್ಗೆಯಿಂದ ರಣ ಬಿಸಿಲು ಮತದಾರರನ್ನು ಕಾಡಿತು. ಬಿಸಿಲ ಝಳ ಹಾಗೂ ಸೆಖೆಯಿಂದ ಜನ ತತ್ತರಿಸಿದ್ದು ಜಿಲ್ಲೆಯ ಮತಗಟ್ಟೆಗಳಲ್ಲಿ ಕಂಡ ಬಂದಿತು.

301 ಸೂಕ್ಷ್ಮ ಮತಗಟ್ಟೆಗಳಲ್ಲಿ 278 ಮತಗಟ್ಟೆಗಳಿಗೆ ಕೇಂದ್ರೀಯ ಅರೆಸೇನಾ ಪಡೆಗಳನ್ನು ನಿಯೋಜಿಸಿದ್ದರಿಂದ 950 ಮತಗಟ್ಟೆಗಳಲ್ಲಿ ಸಿಸಿ ಟಿವಿ ಮತ್ತು ಕ್ಯಾಮೆರಾ ಅಳವಡಿಸಿರುವ ಕಾರಣ ರಾಜಕೀಯ ಪುಢಾರಿಗಳ ಕೊನೆಯ ಕ್ಷಣದ ಯಾವುದೇ ಆಟ ನಡೆಯಲಿಲ್ಲ. ಭದ್ರತಾ ಪಡೆಯ ಸಿಬ್ಬಂದಿ 100 ಮೀಟರ್‌ ಅಂತರದಲ್ಲಿ ಯಾರಿಗೂ ನಿಲ್ಲಲು ಅವಕಾಶ ಕಲ್ಪಿಸಿರಲಿಲ್ಲ. ಮತಗಟ್ಟೆಯಿಂದ ದೂರದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.