ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು ತಮ್ಮ ಸ್ಥಿರಹಾಗೂ ಚರಾಸ್ತಿಗಳ ಒಟ್ಟು ಮೌಲ್ಯ ₹ 24,46,37,874 ಎಂದು ಪ್ರಮಾಣಪತ್ರದಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ.
ಮಂಜು ಹೆಸರಿನಲ್ಲಿ ₹ 12,49,49,908 ಮೌಲ್ಯದ ಆಸ್ತಿ, ಪತ್ನಿ ತಾರಾ ಹೆಸರಿನಲ್ಲೂ ₹10, 68, 21, 303 ಮೌಲ್ಯದ ಆಸ್ತಿ ಇದೆ. ₹ 2,88,60,107 ಸಾಲ ಇರುವುದಾಗಿ ತಿಳಿಸಿದ್ದಾರೆ.
ಮಂಜು ಬಳಿ 1500 ಗ್ರಾಂ ಚಿನ್ನ ಹಾಗೂ 6.50 ಕೆ.ಜಿ ಬೆಳ್ಳಿ ಇದ್ದರೇ, ಪತ್ನಿ ಒಂದು ಕೆ.ಜಿ ಚಿನ್ನ, ಎರಡೂವರೆ ಕೆ.ಜಿ ಬೆಳ್ಳಿ ಹೊಂದಿದ್ದಾರೆ. ಒಂದು ಮಾರುತಿ ವ್ಯಾನ್, ಒಂದು ಬೈಕ್ , ಇನ್ನೋವಾ, ಫಾರ್ಚ್ಯೂನರ್ ಕಾರ್ ಇದೆ. ಷೇರು ನಲ್ಲಿ ₹56 ಸಾವಿರ ಹೂಡಿಕೆ ಮಾಡಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ಘೋಷಿಸಿದ್ದ ಒಟ್ಟು ಆಸ್ತಿ ₹ 22.35 ಕೋಟಿ. ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.