ಮಂಗಳೂರು: ನಾನು ಎಲ್ಲೆಡೆಯು ಪ್ರಚಾರಕ್ಕೆ ಹೋಗಿದ್ದೇನೆ. ಮೋದಿ ಅವರು ಮತ್ತೊಮ್ಮೆಪ್ರಧಾನಿ ಆಗುವುದು ನಿಶ್ಚಿತ ಎಂದು ಕೇಂದ್ರ ಸಚಿವ ಸುರೇಶ ಪ್ರಭು ಹೇಳಿದರು.
ದೇಶದ ಅಭಿವೃದ್ದೀಗೆ ಪ್ರಧಾನಿ ಸಾಕಷ್ಟು ಶ್ರಮಿಸಿದ್ದಾರೆ. ಹಣಕಾಸು, ಉದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೇಶ ಮಹತ್ತರ ಸಾಧನೆ ಮಾಡಿದೆ ಎಂದರು.
ಕೌಶಲ ಅಭಿವೃದ್ಧಿ ಯೋಜನೆ, ಆಯುಷ್ನಾನ ಭಾರತ್, ಸ್ವಚ್ಛ ಭಾರತ ಸೇರಿದಂತೆ ಎಲ್ಲ ರಂಗಗಳಲ್ಲಿ ಸಾಧನೆ ಮಾಡಿದೆ. ₹8.59ಲಕ್ಷ ಕೋಟಿ ರೈಲ್ವೆ ಬಜೆಟ್ ಮಂಡಿಸಲಾಗಿತ್ತು. ಐದು ವರ್ಷಗಳಲ್ಲಿ ಹಂತಹಂತವಾಗಿ ಯೋಜನೆ ಕೈಗೆತ್ತಿಕೊಳ್ಳಲಾಯಿತು. ರೈಲ್ವೆ ಯೋಜನೆಗಳು70 ವರ್ಷದಲ್ಲಿ 3 ಲಕ್ಷ ಕೋಟಿ ಇತ್ತು. ಕರ್ನಾಟಕದಲ್ಲಿ ಅತಿ ಹೆಚ್ಚು ಅನುದಾನ ನೀಡಲಾಗಿದೆ. ಇನ್ನೂ 100 ವಿಮಾನನಿಲ್ದಾಣ ನಿರ್ಮಿಸಲಾಗುತ್ತಿದ್ದು, 200 ವಿಮಾನ ನಿಲ್ದಾಣಗಳನಿರ್ಮಾಣ ಆಗಲಿವೆ. ವಿದೇಶಾಂಗ ನೀತಿ ಅತ್ಯುತ್ತಮವಾಗಿದೆ. ದಾಖಲೆಯ ರಫ್ತು ಮಾಡಲಾಗಿದೆ. 540ಬಿಲಿಯನ್ ಡಾಲರ್ ರಫ್ತು ಮಾಡಲಾಗಿದೆ ಎಂದರು.
ಉದ್ಯಮಗಳ ಬೆಳವಣಿಗೆಗೆ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಕೃಷಿ ರಫ್ತು ನೀತಿ ಸಿದ್ಧಪಡಿಸಲಾಗಿದೆ. ಮತ್ಸ್ಯೋದ್ಯಮದ ಮೌಲ್ಯವರ್ಧನೆಗೆ ಗಮನ ನೀಡಲಾಗಿದೆ. ಇದರಿಂದ ಉದ್ಯೋಗ ಸೃಷ್ಟಿಸಲಾಗುತ್ತಿದೆ. ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಗಮನ ನೀಡಲಾಗಿದ್ದು, ಉಡಾನ್ ಯೋಜನೆ ಆರಂಭಿಸಲಾಗಿದೆ. ಕಾಫಿ, ಮಸಾಲೆ, ಟೀ ಸೇರಿದಂತೆ ಹಲವು ಉತ್ಪನ್ನಗಳ ರಫ್ತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ದೇಶದ ಜನರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ನಿರ್ಧಾರ ಕೈಗೊಂಡಿದ್ದಾರೆ. ನಳಿನ್ ಕುಮಾರ್ ಕಟೀಲ್ ಕೂಡ ಸಾಕಷ್ಟು ಕೆಲಸ ಮಾಡಿದ್ದಾರೆ. ಮುಂದಿನ ಸರ್ಕಾರದಲ್ಲಿ ನಳಿನ್ ಕುಮಾರ್ ಕಟೀಲ್ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದು ಹೇಳಿದರು.
ಜೆಟ್ ಏರವೇಸ್ ಸಮಸ್ಯೆ ಹಣಕಾಸಿಗೆ ಸಂಬಂಧಿಸಿದೆ. ಬ್ಯಾಂಕ್ ಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಉದ್ಯೋಗಗಳ, ಪ್ರಯಾಣಿಕರ ಹಿತರಕ್ಷಣೆಗೆ ಗಮನ ನೀಡಲಾಗುತ್ತಿದೆ ಎಂದರು.
ಮಂಗಳೂರು ವಿಮಾನ ನಿಲ್ದಾಣದ ಖಾಸಗೀಕರದ ಕುರಿತು ಇದುವರೆಗೆ ಯಾವುದೇ ನಿರ್ಧಾರ ಆಗಿಲ್ಲ. ಚಿಕ್ಕಮಗಳೂರಿನಲ್ಲಿ ಮಸಾಲೆ ಪಾರ್ಕ್ ಮಾಡುವುದ ಸೇರಿದಂತೆ ರೈತರ ಎಲ್ಲ ರೀತಿಯ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿವ ಮೂಲಕ ರೈತರಿಗೆ ಆದಾಯ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ವಿಮಾನ ಸೌಕರ್ಯದ ಆಧುನೀಕರಣಕ್ಕೆ ಒತ್ತು ನೀಡಲಾಗಿದೆ. ಗ್ಲೋಬಲ್ ಏವಿಯೇಷನ್ ಸಮಿಟ್ ಮೂಲಕ ಈ ನಿಟ್ಟಿನಲ್ಲಿ ರೂಪುರೇಷೆ ಹಾಕಲಾಗಿದೆ ಎಂದರು.
ನಳಿನ್ ಕುಮಾರ್ ಕಟೀಲ್, ಸಂಜೀವ ಮಠಂದೂರು, ರವಿಶಂಕರ ಮಿಜಾರ್, ವೇದವ್ಯಾಸ ಕಾಮತ್, ಯೋಗೀಶ ಭಟ್ ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.