ಬೆಂಗಳೂರು: ರಾಜರಾಜೇಶ್ವರಿ ನಗರ(ಆರ್.ಆರ್.ನಗರ) ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮುನಿರತ್ನ ಗೆಲುವು ಸಾಧಿಸಿದ್ದಾರೆ.
ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ಡುಕೊಂಡ ಮುನಿರತ್ನ ಸಮೀಪ ಸ್ಪರ್ಧಿ ಬಿಜೆಪಿಯ ತುಳಸಿ ಮುನಿರಾಜುಗೌಡ ಅವರಿಗಿಂತ 40 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.
ಒಟ್ಟು 18 ಸುತ್ತುಗಳ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಅಧಿಕೃತ ಘೋಷಣೆ ಬಾಕಿಯಿದೆ. ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗುತ್ತಾ ಸಂಭ್ರಮಾಚರಿಸುತ್ತಿದ್ದಾರೆ.
ಸಾವಿರಕ್ಕೂ ಹೆಚ್ಚು ನೋಟಾ ದಾಖಲಾಯಿತು. ಪಕ್ಷೇತರ ಅಭ್ಯರ್ಥಿಗಳ ಪೈಕಿ ಹುಚ್ಚ ವೆಂಕಟ್ ನೋಟಾಕ್ಕಿಂತಲೂ ಕಡಿಮೆ, 562 ಮತಗಳನ್ನು ಪಡೆದರು.
ಚುನಾವಣಾ ಅಕ್ರಮ ನಡೆದಿರುವ ಕಾರಣಕ್ಕೆ ಮೇ 15ರಂದು ನಡೆಯಬೇಕಿದ್ದ ಮತದಾನವನ್ನು ಮುಂದೂಡಲಾಗಿತ್ತು. ಇದೇ 28ರಂದು ನಿಗದಿಯಾಗಿದ್ದ ಚುನಾವಣೆಯಲ್ಲಿ ಶೇ 54.20 ರಷ್ಟು ಮತದಾನ ನಡೆದಿತ್ತು.
12 ಸುತ್ತುಗಳ ನಂತರ:
ಕಾಂಗ್ರೆಸ್- ಮುನಿರತ್ನ- 92,625
ಬಿಜೆಪಿ- ತುಳಸಿ ಮುನಿರಾಜುಗೌಡ - 49,216
ಜೆಡಿಎಸ್-ಜಿ.ಎಚ್. ರಾಮಚಂದ್ರ- 40,469
ಪಕ್ಷೇತರ– ಹುಚ್ಚ ವೆಂಕಟ್- 562
ನೋಟಾ- 1,852
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.