ADVERTISEMENT

ಮೌನ ಮಾತಾಗುವ ಸಮಯ...

ವಸುಧೇಂದ್ರ, ಬೆಂಗಳೂರು
Published 21 ಏಪ್ರಿಲ್ 2018, 19:30 IST
Last Updated 21 ಏಪ್ರಿಲ್ 2018, 19:30 IST
ವಸುಧೇಂದ್ರ
ವಸುಧೇಂದ್ರ   

ಚುನಾವಣೆ ಎನ್ನುವುದು ಯುದ್ಧವಲ್ಲ, ಮತದಾನ ಶಿಕ್ಷೆಯೂ ಅಲ್ಲ. ಅದೊಂದು ಸಂಭ್ರಮ. ಬದಲಾವಣೆ ಬಯಸುವ ಮನಸ್ಸುಗಳ ಮೌನ ಮಾತಾಗುವ ಪರ್ವಕಾಲ. ಮತದಾನ ಎನ್ನುವುದು ಪ್ರತಿ ಪ್ರಜೆಯ ಪ್ರಾಥಮಿಕ ಹಕ್ಕು ಮತ್ತು ಕರ್ತವ್ಯ. ಮತದಾನ ಮಾಡದೇ ಇದ್ದಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿನ ಯಾವ ಬದಲಾವಣೆಗಳಿಗೂ ನಾವೂ ಬಾಧ್ಯರಾಗುವುದಿಲ್ಲ.

‘ರಾಜಕೀಯವೊಂದು ಹೊಲಸು ವ್ಯವಸ್ಥೆ’ ಎನ್ನುವುದು ಅನೇಕರ ಅಭಿಪ್ರಾಯ. ಆದರೆ, ರಾಜಕೀಯದಲ್ಲಿ ಕೆಲವೊಮ್ಮೆ ಉತ್ತಮ ಬದಲಾವಣೆಗಳು ಸಾಧ್ಯವಾಗುತ್ತವೆ. ಅಂತವುಗಳನ್ನು ಸಂಭ್ರಮಿಸಲು ನಾವು ಮತ ಚಲಾಯಿಸಬೇಕು. ಈಚಿನ ವರ್ಷಗಳಲ್ಲಿ ಸಮರ್ಥ ನಾಯಕರ ಆಯ್ಕೆ ಕಷ್ಟವಾಗುತ್ತಿದೆ. ಹಾಗಂತ ನೋಟಾಗೆ (NOTA) ವೋಟ್‌ ಮಾಡುವುದರಿಂದ ಯಾವ ಬದಲಾವಣೆಯನ್ನೂ ನಿರೀಕ್ಷಿಸಲಾಗದು.

ರಾಜಕೀಯ ಅಜ್ಞಾನದಿಂದ ಹೊರಬಂದು ಅಭ್ಯರ್ಥಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಿನ್ನೆಲೆ ತಿಳಿದುಕೊಳ್ಳಬೇಕು. ಅಭ್ಯರ್ಥಿಯ ಪೂರ್ವಾಪರ ತಿಳಿಯದೆ ಯಾವುದೋ ಒತ್ತಡಗಳಿಗೆ ಮಣಿದು ಮತಗಟ್ಟೆಗಳ ಮುಂದೆ ನಿಂತಾಗ ಪಕ್ಷಗಳ ಅಬ್ಬರದ ಪ್ರಚಾರವಷ್ಟೇ ಮುಖ್ಯವಾಗಿ ಬಿಡುತ್ತದೆ. ಅಭ್ಯರ್ಥಿಯ ಅರ್ಹತೆ ಅಲ್ಲಿ ಗೌಣವಾಗುತ್ತದೆ. ನಮ್ಮ ಪ್ರಸ್ತುತ ಸಮಸ್ಯೆಗಳಿಗೆ ಪರಿಹಾರವಾಗಬಲ್ಲ ಅಭ್ಯರ್ಥಿ ಯಾರೆಂಬುದನ್ನುನಿರ್ಧರಿಸಿಕೊಂಡು ಮತಗಟ್ಟೆಗೆ ತೆರಳಬೇಕು.

ADVERTISEMENT

‘ನನ್ನ ಒಂದು ಮತದಿಂದ ಏನಾಗುತ್ತದೆ’ ಎನ್ನುವ ಉಡಾಫೆಗಿಂತ, ವ್ಯವಸ್ಥೆಯನ್ನು ಬದಲಾಯಿಸುವ ಶಕ್ತಿ ನನಗಿದೆ. ಬದಲಾವಣೆಯ ಕಾರಣಕರ್ತ ನಾನು ಎಂಬ ಹೆಮ್ಮೆ ಮತ್ತು ಖುಷಿಯಿಂದ ಮತ ಚಲಾಯಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.