ವಿಜಯಪುರ:ವಿಜಯಪುರ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ರಮೇಶ ಜಿಗಜಿಣಗಿ ನಾಮಪತ್ರ ಸಲ್ಲಿಸಿದ್ದು, ಒಟ್ಟು ₹ 50.41 ಕೋಟಿ ಮೊತ್ತದ ಆಸ್ತಿ ಘೋಷಿಸಿಕೊಂಡಿದ್ದಾರೆ.
2014ರ ಲೋಕಸಭಾ ಚುನಾವಣೆ ಸಂದರ್ಭ ಆಸ್ತಿ ಘೋಷಣೆಗೆ ಹೋಲಿಸಿದರೆ, ಜಿಗಜಿಣಗಿ ಆಸ್ತಿಯಲ್ಲಿ ಆರು ಪಟ್ಟು ಹೆಚ್ಚಳಗೊಂಡಿದೆ. ಆಗ ಒಟ್ಟು ಆಸ್ತಿ ಮೌಲ್ಯ ₹ 8,30,29,670 ರಷ್ಟಿತ್ತು.
ಸ್ಥಿರಾಸ್ತಿಯಲ್ಲಿ ಹೆಚ್ಚಿನ ಹೆಚ್ಚಳ ಗೋಚರಿಸಿಲ್ಲ. ಚರಾಸ್ತಿಯಲ್ಲಿ ಭೂಮಿ ಕಳೆದುಕೊಂಡಿದ್ದರೂ; ಮೌಲ್ಯ ಹಲವು ಪಟ್ಟು ಹೆಚ್ಚಿದೆ. ತಮ್ಮ ಒಡೆತನದ ಆಸ್ತಿಯ ಮಾಹಿತಿಯನ್ನಷ್ಟೇ ನೀಡಿದ್ದಾರೆ. ಮಕ್ಕಳ ಆಸ್ತಿಯ ಮಾಹಿತಿ ನಮೂದಿಸಿಲ್ಲ.
ಚರಾಸ್ತಿ: ₹ 3.76 ಕೋಟಿ
ಸ್ಥಿರಾಸ್ತಿ: ₹ 46.65 ಕೋಟಿ
₹ 11.76,000 ವಿವಿಧ ಬ್ಯಾಂಕ್ ಖಾತೆಗಳಲ್ಲಿ
₹ 2,95 ಕೋಟಿ ಹಂಪಿ ಹೆರಿಟೇಜ್ ವೈನ್ ಯಾರ್ಡ್‌ನಲ್ಲಿ ಹೂಡಿಕೆ
₹ 51.07,872 ಸಂಡ್ರಿ ಪರ್ಸನ್ ಡೆಟರ್ಸ್‌ಗೆ ನೀಡಿರುವುದು
₹ 13 ಲಕ್ಷ ಮೊತ್ತದ ಹುಂಡೈ ಕ್ರೇಟಾ ಕಾರು ಹೊಂದಿದ್ದಾರೆ
7 ತೊಲೆ ಬಂಗಾರದ ಆಭರಣ, 2 ಕೆ.ಜಿ. ಚಿನ್ನಾಭರಣ
₹ 5.07 ಕೋಟಿ ಮೊತ್ತದ ಮನೆ
54 ಎಕರೆ ಭೂಮಿ ಒಡೆಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.