ಮಲಯಾಳ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರು ತೆಲುಗು ಚಿತ್ರವೊಂದರಲ್ಲಿ ಪೊಲೀಸ್ ಪಾತ್ರ ನಿರ್ವಹಿಸುತ್ತಿದ್ದಾರೆ. ‘ನುವ್ವೆ ನಾ ಪ್ರಾಣಮಣಿ’ ಹಳ್ಳಿಗಾಡಿನ ಕಥಾಹಂದರವುಳ್ಳ ರೊಮ್ಯಾಂಟಿಕ್ ಸಿನಿಮಾ. ಹೊಸಬರಾದ ಸೂರಜ್ ಮತ್ತು ಕವಿತಾ ರಾಧೆಶ್ಯಾಮ್ ಈ ಚಿತ್ರದ ನಾಯಕ, ನಾಯಕಿ.
‘ಈ ಚಿತ್ರದಲ್ಲಿ ರೂರಲ್ ಲವ್ ಸ್ಟೋರಿಯನ್ನು ಮಜಬೂತಾಗಿ ತೋರಿಸಲಾಗಿದೆ. ಆ್ಯಕ್ಷನ್, ಕಾಮಿಡಿ ಎಲ್ಲವೂ ಇವೆ. ಮೋಹನ್‌ಲಾಲ್ ಸರ್ ಈ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರೆ. ಅವರಂತಹ ದೊಡ್ಡ ನಟರ ಜೊತೆಗೆ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ತುಂಬ ಖುಷಿ ಆಗುತ್ತಿದೆ’ ಎಂದಿದ್ದಾರೆ ನಟಿ ಕವಿತಾ.
ಅಲಿ, ಜಯಪ್ರಕಾಶ್ ರೆಡ್ಡಿ ಮೊದಲಾದವರು ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಸುರೇಶ್ ವಂಶಿ ಎಂಬ ಹೊಸಬರು ನಿರ್ದೇಶಿಸುತ್ತಿದ್ದಾರೆ. ಮೋಹಲ್ ಲಾಲ್ ಅವರು 20 ವರ್ಷಗಳ ಬಳಿಕ ಮತ್ತೊಮ್ಮೆ ತೆಲುಗು ಚಿತ್ರಕ್ಕೆ ಬಣ್ಣ ಹಚ್ಚುತ್ತಿರುವುದು ವಿಶೇಷ. ಅವರು ಈ ಹಿಂದೆ (1994) ‘ಗಾಂಢೀವಂ’ ತೆಲುಗು ಚಿತ್ರದಲ್ಲಿ ನಟಿಸಿದ್ದರು. ಪ್ರಿಯದರ್ಶನ್ ನಿರ್ದೇಶನವಿದ್ದ ಈ ಚಿತ್ರದ ಗೀತೆಯೊಂದರಲ್ಲಿ ಅವರು ಅತಿಥಿ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.