ADVERTISEMENT

ಜ್ಯೋತಿಕಾ ಮರುಪ್ರವೇಶ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2015, 19:30 IST
Last Updated 9 ಮಾರ್ಚ್ 2015, 19:30 IST
ಜ್ಯೋತಿಕಾ ಮರುಪ್ರವೇಶ
ಜ್ಯೋತಿಕಾ ಮರುಪ್ರವೇಶ   

ವಿವಾಹವಾದ ನಂತರ ಚಿತ್ರ ರಂಗದಿಂದ ದೂರ ಉಳಿದಿದ್ದ ನಟಿ ಜ್ಯೋತಿಕಾ ಮಲಯಾಳದ ‘ಹೌ ಓಲ್ಡ್‌ ಆರ್‌ ಯು’ ಚಿತ್ರದ ರಿಮೇಕ್‌ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪತಿ ಸೂರ್ಯ ಅವರೊಂದಿಗೆ ಸೇರಿ ಚಿತ್ರವನ್ನು ನಿರ್ಮಿಸುತ್ತಿರುವ ಜ್ಯೋತಿಕಾ ಈ ಚಿತ್ರದ ಮೂಲಕ ಏಳು ವರ್ಷದ ನಂತರ ಚಿತ್ರರಂಗಕ್ಕೆ ಮತ್ತೆ ಮರುಪ್ರವೇಶ ಪಡೆಯಲಿದ್ದಾರೆ.

ರಿಮೇಕ್‌ ಚಿತ್ರಕ್ಕೆ ‘36 ವಯಾಧಿನಿಲೆ’ ಎಂದು ಹೆಸರು ಇಡಲಾಗಿದೆ. ಈ ಚಿತ್ರದ ಕಥೆ ಮಧ್ಯ ವಯಸ್ಕ ಮಹಿಳೆಯ ಸುತ್ತಲೇ ಇರುತ್ತದೆ. ಅದರಲ್ಲೂ ಜ್ಯೋತಿಕಾ ಅವರಿಗೂ 36 ವರ್ಷವಾಗಿರುವುದರಿಂದ ಚಿತ್ರದ ಹೆಸರು ಚಿತ್ರಕ್ಕೆ ಹೇಳಿ ಮಾಡಿಸಿದಂತೆ ಇದೆ ಎಂದು ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆಂದು ಮೂಲಗಳು ಐಎಎನ್‌ಎಸ್‌ ಸುದ್ದಿಸಂಸ್ಥೆಗೆ ತಿಳಿಸಿವೆ.

ನಟ ಸೂರ್ಯ ಅವರ ‘ಹೋಂ ಬ್ಯಾನರ್‌ 2ಡಿ ಪ್ರೊಡಕ್ಷನ್‌ ಹೌಸ್‌’ನಿಂದ ಈ ಚಿತ್ರವನ್ನು ನಿರ್ಮಿಸಲಾಗುತ್ತಿದ್ದು, ಚಿತ್ರಕ್ಕೆ ಹೆಸರನ್ನು ಸೂಚಿಸುವಲ್ಲಿ ಸೂರ್ಯ ಅವರ ಪಾತ್ರವೂ ಇದೆಯಂತೆ. ಈ ಚಿತ್ರಕ್ಕೆ ಹೆಸರನ್ನು ಇಡಲು ಸೂರ್ಯ ಚಿತ್ರದ ನಿರ್ದೇಶಕರೊಡನೆ ಸಾಕಷ್ಟು ಸಮಯವನ್ನೂ ಕಳೆದಿದ್ದಾರೆ.

ಏಪ್ರಿಲ್‌ನಲ್ಲಿ ತೆರೆಕಾಣಲು ಸಿದ್ಧತೆ ನಡೆಸುತ್ತಿರುವ ಈ ಚಿತ್ರದಲ್ಲಿ ರಹಮಾನ್‌, ಅಭಿರಾಮಿ ಹಾಗೂ ಸಂಜಯ್‌ ಭಾರತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಉಳಿದ ಭಾಷೆಗಳಲ್ಲಿ ಈ ಚಿತ್ರವನ್ನು ರಿಮೇಕ್‌ ಮಾಡಲು ಸೂರ್ಯ ಈಗಾಗಲೇ ಅನುಮತಿ ಪಡೆದಿದ್ದಾರೆ. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.