ಟೀ ಅಂಗಡಿ ಸಾಯಿರಾಬಾನು ಮತ್ತು ಗುಜರಿ ಅಂಗಡಿಯ ಮಾಲೀಕ ಮೋಹನ ಕುಮಾರ ದಂಪತಿಯ ಪ್ರೇಮ ಪ್ರಸಂಗವನ್ನೂ, ಸಂಕಟದ ಕಥನವನ್ನೂ ತೆರೆದಿಟ್ಟಿದೆ ‘13’. ಕೆ.ನರೇಂದ್ರಬಾಬು ಅವರ ನಿರ್ದೇಶನದಲ್ಲಿ, ರಾಘವೇಂದ್ರ ರಾಜ್ಕುಮಾರ್, ಶ್ರುತಿ, ಪ್ರಮೋದ್ ಶೆಟ್ಟಿ ಅಭಿನಯಿಸಿರುವ ಚಿತ್ರವಿದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಒಂದು ನೈಜ ಘಟನೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಈ ಚಿತ್ರಕಥೆಯನ್ನು ನರೇಂದ್ರ ಬಾಬು ಹೆಣೆದಿದ್ದಾರೆ.
ಅಂತರ್ಜಾತೀಯ ಪ್ರೇಮ ಕಥೆಯಿದು. ಗಂಡ- ಹೆಂಡತಿ ಅಂದರೆ ಹೀಗಿರಬೇಕು ಎನ್ನುವಂತಿದ್ದ ದಂಪತಿಗಳಿಬ್ಬರೂ ತಮ್ಮದಲ್ಲದ ತಪ್ಪಿಗೆ ಜೀವನವಿಡೀ ಹೇಗೆಲ್ಲಾ ಕಷ್ಟಪಡುತ್ತಾರೆ ಎಂಬುದನ್ನು ಹೇಳುವ, ಮನುಷ್ಯ ಸಂಬಂಧಗಳನ್ನು ಬೆಸೆಯುವ ಕಥೆಯಿದು ಎಂದಿದ್ದಾರೆ ನಿರ್ದೇಶಕರು.
ರಾಘವೇಂದ್ರ ರಾಜ್ ಕುಮಾರ್ ಅವರದ್ದು ಮೋಹನ ಕುಮಾರ ಪಾತ್ರ. ಶ್ರುತಿ ಅವರು ಇಲ್ಲಿ ಸಾಯಿರಾಬಾನು ಆಗಿದ್ದಾರೆ. ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸಂಪತ್ ಕುಮಾರ್, ಮಂಜುನಾಥ್, ಮಂಜುನಾಥಗೌಡ ಚಿತ್ರದ ನಿರ್ಮಾಪಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.