ADVERTISEMENT

2019 ಹಿನ್ನೋಟ| ಬಾಲಿವುಡ್‌: ನೆಲಕಚ್ಚಿದವು ಬಿಗ್‌ ಬಜೆಟ್ ಸಿನಿಮಾಗಳು

ಪ್ರಫುಲ್ಲ
Published 29 ಡಿಸೆಂಬರ್ 2019, 19:30 IST
Last Updated 29 ಡಿಸೆಂಬರ್ 2019, 19:30 IST
ಜಬ್ರಿಯಾ ಜೋಡಿ
ಜಬ್ರಿಯಾ ಜೋಡಿ   

ದೊಡ್ಡ ತಾರಾಗಣ, ದೊಡ್ಡ ಸೆಟ್‌, ದೊಡ್ಡ ಬ್ಯಾನರ್‌ಗಳ ಮೂವಿಗಳು ತೆರೆಗೆ ಬಂದರೆ ಸಾಕು ಅಭಿಮಾನಿಗಳ ದಂಡು ಸಿನಿಮಾ ಮಂದಿರಗಳಿಗೆ ಬರುತ್ತಿದ್ದರು. ರಿಲೀಸ್‌ ಆದ ಕೆಲವೇ ದಿನಗಳಲ್ಲಿ ಬ್ಲಾಕ್‌ ಬಾಸ್ಟರ್‌ ಹಿಟ್‌ ಆಗುತ್ತಿತ್ತು. ಆದರೆ, ಕಾಲ ಬದಲಾಗಿದೆ. ಈಗ ವೀಕ್ಷಕರು ಬಹಳ ಸೂಕ್ಷ್ಮವಾಗಿ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಚಿತ್ರದ ಎಲ್ಲಾ ಅಂಶಗಳನ್ನು ವಿಶ್ಲೇಷಿಸುತ್ತಾರೆ. ಹಾಗಾಗಿ 2019ನೇ ಸೋತ ಚಿತ್ರಗಳ ಪಟ್ಟಿಯಲ್ಲಿ ದೊಡ್ಡ ಬಜೆಟ್‌ ಹಾಗೂ ದೊಡ್ಡ–ದೊಡ್ಡ ಸ್ಟಾರ್‌ಗಳ ಸಿನಿಮಾಗಳೇ ಹೆಚ್ಚು.

ಕಳಂಕ್‌

ಕರಣ್‌ ಜೋಹರ್‌ ನಿರ್ಮಾಣದ ‘ಕಳಂಕ್‌’ ಸಿನಿಮಾ ನಿರೀಕ್ಷಿಸಿದಷ್ಟು ಯಶಸ್ಸು ಕಂಡಿಲ್ಲ. ಸಿನಿಮಾದಲ್ಲಿಸಂಜಯ್‌ ದತ್ತ್‌, ಮಾಧುರಿ ದೀಕ್ಷಿತ್‌, ವರುಣ್‌ ಧವನ್‌, ಆಲಿಯಾ ಭಟ್‌, ಸೋನಾಕ್ಷಿ ಸಿನ್ಹಾ ಮತ್ತು ಆದಿತ್ಯ ರಾಯ್‌ ಕಪೂರ್‌ನಂತಹ ಬಹು ದೊಡ್ಡ ತಾರಗಣವಿತ್ತು. ಆದರೂ ಕೂಡ ₹150 ಕೋಟಿ ವೆಚ್ಚದ ಸಿನಿಮಾ ಗಳಿಸಿದ್ದು ಮಾತ್ರ ₹81 ಕೋಟಿ.

ADVERTISEMENT

ಭಾರತ್‌

ಈದ್ ಸಂದರ್ಭದಲ್ಲಿ ಬಿಡುಗಡೆಯಾದ ಸಲ್ಮಾನ್‌ ಖಾನ್ ಮಹತ್ವಾಕಾಂಕ್ಷೆಯ ಚಿತ್ರ ‘ಭಾರತ್‌’ ಸಿನಿಮಾ ಹೂಡಿಕೆಯಗಿಂತ ಹೆಚ್ಚು ಗಳಿಸಿದೆ. ಆದರೆ ಸಾಮಾನ್ಯವಾಗಿ ಭಾಯ್‌ಜಾನ್‌ ಸಿನಿಮಾಗಳಾದ ದಭಾಂಗ್‌, ರೆಡಿ ಚಿತ್ರಗಳ ಸಂಪಾದನೆಗೆ ಹೋಲಿಸಿದರೆ ‘ಭಾರತ್‌‘ ವಿಫಲವಾಗಿದೆ. ₹130 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈಸಿನಿಮಾ ಗಳಿಸಿದ್ದು ₹209 ಕೋಟಿ.

ಖಂದಾನಿ ಶಫಾಖಾನ್‌

ಸೋನಾಕ್ಷಿ ಸಿನ್ಹಾ, ರ‍್ಯಾಪರ್‌ ಬಾದಶಾ ಮತ್ತು ವರುಣ್‌ ಶರ್ಮಾ ತಾರಗಣ ಹೊಂದಿದ್ದ ಕಾಮಿಡಿ ಡ್ರಾಮಾ ‘ಖಂದಾನಿ ಶಫಾಖಾನ್‌’ ಚಿತ್ರ ಬಾಲಿವುಡ್‌ನ ಬಿಗ್‌ ಫ್ಲಾಪ್‌ ಚಿತ್ರಗಳಲ್ಲಿ ಒಂದು. ₹26 ಕೋಟಿ ಬಜೆಟ್‌ನ ಈ ಚಿತ್ರ ಸಂಪಾದಿಸಿದ್ದು ಕೇವಲ ₹5 ಕೋಟಿ. ಹಾಕಿದ ಹಣ ಕೂಡ ಮರಳಿ ಬರಲಿಲ್ಲ.

ಪಲ್‌ ಪಲ್‌ ದಿಲ್‌ ಕೆ ಪಾಸ್‌

‘ಪಲ್‌ ಪಲ್‌ ದಿಲ್‌ ಕೆ ಪಾಸ್‌’ ಚಿತ್ರದ ಮೂಲಕ ಡಿಯೋಲ್‌ ಕುಟುಂಬದ ಕುಡಿ ಮತ್ತು ಸನ್ನಿ ಡಿಯೋಲ್‌ ಪುತ್ರ ಕರಣ್‌ ಡಿಯೋಲ್‌ ಹಾಗೂ ಸಹೇರ್‌ ಬಂಬ್ಬಾ ಬಾಲಿವುಡ್‌ಗೆ ಪಾದರ್ಪಣೆ ಮಾಡಿದರು. ಬಂದಷ್ಟೇ ವೇಗವಾಗಿ ಥಿಯೇಟರ್‌ಗಳಿಂದ ಸಿನಿಮಾ ಹೋಯಿತು. ಸಿನಿಮಾ ಬಂದದ್ದು, ಹೋದದ್ದು ಸುದ್ದಿಯಾಗಲೇ ಇಲ್ಲ! ₹60 ಕೋಟಿ ಬಂಡವಾಳದ ಸಿನಿಮಾ ಗಳಿಸಿದ್ದು ಕೇವಲ ₹10.3 ಕೋಟಿ.

ದ ಜೋಯಾ ಫ್ಯಾಕ್ಟರ್‌

‘ಕಾರವಾನ್‌’ ಚಿತ್ರದ ಮೂಲಕ ಮಲಯಾಳ ನಟ ದುಲ್ಕರ್‌ ಸಲ್ಮಾನ್‌ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಅದು ಅಷ್ಟೊಂದು ಯಶಸ್ವಿಯಾಗಿರಲಿಲ್ಲ. ದುಲ್ಕರ್‌ ಎರನೇ ಸಿನಿಮಾ ‘ದ ಜೋಯಾ ಫ್ಯಾಕ್ಟರ್‌’ ಕೂಡ ದಯನೀಯವಾಗಿ ನೆಲಕಚ್ಚಿದೆ. ಬಾಲಿವುಡ್‌ನಲ್ಲಿ ಜಾದೂ ಮಾಡುವಲ್ಲಿ ದುಲ್ಕರ್‌ ವಿಫಲರಾಗಿದ್ದಾರೆ. ಇದರಲ್ಲಿ ಸೋನಮ್‌ ಕಪೂರ್‌ ನಾಯಕಿಯಾಗಿದ್ದರು. ಹಾಕಿದ ₹30 ಕೋಟಿಯಲ್ಲಿ ಮರಳಿ ಬಂದಿದ್ದು ₹4.91 ಕೋಟಿಯಷ್ಟೇ!

ಲಾಲ್‌ ಕಪ್ತಾನ್‌

ನೆಟ್‌ಫ್ಲಿಕ್ಸ್‌ನ ಸೇಕ್ರೆಡ್‌ ಗೇಮ್ಸ್‌ ವೆಬ್‌ ಸಿರೀಸ್‌ ಮೂಲಕ ಮತ್ತೆ ಫಾರ್ಮ್‌ಗೆ ಮರಳಿದ್ದಸೈಫ್‌ ಆಲಿ ಖಾನ್‌ಗೆ ‘ಲಾಲ್‌ ಕಪ್ತಾನ್‌’ ಚಿತ್ರ ಭಾರಿ ನಿರಾಸೆ ಮೂಡಿಸಿದೆ. ಸೈಫ್‌ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಲಾಲ್‌ ಕಪ್ತಾನ್‌’ ಬಾಲಿವುಡ್‌ ಬಿಗ್‌ ಫ್ಲಾಪ್‌ಗಳಲ್ಲಿ ಒಂದಾಗಿದೆ. ₹40ಕೋಟಿ ರೂಪಾಯಿ ಬಂಡವಾಳ ಹೂಡಿದ್ದ ಸಿನಿಮಾ ಕೇವಲ ₹3ಕೋಟಿಗೆ ತೃಪ್ತಿ ಪಡಬೇಕಾಗಿದೆ.

ವಾರ್‌

ಹೃತಿಕ್‌ ರೋಷನ್‌ ಮತ್ತು ಟೈಗರ್‌ ಶ್ರಾಫ್‌ ಸ್ಕ್ರೀನ್‌ ಶೇರ್‌ ಮಾಡಿದ ಮೊಟ್ಟ ಮೊದಲ ಸಿನಿಮಾ ‘ವಾರ್‌’. ಜಬರ್‌ದಸ್ತ್‌ ಆ್ಯಕ್ಷನ್‌, ಡಾನ್ಸ್‌ ಇದ್ದರೂ ಬಾಲಿವುಡ್‌ ಫ್ಲಾಪ್‌ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ₹150 ಕೋಟಿ ಬಜೆಟ್‌ನ ಚಿತ್ರ ₹100 ಕೋಟಿ ತಲುಪುವದರಲ್ಲಿ ಏದುಸಿರು ಬಿಟ್ಟಿದೆ.

ಮರ್ಜಾವಾ

‘ಏಕ್‌ ವಿಲನ್‌’ ಚಿತ್ರದಲ್ಲಿ ಮೋಡಿ ಮಾಡಿದ್ದ ಸಿದ್ದಾರ್ಥ್‌ ಮತ್ತು ರಿತೇಶ್‌ ದೇಶ್‌ಮುಖ್‌ ಜೋಡಿಗೆ ಪ್ರೇಕ್ಷಕರು ಉಘೇ ಉಘೇ ಎಂದಿದ್ದರು. ಅದೇ ಜೋಡಿ ‘ಮರ್ಜಾವಾ’ ಸಿನಿಮಾದಲ್ಲಿ ಕಮಾಲ್ ಮಾಡಲು ಒಂದಾಗಿತ್ತು. ಆದರೆ, ಈ ಚಿತ್ರಕ್ಕೆ ಅಭಿಮಾನಿಗಳ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ಆದರೆನೋರಾ ಫತೇಹಿ ‘ಏಕ್‌ ತೋ ಕಮ್‌ ಜಿಂದಗಾನಿ’ ಹಾಡು ಸೂಪರ್ ಹಿಟ್‌ ಆಗಿತ್ತು. ‘ಮರ್ಜಾವಾ’ ಚಿತ್ರ ಲಾಭ ಗಳಿಸದಿದ್ದರೂ ಭಾರಿ ನಷ್ಟವನ್ನೇನೂ ಅನುಭವಿಸಿಲ್ಲ ಎನ್ನುವುದು ಸಮಾಧಾನದ ವಿಷಯ.

ಮೋತಿ ಚೂರ್‌ ಚಕ್ನಾಚೂರ್‌

ನವಾಜುದ್ದೀನ್‌ ಸಿದ್ಧೀಕಿ ಮತ್ತು ಸುನಿಲ್‌ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಅಭಿನಯದ ‘ಮೋತಿ ಚೂರ್‌ ಚಕ್ನಾಚೂರ್‌’ ಚಿತ್ರ ಕೂಡ 2019ನೇ ಸೋಲು ಕಂಡ ಸಿನಿಮಾಗಳಲ್ಲಿ ಒಂದು. ಈ ಚಿತ್ರಕ್ಕೆ ನಿರ್ಮಾಕರು ₹18 ಕೋಟಿ ಬಂಡವಾಳ ಹೂಡಿದ್ದರು. ಮರಳಿದ್ದು ಕೇವಲ ₹2 ಕೋಟಿ.

ಸಾಂಡ್‌ ಕೀ ಆಂಖ್‌

ತಾಪ್ಸಿ ಪನ್ನು ಮತ್ತು ಭೂಮಿ ಪಡ್ನೇಕರ್‌ ಅಭಿನಯದ ‘ಸಾಂಡ್‌ ಕೀ ಆಂಖ್‌’ ಚಿತ್ರ ಬಿಡುಗಡೆಗೂ ಮುನ್ನ ಭಾರೀ ಸದ್ದು ಮಾಡಿತ್ತು. ಸಿನಿಮಾ ಫ್ಲಾಪ್‌ ಪಟ್ಟಿಗೆ ಸೇರದಿದ್ದರೂ, ಕೇವಲ ಶೇಕಡಾ 1ರಷ್ಟು ಲಾಭ ಗಳಿಸಿದೆ. ₹18 ಕೋಟಿ ಬಜೆಟ್‌ನ ಚಿತ್ರ, ಬಾಕ್ಸ್‌ ಆಫೀಸ್‌ನಲ್ಲಿ ₹19.85 ಕೋಟಿ ಬಾಚಿಕೊಂಡಿದೆ. ತಾಪ್ಸಿ ಮತ್ತು ಭೂಮಿ ಪಾಡ್ನೇಕರ್‌ ಅಭಿನಯಕ್ಕೆ ವಿಮರ್ಶಕರು ಮೆಚ್ಚುಗೆ ಸೂಚಿಸಿದ್ದಾರೆ.

ದ ಸ್ಕೈ ಇಸ್‌ ಪಿಂಕ್‌

ದೇಸಿ ಗರ್ಲ್‌ ಪ್ರಿಯಾಂಕ ಚೋಪ್ರಾ ಮತ್ತು ಫರಾನ್‌ ಅಖ್ತಾರ್‌ ಅಭಿನಯದ ‘ದಿ ಸ್ಕೈ ಇಸ್‌ ಪಿಂಕ್‌’ ಸಿನಿಮಾದ ಮೇಲೆ ಚಿತ್ರತಂಡ ಬಹಳ ನಿರೀಕ್ಷೆ ಇಟ್ಟಿತ್ತು.ಆದರೆ ಸಿನಿಮಾ ಮಾತ್ರ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ₹30 ಕೋಟಿ ಬಂಡವಾಳದೊಂದಿಗೆ ತೆರೆಗೆ ಬಂದ ಚಿತ್ರ ₹20 ಕೋಟಿಗೆ ಸಮಾಧಾನ ಪಟ್ಟುಕೊಂಡಿದೆ.

ಪಾಣಿಪತ್‌

ಬಿಡುಗಡೆಗೂ ಮುನ್ನವೇ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದ ಆಶುತೋಷ್‌ ಗೋವಾರಿಕರ್‌ ನಿರ್ದೇಶನದ ಬಹುನಿರೀಕ್ಷಿತ ‘ಪಾಣಿಪತ್‌’ ಚಿತ್ರ ವಿವಾದದ ಸುಳಿಗೆ ಸಿಲುಕಿ ಬೆಳ್ಳಿ ತೆರೆಯಲ್ಲಿ ಮಕಾಡೆ ಮಲಗಿತು. ಈ ಚಿತ್ರದಲ್ಲಿ ಅರ್ಜುನ್‌ ಕಪೂರ್‌, ಕೃತಿ ಸನೋನ್‌ ಮತ್ತು ಸಂಜಯ್‌ ದತ್ತ್‌ ಮುಖ್ಯ ಪಾತ್ರದಲ್ಲಿದ್ದರೂ ಚಿತ್ರ ಯಶಸ್ವಿಯಾಗಲಿಲ್ಲ.₹80 ಕೋಟಿಯ ಈ ಸಿನಿಮಾ ಗಳಿಸಿದ್ದು ಕೇವಲ ₹2.9 ಕೋಟಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.