ಮುಂಬೈ : ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಆ್ಯಪ್‌ಗಳ ಮೂಲಕ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 19ರಂದು ಬಂಧನಕ್ಕೊಳಗಾಗಿರುವ ರಾಜ್ ಕುಂದ್ರಾ ಕಚೇರಿಯಲ್ಲಿ 51 ಅಶ್ಲೀಲ ವಿಡಿಯೋಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
35 ಹಾಟ್‌ಶಾಟ್ಸ್ ಲೋಗೋ ಮತ್ತು ಬಾಲಿಫೇಮ್ ಲೋಗೋ ಪತ್ತೆಯಾಗಿದೆ. ಮುಂಬೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಉದ್ಯಮಿ ರಾಜ್ ಕುಂದ್ರಾ ಬಂಧನ ಅವಧಿಯನ್ನು 14 ದಿನ ವಿಸ್ತರಿಸಿದೆ .
ಕುಂದ್ರಾ ಇಂಥ 119 ಅಶ್ಲೀಲ ಚಿತ್ರಗಳನ್ನು ಒಬ್ಬರಿಗೆ ಸುಮಾರು 10.2 ಲಕ್ಷ ಡಾಲರ್ ಮೊತ್ತಕ್ಕೆ ಮಾರಾಟ ಮಾಡುವ ಯೋಜನೆ ಹೊಂದಿದ್ದರು ಎಂದೂ ಪೊಲೀಸರು ಆರೋಪಿಸಿದ್ದಾರೆ.
ಇಂಥ ಚಿತ್ರಗಳ ನಿರ್ಮಾಣ ಸಂಬಂಧಿಸಿ ಕುಂದ್ರಾ ಆರ್ಮ್ಸ್‌ಪ್ರೈಮ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಸ್ಥಾಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.